ETV Bharat / bharat

ಆರೋಗ್ಯದ ಗುಟ್ಟು ಉಪವಾಸದಲ್ಲಿ: ಮಧ್ಯಂತರ ಉಪವಾಸದ ಏಳು ದಾರಿಗಳ ನಕ್ಷೆ ಇಲ್ಲಿದೆ - ಉತ್ತಮ ಆರೋಗ್ಯಕ್ಕೆ ಮಧ್ಯಂತರ ಉಪವಾಸ

ಕೆಲವು ಅಧ್ಯಯನಗಳ ಪ್ರಕಾರ, ಈ ರೀತಿಯಲ್ಲಿ ಆಹಾರ ಸೇವಿಸುವುದರಿಂದ ತೂಕ ನಷ್ಟ, ಸುಧಾರಿತ ಆರೋಗ್ಯ ಮತ್ತು ದೀರ್ಘಾಯುಷ್ಯದಂತಹ ಪ್ರಯೋಜನಗಳನ್ನು ಪಡೆಯಬಹುದು. ಮಧ್ಯಂತರ ಉಪವಾಸ ಮಾಡುವವರ ಪ್ರಕಾರ ಸಾಂಪ್ರದಾಯಿಕ ಕ್ಯಾಲೋರಿ-ನಿಯಂತ್ರಿತ ಆಹಾರಗಳಿಗಿಂತ ಈ ಮಧ್ಯಂತರ ಉಪವಾಸವನ್ನು ಮಾಡುವುದು ಸುಲಭವಂತೆ..

7 approaches to intermittent fasting
ಆರೋಗ್ಯದ ಗುಟ್ಟು ಉಪವಾಸದಲ್ಲಿ: ಮಧ್ಯಂತರ ಉಪವಾಸದ ಏಳು ದಾರಿಗಳ ನಕ್ಷೆ ಇಲ್ಲಿದೆ
author img

By

Published : May 14, 2022, 4:00 PM IST

ಮಧ್ಯಂತರ ಉಪವಾಸವನ್ನು ಒಬ್ಬೊಬ್ಬೊರ ಅನುಕೂಲಕ್ಕೆ ಅನುಗುಣವಾಗಿ ಹಲವಾರು ವಿಧಗಳಲ್ಲಿ ಮಾಡಬಹುದು. ಮಧ್ಯಂತರ ಉಪವಾಸದ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯ ಅನುಭವ ಕೂಡ ವಿಶಿಷ್ಟವಾಗಿರುತ್ತದೆ. ವಿಭಿನ್ನ ಶೈಲಿಗಳು ವಿಭಿನ್ನ ಜನರಿಗೆ ಸರಿ ಹೊಂದುತ್ತವೆ. ಅವರವರಿಗೆ ಒಪ್ಪುವಂತೆ ಈ ಮಧ್ಯಂತರ ಉಪವಾಸವನ್ನು ಅಭ್ಯಾಸ ಮಾಡಲು ಏಳು ವಿಭಿನ್ನ ಮಾರ್ಗಗಳು ಇಲ್ಲಿವೆ.

ಸಾಮಾನ್ಯವಾಗಿ ತಿನ್ನುವ ಮೊದಲು ಅಥವಾ ನಿಗದಿತ ಸಮಯದವರೆಗೆ ಸಂಪೂರ್ಣವಾಗಿ ಅಥವಾ ಭಾಗಶಃ ಉಪವಾಸ ಮಾಡುವುದನ್ನು ಮಧ್ಯಂತರ ಉಪವಾಸ ಎನ್ನುತ್ತೇವೆ. ಕೆಲವು ಅಧ್ಯಯನಗಳ ಪ್ರಕಾರ, ಈ ರೀತಿಯಲ್ಲಿ ಆಹಾರ ಸೇವಿಸುವುದರಿಂದ ತೂಕ ನಷ್ಟ, ಸುಧಾರಿತ ಆರೋಗ್ಯ ಮತ್ತು ದೀರ್ಘಾಯುಷ್ಯದಂತಹ ಪ್ರಯೋಜನಗಳನ್ನು ಪಡೆಯಬಹುದು. ಮಧ್ಯಂತರ ಉಪವಾಸ ಮಾಡುವವರ ಪ್ರಕಾರ ಸಾಂಪ್ರದಾಯಿಕ ಕ್ಯಾಲೊರಿ-ನಿಯಂತ್ರಿತ ಆಹಾರಗಳಿಗಿಂತ ಈ ಮಧ್ಯಂತರ ಉಪವಾಸವನ್ನು ಮಾಡುವುದು ಸುಲಭ ಎಂದು ಹೇಳುತ್ತಾರೆ.

ದಿನಕ್ಕೆ 12 ಗಂಟೆಗಳ ಕಾಲ ಉಪವಾಸ : ಆಹಾರದ ಮಾರ್ಗಸೂಚಿಗಳು ಸರಳವಾಗಿದೆ. ಪ್ರತಿದಿನ, ಒಬ್ಬ ವ್ಯಕ್ತಿಯು 12-ಗಂಟೆಗಳ ಉಪವಾಸ ಮಾದರಿಯನ್ನು ಆರಿಸಿಕೊಂಡು ಅನುಸರಿಸಬೇಕು. ಕೆಲವು ಸಂಶೋಧಕರ ಪ್ರಕಾರ, 10 ರಿಂದ 16 ಗಂಟೆಗಳ ಕಾಲ ಉಪವಾಸ ಮಾಡುವುದರಿಂದ ದೇಹದಲ್ಲಿರುವ ಕೊಬ್ಬಿನ ಶೇಖರಣೆ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ರಕ್ತದ ಹರಿವಿಗೆ ಕೀಟೋನ್‌ಗಳು ಬಿಡುಗಡೆಗೊಳ್ಳುವುದರಿಂದ ತೂಕ ನಷ್ಟಕ್ಕೂ ಸಹಾಯವಾಗುತ್ತದೆ.

16 ಗಂಟೆಗಳ ಕಾಲ ಉಪವಾಸ : 16:8 ವಿಧಾನ, ಲೀಂಗೈನ್ಸ್ ಡಯಟ್​ ಎಂತಲೂ ಇದನ್ನು ಕರೆಯುತ್ತಾರೆ. ದಿನಕ್ಕೆ 16 ಗಂಟೆಗಳ ಕಾಲ ಉಪವಾಸ ಮತ್ತು 8 ಗಂಟೆಗಳ ಕಾಲ ಆಹಾರ ಸೇವೆನೆಯನ್ನು ಈ ವಿಧಾನ ಒಳಗೊಂಡಿರುತ್ತದೆ. ಈ ವಿಧಾನದಲ್ಲಿ ಪುರುಷರು ದಿನಕ್ಕೆ 16 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. ಆದರೆ, ಮಹಿಳೆಯರು 14 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. 12-ಗಂಟೆಗಳ ಉಪವಾಸ ಮಾಡಿ ಅದರಿಂದ ಯಾವುದೇ ಪ್ರಯೋಜನ ಆಗದೇ ಇರುವವರಿಗೆ ಈ ಮಾದರಿಯ ಉಪವಾಸ ಸೂಕ್ತವಾಗಿರುತ್ತದೆ.

ವಾರದಲ್ಲಿ 2 ದಿನ ಉಪವಾಸ : 5:2 ಪಥ್ಯವನ್ನು ಅನುಸರಿಸುವ ಜನರು ಸಾಮಾನ್ಯವಾಗಿ 5 ದಿನಗಳು ಆಹಾರ ತಿಂದು ಉಳಿದ ಎರಡು ದಿನಗಳು ಕಡಿಮೆ ಕ್ಯಾಲೋರಿಯ ಆಹಾರಗಳನ್ನು ಸೇವಿಸುತ್ತಾರೆ. ಈ ಎರಡು ದಿನಗಳ ಉಪವಾಸದ ಸಮಯದಲ್ಲಿ ಪುರುಷರು ಸಾಮಾನ್ಯವಾಗಿ 600 ಕ್ಯಾಲೋರಿಗಳಷ್ಟು ಆಹಾರ ಮತ್ತು ಮಹಿಳೆಯರು 500 ಕ್ಯಾಲೋರಿಗಳ ಆಹಾರವನ್ನಷ್ಟೇ ಸೇವಿಸುತ್ತಾರೆ.

ಪರ್ಯಾಯ ದಿನದ ಉಪವಾಸ : ಪರ್ಯಾಯ ದಿನದ ಉಪವಾಸ ಯೋಜನೆಗೆ ಹಲವಾರು ಮಾರ್ಪಾಡುಗಳಿವೆ. ಇದು ಪ್ರತಿ ದಿನ ಮಾಡುವ ಉಪವಾಸ. ಪರ್ಯಾಯ-ದಿನದ ಉಪವಾಸದ ದಿನಗಳಲ್ಲಿ ಘನ ಆಹಾರಗಳಿಂದ ಸಂಪೂರ್ಣ ದೂರವಿರಬೇಕು ಎನ್ನುವವರು ಕೆಲವರು. ಆದರೆ, ಇನ್ನೂ ಕೆಲವರು 500 ಕ್ಯಾಲೋರಿಗಳಷ್ಟು ಆಹಾರವನ್ನು ಸೇವಿಸಬಹುದು ಎಂದು ನಂಬುತ್ತಾರೆ. ಪರ್ಯಾಯ ದಿನದ ಉಪವಾಸವು ಮಧ್ಯಂತರ ಉಪವಾಸದ ತೀವ್ರ ರೂಪವಾಗಿರುವ ಕಾರಣ, ಆಹಾರ ಸೇವಿಸುವ ದಿನಗಳಲ್ಲಿ, ಅನೇಕ ಜನರು ತಮಗೆ ಬೇಕಾದಷ್ಟು ಮಾತ್ರ ಆಹಾರ ಸೇವಿಸುತ್ತಾರೆ.

ವಾರಕ್ಕೆ 24-ಗಂಟೆಗಳ ಉಪವಾಸ : ವಾರಕ್ಕೆ ಒಂದು ಅಥವಾ ಎರಡು ದಿನಗಳ ಉಪವಾಸದ ಕ್ರಮ ಇದು. ಇದನ್ನು ಈಟ್-ಸ್ಟಾಪ್-ಈಟ್ ಡಯೆಟ್ ಎಂದೂ ಕರೆಯಲಾಗುತ್ತದೆ. ಒಮ್ಮೆ ಉಪವಾಸ ಪ್ರಾರಂಭಿಸಿದರೆ 24 ಗಂಟೆಗಳ ಕಾಲ ಆಹಾರವಿಲ್ಲದೆ ಇರುವುದು ಈ ಉಪವಾಸದ ಪರಿ. ಹೆಚ್ಚಿನವರು ಉಪಹಾರ ಮತ್ತು ಮಧ್ಯಾಹ್ನದ ಊಟದ ನಡುವೆ ಈ ಉಪವಾಸ ಮಾಡುತ್ತಾರೆ. ಈ ವಿಧಾನದಲ್ಲಿ ಜನರು ಉಪವಾಸದ ಅವಧಿಯಲ್ಲಿ ನೀರು, ಚಹಾ ಮತ್ತು ಇತರ ಕ್ಯಾಲೋರಿ-ಮುಕ್ತ ಪಾನೀಯಗಳನ್ನು ಕುಡಿಯಬಹುದು. ಉಪವಾಸವಿಲ್ಲದ ದಿನಗಳಲ್ಲಿ ಜನರು ತಮ್ಮ ಸಾಮಾನ್ಯ ಆಹಾರ ಪದ್ಧತಿಯನ್ನೇ ಅನುಸರಿಸುತ್ತಾರೆ.

ಊಟ ಬಿಟ್ಟುಬಿಡುವುದು : ಮಧ್ಯಂತರ ಉಪವಾಸಕ್ಕೆ ಹೊಂದಿಕೊಳ್ಳಲು ಆರಂಭಿಕ ಹಂತದಲ್ಲಿರುವವರು ಈ ವಿಧಾನವನ್ನು ಅನುಸರಿಸುವುದು ಉತ್ತಮ. ಈ ವಿಧಾನದಲ್ಲಿ ಯಾವಾಗಲಾದರೂ ಒಮ್ಮೆ ಊಟ ಬಿಟ್ಟು ಬಿಡುವುದಾಗಿರುತ್ತದೆ. ಉಪವಾಸ ಮಾಡಲಿಚ್ಛಿಸುವವರು ತಮ್ಮ ಹಸಿವಿನ ಮಟ್ಟ ಅಥವಾ ಸಮಯದ ನಿರ್ಬಂಧಗಳ ಆಧಾರದ ಮೇಲೆ ಊಟವನ್ನು ಬಿಟ್ಟುಬಿಡಬಹುದು. ಆದಾಗ್ಯೂ, ಪ್ರತಿ ಊಟದಲ್ಲಿ ಪೌಷ್ಠಿಕಾಂಶದ ಆಹಾರವನ್ನು ಸೇವಿಸುವುದು ಕಷ್ಟ.

ವಾರಿಯರ್ ಡಯಟ್ : ವಾರಿಯರ್ ಡಯಟ್ ಮಧ್ಯಂತರ ಉಪವಾಸದಲ್ಲಿ ಅತೀ ಹೆಚ್ಚು ತೀವ್ರತೆ ಹೊಂದಿರುವ ವಿಧಾನ. 20 ಗಂಟೆಗಳ ಕಾಲ ಉಪವಾಸ ಮಾಡುವುದು, ಹಸಿ ಹಣ್ಣು ಮತ್ತು ತರಕಾರಿಗಳನ್ನು ಮಾತ್ರ ತಿನ್ನುವುದು ಮತ್ತು ರಾತ್ರಿಯಲ್ಲಿ ಒಂದು ದೊಡ್ಡ ಊಟ ಸೇವನೆ ವಾರಿಯರ್ ಡಯಟ್‌ನ ಭಾಗವಾಗಿದೆ. ಆಹಾರ ಸೇವನೆಯ ಅವಧಿ ಕೇವಲ 4 ಗಂಟೆಗಳಿಗಿರುತ್ತದೆ. ಇತರ ರೀತಿಯ ಮಧ್ಯಂತರ ಉಪವಾಸವನ್ನು ಪ್ರಯತ್ನಿಸಿದ ಜನರಿಗೆ ಈ ರೀತಿಯ ಮಧ್ಯಂತರ ಉಪವಾಸವು ಉತ್ತಮವಾಗಿರುತ್ತದೆ.

ಈ ರೀತಿಯ, ಉಪವಾಸ ಅಥವಾ ಡಯಟ್​ಗಳು ಆರೊಗ್ಯಕ್ಕೆ ಉತ್ತಮ. ಆದರೆ, ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಲೇಬೇಕು. ಅದೇನೆಂದರೆ, ಈ ರೀತಿಯ ಉಪವಾಸಗಳು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ ಸಹ, ಅನಗತ್ಯವಾದ ದೀರ್ಘಕಾಲದ ಉಪವಾಸವು ಮೂತ್ರಪಿಂಡ ಮತ್ತು ಮೇದೋಜ್ಜೀರಕ ಗ್ರಂಥಿಯ ಕಾರ್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಅಗತ್ಯವಾದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇವುಗಳು ಸವಕಳಿಯು ಮುಖ್ಯವಾಗಿ ಚರ್ಮ ಮತ್ತು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಮನೆಯಲ್ಲೇ ಇರುವ ತಾಯಂದಿರಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ತಜ್ಞರ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.