ETV Bharat / bharat

ನಾಪತ್ತೆಯಾಗಿದ್ದ ವ್ಯಕ್ತಿ ಬರೋಬ್ಬರಿ 33 ವರ್ಷಗಳ ಬಳಿಕ ದಿಢೀರ್​ ಪ್ರತ್ಯಕ್ಷ: ಮನೆಯವರಿಗೆ ಗಾಬರಿ ಜತೆ ಸಂತಸದ ಹೊನಲು! - ನಾಪತ್ತೆ ಆಗಿದ್ದ ಇವರು ಈಗ ತವರಿಗೆ

75 ವರ್ಷದ ಹನುಮಾನ್ ಸೈನಿ ಅವರು ಹಿಮಾಚಲ ಪ್ರದೇಶದ ಕಾಂಗ್ರಾದ ಮಾತಾ ದೇವಸ್ಥಾನದಲ್ಲೇ ಕಳೆದ ಮೂರು ದಶಕಗಳನ್ನು ಕಳೆದಿದ್ದಾರೆ. ಆಗ ರಾಜಸ್ಥಾನದಿಂದ ನಾಪತ್ತೆ ಆಗಿದ್ದ ಇವರು ಈಗ ತವರಿಗೆ ಮರಳಿ ಮನೆಯವರಿಗೆ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು "ಮಾತಾ ನನ್ನನ್ನು ಕರೆದಿದ್ದರು" ಎಂದು ಹೇಳಿದ್ದಾರೆ.

75-years old man, believed dead by family, returns home after 33 years in Alwar
ನಾಪತ್ತೆಯಾಗಿದ್ದ ವ್ಯಕ್ತಿ ಬರೋಬ್ಬರಿ 33ವರ್ಷಗಳ ಬಳಿಕ ದಿಢೀರ್​ ಪ್ರತ್ಯಕ್ಷ
author img

By

Published : Jun 1, 2023, 8:13 PM IST

ಅಲ್ವಾರ್​( ರಾಜಸ್ಥಾನ): ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ 33 ವರ್ಷಗಳ ನಂತರ ಹಠಾತ್ ಮನೆಗೆ ಮರಳಿದ ಘಟನೆಯೊಂದು ನಡೆದಿದೆ. 33 ವರ್ಷಗಳ ಹಿಂದೆ ಹಠಾತ್ ನಾಪತ್ತೆಯಾಗಿದ್ದ ವ್ಯಕ್ತಿ ಮನೆಗೆ ಮರಳುವ ಮೂಲಕ ಅವರ ಕುಟುಂಬ ಮತ್ತು ಸಂಬಂಧಿಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

33 ವರ್ಷಗಳ ನಂತರ ಮಂಗಳವಾರ ಮೇ 30 ರಂದು ಅಲ್ವಾರ್ ಜಿಲ್ಲೆಯ ಬನ್ಸೂರ್ ಗ್ರಾಮದಲ್ಲಿ ಕುಟುಂಬದೊಂದಿಗೆ ಮತ್ತೆ ಒಂದಾಗಿದ್ದಾರೆ. ಮೂರು ದಶಕಗಳ ಬಳಿಕ 75 ವರ್ಷದ ಹನುಮಾನ್ ಸೈನಿ ಅವರು ಗ್ರಾಮಕ್ಕೆ ಮರಳಿದರು. ಹಲವು ವರ್ಷಗಳ ಬಳಿಕ ಮನೆಗೆ ಬಂದ ಸೈನಿಯನ್ನು ಗ್ರಾಮದ ಜನರು ಹಾಗೂ ಕುಟುಂಬ ಸಂತಸದಿಂದ ಸ್ವಾಗತಿಸಿತು. ಅಷ್ಟೇ ಅಲ್ಲ ಗುಂಪು ಗುಂಪಾಗಿ ಬಂದು ಹನುಮಾನ್​ ಸೈನಿಗೆ ವಿರೋಚಿತ ಸ್ವಾಗತದೊಂದಿಗೆ ಹರ್ಷ ವ್ಯಕ್ತಪಡಿಸಿತು.

ಸೈನಿ ಅವರಿಗೆ ಒಟ್ಟು ಐದು ಮಕ್ಕಳಿದ್ದಾರೆ. ಮೂರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳು ಕೂಡಾ ಮದುವೆಯಾಗಿದ್ದಾರೆ. ಸೈನಿ ಇದ್ದಕ್ಕಿದ್ದಂತೆ ನಾಪತ್ತೆ ಆದ ಹಲವು ವರ್ಷಗಳ ಬಳಿಕ ಅವರ ಕುಟುಂಬ ಇತ್ತೀಚೆಗಷ್ಟೇ ಹನುಮಾನ್​ ಅವರ ಮರಣ ಪ್ರಮಾಣಪತ್ರವನ್ನ ಸಂಬಂಧ ಪಟ್ಟ ಇಲಾಖೆಯಿಂದ ಪಡೆದುಕೊಂಡಿತ್ತು. ಆದರೆ, ಮಂಗಳವಾರ ತಂದೆ ಮನೆಗೆ ಹಿಂದಿರುಗಿದ ಸುದ್ದಿ ತಿಳಿದು ಒಡಹುಟ್ಟಿದವರು ತಂದೆಯ ಮನೆಗೆ ದೌಡಾಯಿಸಿದರು. ಅವರನ್ನು ನೋಡಲು ಮತ್ತು ಅವರ ಯೋಗಕ್ಷೇಮವನ್ನು ತಿಳಿದು ಸಂತಸ ಪಟ್ಟರು. ಹನುಮಾನ್ ಸೈನಿ ಅವರ ಸಹೋದರಿ ಮತ್ತು ಪುತ್ರಿಯರಿಗೆ ತಂದೆ ಹಿಂದಿರುಗಿದ ವಿಷಯ ತಿಳಿದು ಖುಷಿಯಾದರು. ತಂದೆಯ ಆರೋಗ್ಯವನ್ನು ವಿಚಾರಿಸಿದರು.

75 ವರ್ಷದ ಹನುಮಾನ್ ಸೈನಿ ಅವರು ಇಷ್ಟು ವರ್ಷಗಳ ಕಾಲ ನಾಪತ್ತೆಯಾಗಿರುವ ಬಗ್ಗೆ ಕೇಳಿದಾಗ, ’’ಹಿಮಾಚಲ ಪ್ರದೇಶದ ಕಾಂಗ್ರಾ ಮಾತೆಯ ದೇವಸ್ಥಾನದಲ್ಲಿ ಕಳೆದ ಮೂರು ದಶಕಗಳನ್ನು ಕಳೆದಿದ್ದೇನೆ ಎಂದರು. ಅಷ್ಟೇ ಅಲ್ಲ "ಮಾತೆ ನನ್ನನ್ನು ಕರೆದಿದ್ದರು" ಎಂದು ಹೇಳಿದರು. “ನಾನು ಇಲ್ಲಿಂದ ತೆರಳಿದ ಮೇಲೆ ಮಾತಾ ದೇವಸ್ಥಾನವನ್ನು ತಲುಪಿದೆ ಮತ್ತು ಸುಮಾರು 33 ವರ್ಷಗಳ ಕಾಲ ಅಲ್ಲಿ ಪೂಜೆ ಮಾಡಿಕೊಂಡು ಇದ್ದೆ. ಮಾತೆಯ ಆದೇಶದ ಮೇರೆಗೆ ನಾನು ನನ್ನ ಗೂಡಿಗೆ ಮರಳಿದ್ದೇನೆ’’ ಎಂದು ಸೈನಿ ಹೇಳಿಕೊಂಡಿದ್ದಾರೆ.

ತಾನು ಮೊದಲು ರೈಲಿನಲ್ಲಿ ಮೇ 29 ರಂದು ರಾತ್ರಿ ಕಾಂಗ್ರಾದಿಂದ ಖೈರ್ತಾಲ್ ತಲುಪಿ ಅಲ್ಲಿಂದ ರಾತ್ರಿ ಕಾಲ್ನಡಿಗೆಯಲ್ಲಿ ತಾತಾರ್‌ಪುರ ಛೇದಕವನ್ನು ತಲುಪಿದೆ ಎಂದು ಸೈನಿ ಹೇಳಿದ್ದಾರೆ . ಮೇ 30 ರಂದು ಬೆಳಗ್ಗೆ, ಸೈನಿ ತನ್ನ ಸಂಬಂಧಿಕರನ್ನು ತಲುಪಲು ಹಿಚ್‌ಹೈಕಿಂಗ್ ಮೂಲಕ ಬನ್ಸೂರ್‌ನ ಸ್ವಸ್ತಿಯ ಹನುಮಾನ್ ದೇವಸ್ಥಾನಕ್ಕೆ ಬಂದಿದ್ದರು. ಮತ್ತೊಂದು ಕಡೆ ಹನುಮಾನ್ ಸೈನಿ ಅವರ ಪುತ್ರ ರಾಮಚಂದ್ರ ಸೈನಿ ಅವರು ತಮ್ಮ ತಂದೆ ಹಿಂದಿರುಗುವ ಭರವಸೆಯನ್ನು ಕಳೆದುಕೊಂಡಿದ್ದರು. ಎಲ್ಲೆಡೆ ಹುಡುಕಿ ಸಾಕಾಗಿದ್ದರು. ಅಂತಿಮವಾಗಿ 2022 ರಲ್ಲಿ ಹುನುಮಾನ್​ ಅವರ ಮರಣ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದೆ ಎಂದು ಹೇಳಿದ್ದಾರೆ.

“ನನ್ನ ತಂದೆ ಬದುಕಿರುವ ಭರವಸೆಯನ್ನು ನಾನು ಬಿಟ್ಟುಬಿಟ್ಟಿದ್ದೆ, ಜಮೀನು ದಾಖಲೆಗಳಲ್ಲಿನ ತೊಂದರೆಗಳಿಂದಾಗಿ ನ್ಯಾಯಾಲಯದ ಬೆಂಬಲವನ್ನು ಪಡೆದು ನಾವು ಅಂತಿಮವಾಗಿ 2022 ರಲ್ಲಿ ನನ್ನ ತಂದೆಯ ಮರಣ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದೇವೆ. ಅವರು ಇಂದು ಮನೆಗೆ ಹಿಂದಿರುಗಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು‘‘ ಎಂದು ರಾಮಚಂದ್ರ ಸೈನಿ ಹೇಳಿದರು.

ಹನುಮಾನ್ ಸೈನಿ 1989 ರಲ್ಲಿ ಮನೆಯಿಂದ ಹೊರಡುವಾಗ ಅವರ ಜೇಬಿನಲ್ಲಿ ಇದ್ದದ್ದು ಕೇವಲ 20 ರೂ. ಈ 20 ರೂ ಇಟ್ಟುಕೊಂಡು ಅವರು ಊರು ಬಿಟ್ಟಿದ್ದರು. ಈ ಬಗ್ಗೆ ಮಾತನಾಡಿರುವ ಹನುಮಾನ್​ ಸೈನಿ, “ನಾನು ರೈಲು ಹತ್ತಿದಾಗ, ಟಿಟಿ ಟಿಕೆಟ್ ಕೇಳಿದರು, ಆದರೆ ನನ್ನ ಬಳಿ ಹಣವಿಲ್ಲ ಎಂದೆ. ಆದರೆ ಅವರು ನನಗೆ ಪಠಾಣ್‌ಕೋಟ್‌ಗೆ ಟಿಕೆಟ್ ನೀಡಿ ಪುಣ್ಯ ಕಟ್ಟಿಕೊಂಡರು. ಅಲ್ಲಿಂದ ನಾನು ಹಿಮಾಚಲದ ಕಾಂಗ್ರಾ ಮಾತಾ ದೇವಸ್ಥಾನವನ್ನು ತಲುಪಿದೆ. ಅಲ್ಲಿ ನಾನು 33 ವರ್ಷಗಳ ಕಾಲ ದೇವತೆಯ ಸೇವೆ ಸಲ್ಲಿಸಿದೆ. ನನ್ನ ತಪಸ್ಸು ಮತ್ತು ನನ್ನ ಪೂಜೆಯನ್ನು ಮುಗಿಸಿದ ನಂತರ ನಾನು ಮಾತೆಯ ಆದೇಶದ ಮೇರೆಗೆ ಮನೆಗೆ ಮರಳಿದ್ದೇನೆ ಎಂದಿದ್ದಾರೆ.

ಇದನ್ನು ಓದಿ: ಕಡಲ ತೀರದಲ್ಲಿ 'ಮೇಘ' ರಾಶಿ: ಫೋಟೋಗಳಲ್ಲಿ ಮಿಂಚಿದ ಶ್ವೇತಾಂಬರಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.