ETV Bharat / bharat

ಜನಸಾಮಾನ್ಯರಿಗೆ ಮಾತ್ರ ರೂಲ್ಸ್​?.. 400 ಪೊಲೀಸರ ಬಳಿ ಡ್ರೈವಿಂಗ್ ಲೈಸನ್ಸೇ ಇಲ್ಲ!

ಆಂಧ್ರಪ್ರದೇಶದ ವಿಜಯವಾಡದಲ್ಲಿ ಸುಮಾರು 400 ಪೊಲೀಸರ ಬಳಿ ಡ್ರೈವಿಂಗ್​ ಲೈಸನ್ಸೇ ಇಲ್ಲ ಎಂಬುದು ಇದೀಗ ತಿಳಿದು ಬಂದಿದೆ.

400 Cops
400 Cops
author img

By

Published : Aug 3, 2021, 9:14 PM IST

ವಿಜಯವಾಡ(ಆಂಧ್ರಪ್ರದೇಶ): ಬೈಕ್​ ಅಥವಾ ಕಾರು ಡ್ರೈವ್ ಮಾಡಿಕೊಂಡು ಹೋಗುವ ಸಂದರ್ಭದಲ್ಲಿ ಟ್ರಾಫಿಕ್​ ಪೊಲೀಸರ ಕೈಗೆ ಜನ - ಸಾಮಾನ್ಯರು ಸಿಕ್ಕಿ ಬಿದ್ದಾಗ ಡ್ರೈವಿಂಗ್​ ಲೈಸನ್ಸ್​​, ಇನ್ಸುರೆನ್ಸ್​ ಸೇರಿದಂತೆ ಇನ್ನಿಲ್ಲದ ಪ್ರಶ್ನೆ ಕೇಳಿ ದಂಡ ಕಟ್ಟಿಸಿಕೊಳ್ಳುತ್ತಾರೆ. ಆದರೆ, ಪೊಲೀಸರ ಬಳಿಯೇ ಆ ಎಲ್ಲ ಡ್ಯಾಕುಮೆಂಟ್​​ ಇಲ್ಲದಿದ್ದಾಗ? ಇದೀಗ ತಿಳಿದು ಬಂದಿರುವ ಮಾಹಿತಿವೊಂದರ ಪ್ರಕಾರ ಆಂಧ್ರಪ್ರದೇಶದ ವಿಜಯವಾಡದಲ್ಲಿ ಬರೋಬ್ಬರಿ 400 ಪೊಲೀಸರ ಬಳಿ ಡ್ರೈವಿಂಗ್​ ಲೈಸನ್ಸೇ ಇಲ್ಲವಂತೆ.

ಇದನ್ನ ನೋಡಿದಾಗ ಜನಸಾಮಾನ್ಯರಿಗೆ ಮಾತ್ರವೇ ರೂಲ್ಸ್​ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ವಿಜಯವಾಡದಲ್ಲಿ ನಿತ್ಯ ನೂರಾರು ಪೊಲೀಸರು ಡ್ರೈವಿಂಗ್​ ಲೈಸನ್ಸ್​ ಇಲ್ಲದೇ ಬೈಕ್​- ಕಾರು ಡ್ರೈವ್ ಮಾಡುತ್ತಿದ್ದಾರೆ. ಹೋಂ ಗಾರ್ಡ್​​ನಿಂದ ಹಿಡಿದು ಸಬ್​ ಇನ್ಸ್​ಪೆಕ್ಟರ್​​ವರೆಗೂ ಡ್ರೈವಿಂಗ್​ ಲೈಸನ್ಸ್​ ಹಿಂದಿಲ್ಲ. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಕಮಿಷನರ್​​ ಎಲ್ಲರಿಗೂ ಡೆಡ್​ಲೈನ್​ ನೀಡಿದ್ದು, ಅಷ್ಟರೊಳಗೆ ಲೈಸನ್ಸ್​​ ಸಿದ್ಧಪಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿರಿ: ಇಂದೆಂಥಾ ಕರ್ಮ.. ಆನ್​ಲೈನ್​​ ಕ್ಲಾಸ್​ ಶುರುವಾಗ್ತಿದ್ದಂತೆ ಅಶ್ಲೀಲ ವಿಡಿಯೋ ಪ್ರಸಾರ!

ಒಂದು ವೇಳೆ ಡ್ರೈವಿಂಗ್ ಲೈಸನ್ಸ್​ ಇಲ್ಲದೇ ಹೋದರೆ ಜನಸಾಮಾನ್ಯರಂತೆ ನೀವೂ ದಂಡ ಕಟ್ಟಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಕೊರೊನಾ ವೈರಸ್ ಕಾರಣದಿಂದಾಗಿ ಕೆಲವರು LLR ಪಡೆದುಕೊಳ್ಳುವಲ್ಲಿ ತಡವಾಗುತ್ತಿದ್ದು, ನಿತ್ಯ 250 ಜನರಿಗೆ ಟೆಸ್ಟ್​ ಮಾಡಿಸಿ, ಅವರಿಗೆ ಲೈಸನ್ಸ್​ ಕೊಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಇಲ್ಲಿನ RTA ಇಲಾಖೆ ತಿಳಿಸಿದೆ.

ಆಂಧ್ರಪ್ರದೇಶದ ವಿಜಯವಾಡವೊಂದರಲ್ಲೇ ಇಷ್ಟೊಂದು ಪೊಲೀಸರ ಬಳಿ ಡ್ರೈವಿಂಗ್​ ಲೈಸನ್ಸ್​ ಇಲ್ಲವೆಂದರೆ, ಇಡೀ ದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ಸರ್ಕಾರಿ ಸಿಬ್ಬಂದಿ ಬಳಿ ಲೈಸನ್ಸ್​ ಇಲ್ಲದೇ ಇರಬಹುದು ಎಂಬ ಮಾತು ಕೇಳಿ ಬರಲು ಶುರುವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.