ETV Bharat / bharat

ದೆಹಲಿಯಲ್ಲಿ ಡೆಂಘೀ ಮಾರಿಗೆ ಈ ವರ್ಷ 23 ಬಲಿ.. ಕಳೆದ 6 ವರ್ಷಗಳಲ್ಲಿ ಇದು ಅತ್ಯಧಿಕ..

ಈ ವರ್ಷದ ನವೆಂಬರ್ 29ರವರೆಗೆ ಡೆಂಘೀ ಸಾವಿನ ಸಂಖ್ಯೆ ಒಂಬತ್ತರಷ್ಟಿತ್ತು. ಇದರಲ್ಲಿ 3 ವರ್ಷದ ಬಾಲಕಿ ಮತ್ತು ಬಾಲಕ ಕೂಡ ಡೆಂಘೀಗೆ ಬಲಿಯಾಗಿದ್ದರು. ಇದೀಗ ಈ ಸಾವಿನ ಸಂಖ್ಯೆ 23ಕ್ಕೆ ಏರಿಕೆ ಕಂಡಿರುವುದು ಜನರಲ್ಲಿ ಭೀತಿ ಸೃಷ್ಟಿಸಿದೆ..

author img

By

Published : Dec 27, 2021, 4:47 PM IST

dengue
ದೆಹಲಿಯಲ್ಲಿ ಡೆಂಗ್ಯೂ

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ವರ್ಷ 9,545 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 23 ಮಂದಿ ರೋಗಕ್ಕೆ ಬಲಿಯಾಗಿದ್ದಾರೆ. ಇದು ಕಳೆದ 6 ವರ್ಷಗಳಲ್ಲಿಯೇ ಅತ್ಯಧಿಕ ಎಂದು ಸರ್ಕಾರ ಮಾಹಿತಿ ನೀಡಿದೆ.

ಈ ಕುರಿತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ದಾಖಲೆ ಬಿಡುಗಡೆ ಮಾಡಿದೆ. ಈ ವರ್ಷದ ಡಿಸೆಂಬರ್ 4ರವರೆಗೆ ದೆಹಲಿಯಲ್ಲಿ 8,975 ಡೆಂಘೀ ಪ್ರಕರಣ ದಾಖಲಾಗಿವೆ. ಈ ಹಿಂದೆ ಅಂದರೆ 2016ರಲ್ಲಿ 4,431 ಪ್ರಕರಣಗಳಲ್ಲಿ 10 ಸಾವು, 2017ರಲ್ಲಿ 4,726 ಪ್ರಕರಣದಲ್ಲಿ 10 ಬಲಿ, 2018 ರಲ್ಲಿ 2,798 ಕೇಸ್ ಕಾಣಿಸಿಕೊಂಡು ಅದರಲ್ಲಿ4 ಜನರು ಅಸನೀಗಿದ್ದರು.

ಇನ್ನು 2019ರಲ್ಲಿ 2,036 ಡೆಂಘೀ ಕೇಸ್​ಗಳಲ್ಲಿ 2 ಸಾವಾಗಿತ್ತು. 2020 ರಲ್ಲಿ 1,072 ಪ್ರಕರಣಗಳು ದಾಖಲಾಗಿ ಕೇವಲ ಒಬ್ಬರು ಮಾತ್ರ ಮೃತಪಟ್ಟಿದ್ದರು. ಈ ಬಾರಿ ಡೆಂಘೀ ವ್ಯಾಪಿಸುವ ಪ್ರಮಾಣ ಹೆಚ್ಚಾಗಿದೆ ಎಂಬುದು ದಾಖಲೆಯಲ್ಲಿ ಉಲ್ಲೇಖವಾಗಿದೆ.

ಇನ್ನು 2015ರಲ್ಲಿ ಡೆಂಘೀ ನರ್ತನ ತೀವ್ರವಾಗಿತ್ತು. ಆ ವರ್ಷ 10,600 ಪ್ರಕರಣಗಳು ಪತ್ತೆಯಾಗುವ ಮೂಲಕ ದೆಹಲಿ ನಗರ ಡೆಂಘೀ ಹೊಡೆತಕ್ಕೆ ನಲುಗಿ ಹೋಗಿತ್ತು ಎಂದು ತಿಳಿಸಿದೆ.

ಇದನ್ನೂ ಓದಿ: ರಾತ್ರಿ ಕರ್ಫ್ಯೂ, ಬೆಳಗ್ಗೆ ಬೃಹತ್​​ ಚುನಾವಣಾ ರ್‍ಯಾಲಿ.. ಬಿಜೆಪಿ ವಿರುದ್ಧ ವರುಣ್​ ಗಾಂಧಿ ವಾಗ್ದಾಳಿ..

ಈ ವರ್ಷದ ನವೆಂಬರ್ 29ರವರೆಗೆ ಡೆಂಘೀ ಸಾವಿನ ಸಂಖ್ಯೆ ಒಂಬತ್ತರಷ್ಟಿತ್ತು. ಇದರಲ್ಲಿ 3 ವರ್ಷದ ಬಾಲಕಿ ಮತ್ತು ಬಾಲಕ ಕೂಡ ಡೆಂಘೀಗೆ ಬಲಿಯಾಗಿದ್ದರು. ಇದೀಗ ಈ ಸಾವಿನ ಸಂಖ್ಯೆ 23ಕ್ಕೆ ಏರಿಕೆ ಕಂಡಿರುವುದು ಜನರಲ್ಲಿ ಭೀತಿ ಸೃಷ್ಟಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.