ETV Bharat / bharat

ಹುಟ್ಟುಹಬ್ಬಕ್ಕೆಂದು ಕರೆಸಿ ಬಾಲಕಿಗೆ ಬೆಂಕಿ ಹಚ್ಚಿದ ಯುವಕ: ಇಬ್ಬರೂ ಸಾವು - ಸುಟ್ಟುಗಾಯಗಳಾಗಿದ್ದ ಬಾಲಕಿ ಮತ್ತು ಯುವಕ ಸಾವು

ಹುಟ್ಟುಹಬ್ಬದ ಆಚರಣೆಗೆಂದು ಬಾಲಕಿಯನ್ನು ಮನೆಗೆ ಕರೆಸಿದ ಯುವಕ ಆಕೆಗೆ ಬೆಂಕಿ ಹಚ್ಚಿ, ಬಳಿಕ ಆತನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪಾಲಕ್ಕಾಡ್‌ನ ಕೊಲ್ಲಂಗೋಡ್‌ನಲ್ಲಿ ನಡೆದಿದೆ. ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ..

ಹುಟ್ಟುಹಬ್ಬಕ್ಕೆಂದು ಕರೆಸಿ ಬಾಲಕಿಗೆ ಬೆಂಕಿ ಹಚ್ಚಿದ ಯುವಕ

author img

By

Published : Apr 24, 2022, 5:32 PM IST

ಪಾಲಕ್ಕಾಡ್ (ಕೇರಳ): ಯುವಕನೋರ್ವ ತನ್ನ ಹುಟ್ಟುಹಬ್ಬದ ಆಚರಣೆಗಾಗಿ ಅಪ್ರಾಪ್ತೆಯನ್ನು ತನ್ನ ಮನೆಗೆ ಕರೆಸಿದ್ದಾನೆ. ಬಳಿಕ ಬಾಲಕಿಗೆ ಕೋಣೆಯಲ್ಲಿ ಬೆಂಕಿ ಹಚ್ಚಿ, ಆತನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಎರ್ನಾಕುಲಂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 16 ವರ್ಷದ ಬಾಲಕಿ ಮತ್ತು ಯುವಕ ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಭಾನುವಾರ ಬೆಳಗ್ಗೆ 7 ಗಂಟೆಗೆ ಪಾಲಕ್ಕಾಡ್‌ನ ಕೊಲ್ಲಂಗೋಡ್‌ನಲ್ಲಿ ಈ ಘಟನೆ ನಡೆದಿದೆ. ಬಾಲಸುಬ್ರಮಣ್ಯಂ (23) ಎಂಬ ಯುವಕ ತನ್ನ ಹುಟ್ಟುಹಬ್ಬದ ಆಚರಣೆಗಾಗಿ ಬಾಲಕಿಯನ್ನು ಮನೆಗೆ ಕರೆಸಿಕೊಂಡಿದ್ದಾನೆ. ಘಟನೆಯ ವೇಳೆ ಮನೆಯಲ್ಲಿ ಅವನ ತಾಯಿ ಮತ್ತು ಕಿರಿಯ ಸಹೋದರ ಮಾತ್ರವೇ ಇದ್ದರು.

ಇದನ್ನೂ ಓದಿ: ನೋಡಿ: ಮಹಾರಾಷ್ಟ್ರದಲ್ಲಿ ಎಟಿಎಂ ಎಗರಿಸಲು ಜೆಸಿಬಿ ತಂದ ದರೋಡೆಕೋರರು!

ಬಾಲಕಿ ಮತ್ತು ಯುವಕನನ್ನು ಮೊದಲು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಯುವಕ ಮತ್ತು ಬಾಲಕಿ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರ ಸಂಬಂಧಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರಂತೆ. ಬಹುಶಃ ಇದೇ ಕಾರಣಕ್ಕೆ ಬಾಲಕಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎನ್ನುತ್ತಾರೆ ಸ್ಥಳೀಯರು.

ಆದರೆ, ಬಾಲಕಿ ಜತೆಗಿನ ಸಂಬಂಧದ ಬಗ್ಗೆ ಆತ ಏನನ್ನೂ ಹೇಳಿಲ್ಲ. ಹುಡುಗಿ ಮನೆಗೆ ಹೇಗೆ ಬಂದಳು ಎಂಬುದೂ ನಮಗೆ ಗೊತ್ತಿಲ್ಲ ಎಂದು ಯುವಕನ ತಾಯಿ ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.