ಇಂದೋರ್ (ಮಧ್ಯಪ್ರದೇಶ): ಕೋವಿಡ್ ಆರ್ಭಟದಿಂದಾಗಿ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಆಮ್ಲಜನಕ ಅಭಾವ ಎದುರಾಗಿದ್ದು, ಇಲ್ಲೊಬ್ಬ 68 ವರ್ಷದ ವೃದ್ಧ ಆಕ್ಸಿಜನ್ಗಾಗಿ ಅರಳಿ ಮರವೇರಿ ಕುಳಿತಿದ್ದಾರೆ.
ಮಧ್ಯಪ್ರದೇಶದ ಇಂದೋರ್ನ ರಂಗ್ವಾಸಾ ಗ್ರಾಮದ ನಿವಾಸಿ ರಾಜೇಂದ್ರ ಪಾಟಿದಾರ್ ಎಂಬವರು ದಿನವಿಡೀ ಅರಳಿ ಮರದ ಕೊಂಬೆಯ ಮೇಲೆ ಕುಳಿತು ಸಂಜೆಯವರೆಗೂ ಕಾಲ ಕಳೆಯುತ್ತಾರೆ. ಇವರಿಗೆ ಇವರ ಮೊಮ್ಮಗ ಕೂಡ ಸಾಥ್ ನೀಡುತ್ತಾನೆ.
ವೃತ್ತಿಯಲ್ಲಿ ಕೃಷಿಕರಾಗಿರುವ ರಾಜೇಂದ್ರ ಅವರ ಮನೆಯ ಬಳಿ ಮೂರು ಅರಳಿ ಮರಗಳಿವೆ. ಇಂದೋರ್‌ನಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಜನರು ಆಸ್ಪತ್ರೆಗಳಲ್ಲಿ ಸಾಯುತ್ತಿರುವ ಸುದ್ದಿ ಕೇಳಿದ ಅವರು, ನೈಸರ್ಗಿಕ ವಿಧಾನದಿಂದ ಆಕ್ಸಿಜನ್ ತೆಗೆದುಕೊಳ್ಳಲು ನಿರ್ಧರಿಸಿದರು.
ಇದನ್ನೂ ಓದಿ: ಆಕ್ಸಿಜನ್ಗಾಗಿ ಅರಳಿ ಮರದ ಕೆಳಗೆ ಮಲಗಿದ ಜನ!
ಕಳೆದ 15-20 ದಿನಗಳಿಂದ ಹೀಗೆ ಅರಳಿ ಮರ ಹತ್ತಿ-ಇಳಿಯುತ್ತಿದ್ದು, ಶುದ್ಧ ಆಮ್ಲಜನಕ ಸೇವಿಸುವುದರೊಂದಿಗೆ ತಮಗೆ ದೈಹಿಕ ವ್ಯಾಯಾಮವೂ ಆಗುತ್ತದೆ ಎಂದು ರಾಜೇಂದ್ರ ಅವರು ಹೇಳುತ್ತಾರೆ. ಹಾಗೆಯೇ ಪ್ರತಿನಿತ್ಯ ಪ್ರಾಣಾಯಾಮ, ಯೋಗಾಸನವನ್ನೂ ಮಾಡುತ್ತಾರೆ.
ಅರಳಿ ಮರಗಳು ಔಷಧೀಯ ಅಂಶಗಳ ಉಗ್ರಾಣ. ಅಸ್ತಮಾ ಸೇರಿದಂತೆ ಉಸಿರಾಟ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತವೆ ಎಂದು ಹೇಳಲಾಗುತ್ತದೆ.