ETV Bharat / bharat

ಭೀಕರ ರಸ್ತೆ ಅಪಘಾತ: ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸಾವು, 6 ಮಂದಿಗೆ ಗಾಯ - ಟ್ರಕ್​ ಆಟೋ ಮುಖಾಮುಖಿ ಡಿಕ್ಕಿ

Bihar Accident; ಮುಂಗೇರ್ ಜಿಲ್ಲೆಯಲ್ಲಿ ಟ್ರಕ್​ ಮತ್ತು ಆಟೋ ಮುಖಾಮುಖಿ ಡಿಕ್ಕಿ ಹೊಡೆದು ಭೀಕರ ಅಪಫಾತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದಾರೆ, 6 ಮಂದಿ ಗಾಯಗೊಂಡಿದ್ದಾರೆ.

bihar road accident
ಬಿಹಾರದಲ್ಲಿ ಭೀಕರ ರಸ್ತೆ ಅಪಘಾತ
author img

By

Published : Nov 23, 2021, 4:10 PM IST

ಮುಂಗೇರ್( ಬಿಹಾರ): ಮುಂಗೇರ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದರೆ, 6 ಮಂದಿ ಗಾಯಗೊಂಡಿದ್ದಾರೆ.

ಮುಂಗೇರ್ ಜಿಲ್ಲೆಯ ಖರಗ್‌ಪುರ್​-ಗಂಗ್ಟಾ ಮುಖ್ಯ ರಸ್ತೆಯಲ್ಲಿ ಬರುವ ನಜ್ರಿ ಗ್ರಾಮದ ಬಳಿ ಟ್ರಕ್​ ಮತ್ತು ಆಟೋ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ದುರ್ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಹಾರದಲ್ಲಿ ಭೀಕರ ರಸ್ತೆ ಅಪಘಾತ, ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸಾವು

ವಿದ್ಯಾರ್ಥಿಗಳು ಟ್ಯೂಷನ್​ಗೆಂದು ಗಂಗ್ಟಾದಿಂದ ಆಟೋದಲ್ಲಿ ಹವೇಲಿ ಖರಗ್‌ಪುರ ಕಡೆಗೆ ಹೋಗುತ್ತಿದ್ದರು. ಹವೇಲಿ ಖರಗ್‌ಪುರ ಕಡೆಯಿಂದ ವೇಗವಾಗಿ ಬಂದ ಟ್ರಕ್​​ ಆಟೋಗೆ ಡಿಕ್ಕಿ ಹೊಡೆದಿದೆ. ಆಟೋದಲ್ಲಿದ್ದ ಮೂವರು ವಿದ್ಯಾರ್ಥಿಗಳು, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಮೃತ ವಿದ್ಯಾರ್ಥಿಗಳನ್ನು ಗಂಗ್ಟಾ ಪ್ರದೇಶದ ಚಂದನ್‌ಪುರ ಮತ್ತು ರಾಯಪುರ ಗ್ರಾಮದವರೆಂದು ಗುರುತಿಸಲಾಗಿದೆ.

ಇದನ್ನೂ ಓದಿ: Salem cylinder blast: ಸೇಲಂನಲ್ಲಿ ಸಿಲಿಂಡರ್​ ಬ್ಲಾಸ್ಟ್​​​: ನಾಲ್ವರು ದುರ್ಮರಣ, 14 ಮಂದಿ ಗಂಭೀರ

ಘಟನೆ ವರದಿಯಾದ ತಕ್ಷಣ ಸ್ಥಳೀಯರು ಆಕ್ರೋಶಗೊಂಡು ಟ್ರಕ್‌ಗೆ ಬೆಂಕಿ ಹಚ್ಚಿ ಗಂಗ್ಟಾ ಹವೇಲಿ ಖರಗ್‌ಪುರ ಮುಖ್ಯ ರಸ್ತೆಯನ್ನು ತಡೆದರು. ಲಾರಿ ಚಾಲಕ ಮತ್ತು ಸಹಾಯಕ ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಗ್ಟಾ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.