ರಾಂಚಿ (ಜಾರ್ಖಂಡ್): 34ನೇ ರಾಷ್ಟ್ರೀಯ ಕ್ರೀಡಾಕೂಟದ ಹಗರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಮಾಜಿ ಕ್ರೀಡಾ ಸಚಿವ ಮತ್ತು ಕಾಂಗ್ರೆಸ್ ನಾಯಕ ಬಂಧು ಟಿರ್ಕೆ ಎರಡು ನಿವಾಸಗಳು ಸೇರಿದಂತೆ 16 ಸ್ಥಳಗಳಲ್ಲಿ ಸಿಬಿಐ ಗುರುವಾರ ದಾಳಿ ಮಾಡಿದೆ. ಮೊರ್ಹಬಾದಿಯ ದೀನದಯಾಳ್ ನಗರದಲ್ಲಿರುವ ಟಿರ್ಕೆ ಅವರ ಅಧಿಕೃತ ನಿವಾಸ ಮತ್ತು ಪಂಡಾರದಲ್ಲಿರುವ ಅವರ ಎರಡನೇ ನಿವಾಸದಲ್ಲಿ ಸಿಬಿಐ ಅಧಿಕಾರಿಗಳು ದಾಖಲೆಗಳ ಪರಿಶೀಲಿಸುತ್ತಿದ್ದಾರೆ.
ದೆಹಲಿ ಮತ್ತು ಬಿಹಾರದಲ್ಲಿ ತಲಾ ಎರಡು ಸ್ಥಳಗಳು ಹಾಗೂ ಜಾರ್ಖಂಡ್‌ನ 12 ಸ್ಥಳಗಳಲ್ಲಿ ಈ ದಾಳಿ ನಡೆಸಲಾಗಿದೆ. ಜಾರ್ಖಂಡ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಕಮ್ ಬೊಕಾರೊ, ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ವಿಪಿನ್ ಕುಮಾರ್ ಸಿಂಗ್ ಅವರ ನಿವಾಸಗಳ ಮೇಲೂ ರೇಡ್ ಮಾಡಲಾಗಿದೆ.
ಈ ಮೂದಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ನಡೆಸುತ್ತಿತ್ತು. ಎಸಿಬಿ ತನಿಖೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ಜಾರ್ಖಂಡ್ ಹೈಕೋರ್ಟ್ ಸಿಬಿಐ ತನಿಖೆಗೆ ವಹಿಸಿತ್ತು. ಈ ಪ್ರಕರಣದಲ್ಲಿ ಒಟ್ಟು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಟಿರ್ಕೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.
ಇದನ್ನೂ ಓದಿ: ದೆಹಲಿಯಲ್ಲಿ ಕ್ರೀಡಾಪಟುಗಳಿಗಾಗಿ ರಾತ್ರಿ 10ರವರೆಗೆ ಸ್ಟೇಡಿಯಂ ಓಪನ್