ETV Bharat / bharat

ಅರೆ ನಗ್ನ ಫೋಟೋ ಹರಿಬಿಡುವುದಾಗಿ ಇನ್‌ಸ್ಟಾಗ್ರಾಮ್‌ ಯುವತಿಯಿಂದ ಬೆದರಿಕೆ: ಕಟ್ಟಡದಿಂದ ಜಿಗಿದು ಯುವಕ ಆತ್ಮಹತ್ಯೆ

author img

By

Published : Oct 13, 2022, 11:01 PM IST

ಸಾಮಾಜಿಕ ಜಾಲತಾಣದಲ್ಲಿ ಅರೆಬೆತ್ತಲೆ ಫೋಟೋ ವೈರಲ್ ಮಾಡುತ್ತೇನೆ ಎಂಬ ಬೆದರಿಕೆಯಿಂದ ಪುಣೆಯ 19 ವರ್ಷದ ಯುವಕ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

a-19-year-old-youth-in-pune-committed-suicide-due-to-sextortion
ಅರೆ ನಗ್ನ ಫೋಟೋಗಳ ಹರಿಬಿಡುವುದಾಗಿ ಇನ್‌ಸ್ಟಾಗ್ರಾಮ್‌ ಯುವತಿಯಿಂದ ಬೆದರಿಕೆ: ಕಟ್ಟಡದಿಂದ ಜಿಗಿದು ಯುವಕ ಆತ್ಮಹತ್ಯೆ

ಪುಣೆ (ಮಹಾರಾಷ್ಟ್ರ): ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಗೆ ಅರೆ ನಗ್ನ ಫೋಟೋಗಳು ಕಳುಹಿಸಿ, ನಂತರ ಆಕೆ ಅದೇ ಫೋಟೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರಿಂದ 19 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ ದತ್ತವಾಡಿ ಪ್ರದೇಶದ ನಿವಾಸಿ ಪ್ರೀತಮ್ ಗಾಯಕ್ವಾಡ್ (ಹೆಸರು ಬದಲಾಯಿಸಲಾಗಿದೆ) ಎಂಬ ಯುವಕನೇ ಸಾವಿಗೆ ಶರಣಾದ ಯುವಕ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಪ್ರೀತಮ್​ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೀತ್ ಯಾದವ್ ಎಂಬ ಐಡಿ ಇರುವ ಯುವತಿಯೊಂದಿಗೆ ಪರಿಚಯವಾಗಿದೆ. ಈ ಪರಿಚಯ ಸಲುಗೆಗೆ ತಿರುಗಿ, ಅರೆಬೆತ್ತಲೆ ಫೋಟೋಗಳನ್ನು ಕೇಳಿದಾಗ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದಾದ ಬಳಿಕ ಹಣ ನೀಡುವಂತೆ ಪ್ರೀತಮ್ ಗಾಯಕ್ವಾಡ್​ಗೆ ಬೇಡಿಕೆ ಇಡಲಾಗಿದೆ. ಇಲ್ಲದಿದ್ದರೆ ನಿನ್ನ ಅರೆಬೆತ್ತಲೆ ಫೋಟೋಗಳನ್ನು ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ. ಇದರಿಂದ ಆನ್​ ಲೈನ್​ನಲ್ಲಿ 4,500 ರೂ.ಗಳನ್ನು ಗಾಯಕ್ವಾಡ್​ ಪಾವತಿಸಿದ್ದಾರೆ. ಇದಾದ ನಂತರ ನಿರಂತರವೂ ಬೆದರಿಕೆ ಹಾಗೂ ಹಣಕ್ಕೆ ಬೇಡಿಕೆ ಇಡಲಾಗಿದೆ.

ಹೀಗಾಗಿ ಬೇಸತ್ತು ಪ್ರೀತಮ್ ಸೆ.30ರಂದು ಮಧ್ಯಾಹ್ನದ ಸುಮಾರಿಗೆ ತಾನು ವಾಸವಿದ್ದ ಕಟ್ಟಡದಿಂದ ಜಿಗಿದಿದ್ದಾರೆ. ಆಗ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮೃತಪಟ್ಟಿರುವುದಾಗಿ ಎಂದು ವೈದ್ಯರು ಘೋಷಿಸಿದ್ದಾರೆ.

ಮೃತ ಯುವಕ ಐಟಿಐ ಮುಗಿಸಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿ ಹೆಸರಲ್ಲಿ ಪರಿಚಯವಾದ ನಂತರ ವಾಟ್ಸ್​ಆ್ಯಪ್​ ​​ ನಂಬರ್​ ಸಹ ಶೇರ್​ ಮಾಡಿಕೊಳ್ಳಲಾಗಿತ್ತು. ಈ ಕರೆ ಮಾಡಿದ ಸಮಯದಲ್ಲಿ ಮೊದಲು ಮಹಿಳೆ ವಿವಸ್ತ್ರಗೊಳ್ಳುತ್ತಿದ್ದರು. ನಂತರ ಅದೇ ರೀತಿ ಮಾಡಲು ಯುವಕನಿಗೆ ಕೇಳಿದ್ದರು. ಅಲ್ಲದೇ, ಅರೆಬೆತ್ತಲೆ ಫೋಟೋಗಳನ್ನು ಹಂಚಿಕೊಂಡ ನಂತರ ಹಣ ಬೇಡಿಕೆ ಹಾಗೂ ಬೆದರಿಕೆ ಹಾಕಲು ಶುರು ಮಾಡಲಾಗಿತ್ತು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಸ್ನೇಹ, ಸಲುಗೆ.. ಮಾಯಾಂಗಿನಿಯ ನಗ್ನ ದರ್ಶನಕ್ಕೆ 20 ಲಕ್ಷ ಕಳ್ಕೊಂಡ ನಿವೃತ್ತ ಪ್ರಾಧ್ಯಾಪಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.