ETV Bharat / bharat

ಪ್ರೀತಿಸಿದ ಹುಡುಗಿಗಾಗಿ ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿದ ಗೆಳೆಯ..

ಪ್ರೀತಿಸಿದ ಹುಡುಗಿಯ ಮೇಲೆ ಕಣ್ಣು ಹಾಕಿದ್ದಕ್ಕೆ ಕೋಪಗೊಂಡು ಸ್ನೇಹಿತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಿಜಾಮಾಬಾದ್ ಜಿಲ್ಲೆಯ ನಂದಿಪೇಟ್ ಮಂಡಲದಲ್ಲಿ ನಡೆದಿದೆ.

A friend who killed his friend
ಪ್ರೀತಿಸಿದ ಹುಡುಗಿಗಾಗಿ ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿದ ಗೆಳೆಯ
author img

By

Published : Mar 2, 2023, 10:24 PM IST

ನಿಜಾಮಾಬಾದ್(ತೆಲಂಗಾಣ): ಪ್ರೀತಿಸಿದ ಹುಡುಗಿಯ ಮೇಲೆ ಕಣ್ಣು ಹಾಕಿದ್ದಕ್ಕೆ ಕೋಪಗೊಂಡು ಸ್ನೇಹಿತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಿಜಾಮಾಬಾದ್ ಜಿಲ್ಲೆಯ ನಂದಿಪೇಟ್ ಮಂಡಲದಲ್ಲಿ ನಡೆದಿದೆ. ಈ ಘಟನೆಯು ಐದು ತಿಂಗಳ ಹಿಂದೆ ನಡೆದ್ದು, ಬುಧವಾರ ತಡರಾತ್ರಿ ಬೆಳಕಿಗೆ ಬಂದಿದೆ.

ಹತ್ಯೆ ಸಂಚು ರೂಪಿಸಿದ ಸ್ನೇಹಿತ: ನಂದಿಪೇಟೆ ಎಸ್​ಐ ಶ್ರೀಕಾಂತ್ ಮಾತನಾಡಿ, ಆಂಧ್ರನಗರ ಪಂಚಾಯಿತಿ ವ್ಯಾಪ್ತಿಯ ವೆಂಕಟೇಶ್ವರ ಕಾಲೋನಿಯಲ್ಲಿ ಅಲೆಮಾರಿ ಕುಟುಂಬಗಳು (ಯಾನಾಡುಗಳು) ಇವೆ. ಅಲ್ಲಿ ವೆಂಕಟರಮಣ ಅವರ ಕಿರಿಯ ಮಗ ಕಾರ್ತಿಕ್ (22) ಮತ್ತು ಬಾಪಟ್ಲ ರಾಜು (22) ಸ್ನೇಹಿತರಾಗಿದ್ದರು. ಪ್ರಕಾಶಂ ಜಿಲ್ಲೆಯ ಯುವತಿಯೊಬ್ಬಳು ರಾಜು ಮನೆಗೆ ಆಗಾಗ ಬರುತ್ತಿದ್ದಳು. ಇಬ್ಬರೂ ಅವಳನ್ನು ಪ್ರೀತಿಸುತ್ತಿದ್ದರು. ರಾಜು ಅವಳನ್ನು ಮದುವೆಯಾಗಲು ಬಯಸಿದ್ದ. ತನ್ನ ಭಾವಿ ಪತ್ನಿಯನ್ನು ಪ್ರೀತಿಸಿದ್ದಕ್ಕಾಗಿ ಕಾರ್ತಿಕ್ ಮೇಲೆ ಅವನಿಗೆ ಕೋಪ ಬಂದಿದೆ. ಈತ ತನ್ನ ಕಿರಿಯ ಸಹೋದರ ಬೊಜ್ಜ ಹರೀಶ್ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ.

2022ರ ಸೆಪ್ಟೆಂಬರ್ 20 ರಂದು ಕಾರ್ತಿಕ್ ನಂದಿಪೇಟೆಯ ಉಪನಗರದ ಎಲ್ಲಮ್ಮಗುಡಿಯಲ್ಲಿ ಪಾನಮತ್ತರಾಗಿದ್ದರು. ಸಮೀಪದ ವಿಜಯನಗರದ ಕೋಟೆಗೆ ಕರೆದೊಯ್ದು ಕಾರ್ತಿಕ್ ತಲೆಯ ಮೇಲೆ ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ವಿಜಯನಗರದ ಗುಟ್ಟಾ ಪ್ರದೇಶದಲ್ಲಿ ಬಂಡೆಗಲ್ಲುಗಳ ನಡುವೆ ಮೃತದೇಹವನ್ನು ಬಿಟ್ಟು ಹೋಗಿದ್ದಾರೆ. ನಂತರ ರಾಜು ಆ ಯುವತಿಯನ್ನು ಮದುವೆಯಾಗಿದ್ದಾನೆ.

ತಾಯಿ ಚಿನ್ನಾ ವೆಂಕಟರಮಣ ಅವರು, ಮಗ ಸಿಗದ ಕಾರಣ, ದುಡಿಯಲು ಆಂಧ್ರಪ್ರದೇಶಕ್ಕೆ ಹೋಗಿರಬೇಕು ಎಂದುಕೊಂಡಿದ್ದರು. ಚಿನ್ನಾ ಅವರ ಪತಿ ಈಗಾಗಲೇ ಮೃತಪಟ್ಟಿದ್ದಾರೆ. ಆದರೂ ಹಿರಿಯ ಮಗನ ಸಹಾಯದಿಂದ ಅಕ್ಕಪಕ್ಕದ ಮನೆಯವರನ್ನು ವಿಚಾರಿಸುತ್ತಿದ್ದರು. ಕಾರ್ತಿಕ್‌ನನ್ನು ಕೊಂದು ವಿಜಯನಗರದ ಗುಟ್ಟಾ ಪ್ರದೇಶದಲ್ಲಿ ಎಸೆದಿದ್ದಾರೆ ಎಂದು ಸ್ಥಳೀಯ ಕೆಲವು ಯುವಕರು ಅವರ ತಾಯಿಗೆ ತಿಳಿಸಿದ್ದಾರೆ.

ತಲೆಮರೆಸಿಕೊಂಡ ಆರೋಪಿಗಳು: ಮಾಹಿತಿ ತಿಳಿಸಿದ ಪೊಲೀಸರು ಗುಟ್ಟಾ ಪ್ರದೇಶವನ್ನು ಪರಿಶೀಲಿಸಿದಾಗ ಯುವಕನ ಪಂಜರ ಪತ್ತೆಯಾಗಿದೆ. ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ನಾಗಮೋಹನ್ ರಾವ್ ಅವರೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕಾರ್ತಿಕ್​ನ ಮೃತದೇಹ ಎಂಬುದು ದೃಢಪಟ್ಟಿದೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಎಸ್‌ಐ ತಿಳಿಸಿದ್ದಾರೆ.

ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಕೊಲೆ ಪ್ರಕರಣ: ಪ್ರಮುಖ ಆರೋಪಿಗೆ ಶಿಕ್ಷೆ, ಮೂವರನ್ನು ಖುಲಾಸೆಗೊಳಿಸಿದ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.