ETV Bharat / bharat

ಸ್ಥಳೀಯ ಚುನಾವಣೆಯಲ್ಲಿ ಗೆದ್ದ 90ರ ವೃದ್ಧೆ.. ಠೇವಣಿ ಕಳೆದುಕೊಂಡ ಎದುರಾಳಿಗಳು - tamil nadu local body election

ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ನಡೆದ ಸ್ಥಳೀಯ ಚುನಾವಣೆಯ ಫಲಿತಾಂಶ ಬಹಿರಂಗಗೊಂಡಿದ್ದು, 90 ವರ್ಷದ ವೃದ್ಧೆಯೊಬ್ಬರು ಭರ್ಜರಿ ಗೆಲುವು ದಾಖಲು ಮಾಡಿದ್ದಾರೆ.

Panchayat President
Panchayat President
author img

By

Published : Oct 13, 2021, 3:29 PM IST

Updated : Oct 13, 2021, 3:38 PM IST

ತಿರುನೆಲ್ವೇಲಿ(ತಮಿಳುನಾಡು): ತಮಿಳುನಾಡಿನ ಕೆಲವೊಂದು ಜಿಲ್ಲೆಗಳಲ್ಲಿ ಕಳೆದ ಅಕ್ಟೋಬರ್​​ 6 ಮತ್ತು 9ರಂದು ನಡೆದಿದ್ದ ಮತದಾನದ ಮತ ಎಣಿಕೆ ನಿನ್ನೆ ನಡೆಯಿತು. ಈ ವೇಳೆ ಕೆಲ ಅಪರೂಪದ ರಿಸಲ್ಟ್​ ಹೊರಬಿದ್ದಿವೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆರಿಯನೈಕೆನ್ಪಾಳಂ (Periyanaickenpalayam) ವಾರ್ಡ್​​ನಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಡಿ. ಕಾರ್ತಿಕ್​ ಕೇವಲ ಒಂದು ಮತ ಪಡೆದುಕೊಂಡಿದ್ದರೆ, ತಿರುನೆಲ್ವೇಲಿಯಲ್ಲಿ 90ರ ವೃದ್ಧೆ ಭರ್ಜರಿ ಗೆಲುವು ದಾಖಲು ಮಾಡಿದ್ದಾರೆ.

ತಿರುನೆಲ್ವೇಲಿ ಜಿಲ್ಲೆಯ ಪಾಳೆಯಂಕೋಟೈ ವ್ಯಾಪ್ತಿಯ ಶಿವಂತಿಪಟ್ಟಿ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ 90 ವರ್ಷದ ವೃದ್ಧೆ ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ಭರ್ಜರಿ ಮತ ಪಡೆದುಕೊಂಡು ಗೆಲುವು ಸಾಧಿಸಿದರೆ, ಇವರ ಎದುರಾಳಿಗಳಾಗಿ ಸ್ಪರ್ಧೆ ಮಾಡಿದ್ದ ಮತ್ತಿಬ್ಬರು ಠೇವಣಿ ಕಳೆದುಕೊಂಡಿದ್ದಾರೆ.​​

ಸ್ಥಳೀಯ ಚುನಾವಣೆಯಲ್ಲಿ ಗೆದ್ದ ಅಧ್ಯಕ್ಷೆಯಾದ 90ರ ವೃದ್ಧೆ

ಇದನ್ನೂ ಓದಿರಿ: ಮನೆಯಲ್ಲಿ ಐವರಿದ್ದರೂ, ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ BJP ಅಭ್ಯರ್ಥಿಗೆ ಒಂದೇ ವೋಟ್!

ಅಧ್ಯಕ್ಷೆಯಾಗಿ ಆಯ್ಕೆಯಾಗುತ್ತಿದ್ದಂತೆ ಪ್ರಮಾಣಪತ್ರ ಪಡೆದುಕೊಂಡಿರುವ ವೇಳೆ ತನಗೆ ಮತ ಹಾಕಿರುವ ಗ್ರಾಮದ ಜನರಿಗೆ 90ರ ವೃದ್ಧೆ ಧನ್ಯವಾದ ಅರ್ಪಿಸಿದ್ದಾರೆ. ಈ ವೇಳೆ, ನೆರೆದಿದ್ದ ಬೆಂಬಲಿಗರು ವೃದ್ಧೆಯನ್ನ ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮ ಹೊರಹಾಕಿದ್ದಾರೆ.

ತಮಿಳುನಾಡಿನಲ್ಲಿ ಅಕ್ಟೋಬರ್​​ 6 ಮತ್ತು 9ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದ್ದು, 27,003 ಹುದ್ದೆಗಳಿಗೆ 79,433 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಇದರಲ್ಲಿ ಆಡಳಿತರೂಢ ಡಿಎಂಕೆ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದೆ ಎಂದು ತಿಳಿದು ಬಂದಿದೆ.

Last Updated : Oct 13, 2021, 3:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.