ETV Bharat / bharat

ಈವರೆಗೆ 6 ಸಾವಿರ ಮಂದಿಯನ್ನು ಉಕ್ರೇನ್​ನಿಂದ ಕರೆತರಲಾಗಿದೆ: ಕೇಂದ್ರ ಸಚಿವ ಮುರಳೀಧರನ್ - ಉಕ್ರೇನ್ ಮೇಲೆ ರಷ್ಯಾ ಆಕ್ರಮಣ

ಉಕ್ರೇನ್‌ನ ನೆರೆಯ ದೇಶಗಳಾದ ರೊಮೇನಿಯಾ, ಪೋಲೆಂಡ್, ಹಂಗೇರಿ ಮತ್ತು ಸ್ಲೋವಾಕಿಯಾ ದೇಶಗಳ ನೆರವಿನೊಂದಿಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಹೇಳಿದ್ದಾರೆ.

6,000 Indians brought back to country from Ukraine so far: Union minister
ಈವರೆಗೆ 6 ಸಾವಿರ ಮಂದಿಯನ್ನು ಉಕ್ರೇನ್​ನಿಂದ ಕರೆತರಲಾಗಿದೆ: ಕೇಂದ್ರ ಸಚಿವ
author img

By

Published : Mar 2, 2022, 6:55 PM IST

ಪುಣೆ(ಮಹಾರಾಷ್ಟ್ರ): ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ 20 ಸಾವಿರ ಭಾರತೀಯರಲ್ಲಿ 6,000 ಮಂದಿಯನ್ನು ಇದುವರೆಗೆ ದೇಶಕ್ಕೆ ಕರೆತರಲಾಗಿದ್ದು, ಉಳಿದವರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಬುಧವಾರ ಹೇಳಿದ್ದಾರೆ.

ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಕ್ರೇನ್‌ನಲ್ಲಿ ಸುಮಾರು ವಿದ್ಯಾರ್ಥಿಗಳು ಮತ್ತು ನಾಗರಿಕರು ಸೇರಿದಂತೆ ಭಾರತದ 20 ಸಾವಿರ ಮಂದಿ ಸಿಲುಕಿಕೊಂಡಿದ್ದರು. ಅವರಲ್ಲಿ 4 ಸಾವಿರ ಜನರನ್ನು ಫೆಬ್ರವರಿ 24ರ ಮೊದಲೇ ಭಾರತಕ್ಕೆ ಕರೆತರಲಾಗಿದೆ. 2,000 ವಿದ್ಯಾರ್ಥಿಗಳನ್ನು ಮಂಗಳವಾರದವರೆಗೆ ಭಾರತಕ್ಕೆ ಕರೆತರಲಾಗಿದೆ. ಉಳಿದ ಭಾರತೀಯರನ್ನು ಭಾರತಕ್ಕೆ ಕರೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಉಕ್ರೇನ್​ನಲ್ಲಿ ಸಿಲುಕಿರುವವರ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದಾಗಿ ಅವರನ್ನು ಕರೆತರಲು ರಕ್ಷಣಾ ವಿಮಾನಗಳನ್ನು ಬಳಸಲಾಗುತ್ತಿದೆ. ಉಕ್ರೇನ್‌ನ ನೆರೆಯ ದೇಶಗಳಾದ ರೊಮೇನಿಯಾ, ಪೋಲೆಂಡ್, ಹಂಗೇರಿ ಮತ್ತು ಸ್ಲೋವಾಕಿಯಾ ದೇಶಗಳ ನೆರವಿನೊಂದಿಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

'ಇದು ರಾಜಕೀಯ ವಿಷಯ ಅಲ್ಲ': ಉತ್ತರ ಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉಕ್ರೇನ್​ನಿಂದ ಜನರನ್ನು ಕರೆತರುವ ಕಾರ್ಯಾಚರಣೆಗೆ ಆಪರೇಷನ್ ಗಂಗಾ ಎಂದು ಹೆಸರಿಡಲಾಗಿದೆ ಎಂಬ ಶಿವಸೇನೆಯ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ವಿ.ಮುರಳೀಧರನ್, ಇದು ರಾಜಕೀಯ ವಿಷಯವಲ್ಲ. ಇದು ರಾಷ್ಟ್ರೀಯ ಸಮಸ್ಯೆ. ಇದು ಭಾರತೀಯ ನಾಗರಿಕರ ಸುರಕ್ಷತೆಗೆ ಸಂಬಂಧಿಸಿದೆ. ಕಾರ್ಯಾಚರಣೆಯ ಹೆಸರಿಗೆ ಯಾವುದೇ ಆಕ್ಷೇಪಣೆ ಇರಬಾರದು ಎಂದರು.

ಇದನ್ನೂ ಓದಿ: ಭಾರತ ಬಲಿಷ್ಠವಾಗಿರುವ ಕಾರಣಕ್ಕೆ ಉಕ್ರೇನ್​ನಿಂದ ತೆರವು ಕಾರ್ಯ ಸಾಧ್ಯವಾಗ್ತಿದೆ: ಮೋದಿ

ಪುಣೆಗೆ ಭೇಟಿ ನೀಡಿದ್ದ ವೇಳೆಯಲ್ಲಿ ಉಕ್ರೇನ್​ನಲ್ಲಿ ಸಿಲುಕಿರುವ ಕೆಲವು ವಿದ್ಯಾರ್ಥಿಗಳ ಪೋಷಕರನ್ನು ಭೇಟಿ ಮಾಡಿದ ವಿ.ಮುರಳೀಧರನ್ ನಂತರ ಟ್ವೀಟ್ ಮಾಡಿ, ಉಕ್ರೇನ್​ನಲ್ಲಿರುವ ವಿದ್ಯಾರ್ಥಿಗಳ ಪೋಷಕರೊಂದಿಗೆ ಸಂಪರ್ಕ ಮುಂದುವರೆಸುತ್ತೇನೆ. ಕೇಂದ್ರ ಸರ್ಕಾರದ ಯತ್ನವನ್ನು ಪೋಷಕರು ಶ್ಲಾಘಿಸುವುದನ್ನು ಕೇಳಲು ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.