ನವದೆಹಲಿ: ''ಪ್ರತಿ ನಿಮಿಷಕ್ಕೆ 25 ರಿಂದ 30 ಜನರು ಪಟ್ಟಣಗಳು ಮತ್ತು ನಗರಗಳಿಗೆ ವಲಸೆ ಹೋಗುತ್ತಾರೆ'' ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಬಹಿರಂಗಪಡಿಸಿದ್ದಾರೆ. ನಗರೀಕರಣದ ತ್ವರಿತ ಗತಿಯೊಂದಿಗೆ, 2050ರ ವೇಳೆಗೆ ದೇಶದ ನಗರ ಪ್ರದೇಶಗಳಲ್ಲಿ 877 ಮಿಲಿಯನ್ ಜನರು ವಾಸಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಹುಡ್ಕೊ 53ನೇ ಸಂಸ್ಥಾಪನಾ ದಿನಾಚರಣೆ: ಇಲ್ಲಿ ಮಂಗಳವಾರ ನಡೆದ ವಸತಿ ಮತ್ತು ನಗರಾಭಿವೃದ್ಧಿ ನಿಗಮದ (ಹುಡ್ಕೊ) 53ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ಪಾದಕ ನಗರಗಳು ವೇಗವಾಗಿ ಆರ್ಥಿಕ ಬೆಳವಣಿಗೆ ಮೂಲಕ ಹೆಚ್ಚಿನ ಸಮೃದ್ಧಿಯತ್ತ ದಾಪುಗಾಲು ಇಡುತ್ತಿವೆ. ಇದರೊಂದಿಗೆ ಅನನ್ಯ ಸವಾಲುಗಳನ್ನೂ ಎದುರಿಸುತ್ತಿವೆ. ನಗರಗಳಿಗೆ ಬರುವ ಜನರು, ತಾವು ಸುಸಜ್ಜಿತ ಮನೆಗಳನ್ನು ಹೊಂದಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದರು.
ಇದನ್ನೂ ಓದಿ: ಏಪ್ರಿಲ್ 28ರಿಂದ ಮೇ 7ರವರೆಗೆ ಕರ್ನಾಟಕದಲ್ಲಿ ಪ್ರಧಾನಿ ಮೋದಿಯಿಂದ ಭರ್ಜರಿ ಮತ ಬೇಟೆ..
"ಸದ್ಯ ಎಂದಿಗಿಂತಲೂ ಹೆಚ್ಚಾಗಿ ವಸತಿ ಮತ್ತು ನಗರ ಮೂಲಸೌಕರ್ಯಗಳಿಗೆ ತಾಂತ್ರಿಕ ಮತ್ತು ಹಣಕಾಸು ಬೆಂಬಲವನ್ನು ಒದಗಿಸುವುದು ನಿರ್ಣಾಯಕವಾಗಿದೆ. ವಿಶೇಷವಾಗಿ ನಮ್ಮ ಸಮಾಜದ ದುರ್ಬಲ ಅಂಚಿನಲ್ಲಿರುವ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ 25 ವರ್ಷಗಳಲ್ಲಿ ಭಾರತದ ಯಶಸ್ಸನ್ನು ಅಂದ್ರೆ, ನಗರೀಕರಣವನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ" ಕೇಂದ್ರ ಸಚಿವ ಪುರಿ ಹೇಳಿದರು.
ಇದನ್ನೂ ಓದಿ: ಮೀಸಲಾತಿ ಹಂಚಿಕೆ ವಿಚಾರದಲ್ಲಿ ಬಿಜೆಪಿ ಸರ್ಕಾರದಿಂದ ಗಿಮಿಕ್: ದಿನೇಶ್ ಗುಂಡೂರಾವ್
ಎರಡು ಕೋಟಿ ವಸತಿ ಘಟಕಗಳ ನಿರ್ಮಾಣ: ಹುಡ್ಕೊ ನಿರ್ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದ ಪುರಿ ಅವರು, ''ಕಳೆದ 53 ವರ್ಷಗಳಲ್ಲಿ ಹುಡ್ಕೊ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುವ ಮೂಲಕ ದೇಶದಲ್ಲಿ ಸುಮಾರು ಎರಡು ಕೋಟಿ ವಸತಿ ಘಟಕಗಳ ನಿರ್ಮಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ. "ಇನ್ನೂ ಹೆಚ್ಚು ಸಂತೋಷಕರ ಸಂಗತಿಯೆಂದರೆ, ಈ ವಸತಿ ಘಟಕಗಳಿಂದ ಶೇ.95ಕ್ಕಿಂತ ಹೆಚ್ಚು ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಲಾಭದಾಯಕವಾಗಿವೆ" ಎಂದು ಕೇಂದ್ರ ಸಚಿವ ಪುರಿ ತಿಳಿಸಿದರು.
ಇದನ್ನೂ ಓದಿ: ಲಿಂಗಾಯತರ ಮತ ಸೆಳೆಯಲು ಬಿಎಸ್ವೈ ಪ್ಲಾನ್: ವೀರಶೈವ ಸಮಾಜದ ಸ್ನೇಹಮಿಲನ
1.1 ಕೋಟಿಗೂ ಹೆಚ್ಚು ಮನೆಗಳಿಗೆ ಈಗಾಗಲೇ ಅಡಿಪಾಯ: ''ಹುಡ್ಕೊ 1970ರಲ್ಲಿ ಪ್ರಾರಂಭವಾದಾಗಿನಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸಲು 2,380 ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಆ ಯೋಜನೆಗಳು 1,900ಕ್ಕೂ ಹೆಚ್ಚು ಪಟ್ಟಣಗಳು ಮತ್ತು ನಗರಗಳಿಗೆ ತಲುಪಿವೆ. ಈ ಯೋಜನೆಯಡಿ 1.2 ಕೋಟಿಗೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಗಿದೆ. 1.1 ಕೋಟಿಗೂ ಹೆಚ್ಚು ಮನೆಗಳಿಗೆ ಈಗಾಗಲೇ ಅಡಿಪಾಯ ಹಾಕಲಾಗಿದೆ. ಜೊತೆಗೆ 73.45 ಲಕ್ಷ ಮನೆಗಳನ್ನು ಈಗಾಗಲೇ ಫಲಾನುಭವಿಗಳಿಗೆ ತಲುಪಿಸಲಾಗಿದೆ'' ಎಂದು ಸಚಿವರು ವಿವರಿಸಿದರು.
ಇದನ್ನೂ ಓದಿ: ಕಾಂಗ್ರೆಸ್ನವರಿಂದ ಲಿಂಗಾಯತರಿಗೆ ಮೇಲಿಂದ ಮೇಲೆ ಅಪಮಾನವಾಗುತ್ತಿದೆ: ಅಮಿತ್ ಶಾ