ETV Bharat / bharat

ಗಂಡನ ಮನೆಯವರ ವರದಕ್ಷಿಣೆ ಕಿರುಕುಳ: ಆತ್ಮಹತ್ಯೆಗೆ ಶರಣಾದ 21ರ ಯುವತಿ - ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ

ಎಲ್​ಎಲ್​ಬಿ ವ್ಯಾಸಂಗ ಮಾಡ್ತಿದ್ದ ಮಹಿಳೆ ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ.

21 Year old women dies
21 Year old women dies
author img

By

Published : Nov 23, 2021, 6:18 PM IST

Updated : Nov 23, 2021, 7:41 PM IST

ಕೊಚ್ಚಿ(ಕೇರಳ): ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ 21 ವರ್ಷದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕೇರಳದ ಎರ್ನಾಕುಲಂನ ಆಲುವಾದಲ್ಲಿ ಈ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.

ಯುವತಿ ಆತ್ಮಹತ್ಯೆಗೆ ಶರಣಾಗುವುದಕ್ಕೂ ಮುಂಚಿತವಾಗಿ ಸೊಸೈಡ್ ನೋಟ್ ಬರೆದಿಟ್ಟಿದ್ದು, ಇದರಲ್ಲಿ ಗಂಡ ಹಾಗೂ ಅತ್ತೆಯ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಜೊತೆಗೆ, ಪೊಲೀಸ್​ ಠಾಣೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಇದರ ಬಗ್ಗೆ ದೂರು ನೀಡಿದ್ದಾಗಿ ತಿಳಿದು ಬಂದಿದೆ.

ಮೃತ ಮಹಿಳೆಯನ್ನು 21 ವರ್ಷದ ಮೌಫಿಯಾ ಪರ್ವೀನ್​ ಎಂದು ಗುರುತಿಸಲಾಗಿದ್ದು, ಈಕೆ ಎಲ್​ಎಲ್​ಬಿ ವ್ಯಾಸಂಗ ಮಾಡುತ್ತಿದ್ದಳು ತಿಳಿದು ಬಂದಿದೆ. ಈಗಾಗಲೇ ಸೊಸೈಡ್​ ನೋಟ್​ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಅದರಲ್ಲಿ ಸರ್ಕಲ್​ ಇನ್ಸ್​ಪೆಕ್ಟರ್​​ ನಿರ್ಲಕ್ಷ್ಯದ ಬಗ್ಗೆ ಸಹ ಬರೆದುಕೊಂಡಿದ್ದಾಳೆ. ಇಡುಕ್ಕಿ ಜಿಲ್ಲೆಯ ಖಾಸಗಿ ಕಾಲೇಜ್​ವೊಂದರಲ್ಲಿ ಎಲ್​ಎಲ್​ಬಿ ವ್ಯಾಸಂಗ ಮಾಡುತ್ತಿದ್ದ ಮಹಿಳೆ ಕಳೆದ ಕೆಲ ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಇದರ ಬೆನ್ನಲ್ಲೇ ನಿನ್ನೆ ಮನೆಯ ಕೋಣೆವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದನ್ನೂ ಓದಿ: ಮತ್ತು ಬರುವ ಔಷಧಿ ನೀಡಿ ಯುವತಿ ಮೇಲೆ ಗ್ಯಾಂಗ್​ ರೇಪ್​.. ಕಾಮುಕರ ಬಂಧನಕ್ಕೆ ತಲಾಶ್​ ​

ಪ್ರಕರಣದ ಬಗ್ಗೆ ಮಾತನಾಡಿರುವ ಆಲುವಾ ಗ್ರಾಮೀಣ ಪೊಲೀಸ್ ಠಾಣೆ ವರಿಷ್ಠಾಧಿಕಾರಿ ಕೆ. ಕಾರ್ತಿಕ್​​, ಮೃತದೇಹವನ್ನ ಈಗಾಗಲೇ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದ್ದು, ಈಗಾಗಲೇ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿರುವುದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್​​​ 10ರಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ದೂರು ದಾಖಲು ಮಾಡಿದ್ದು, ನವೆಂಬರ್​ 11ರಂದು ಪೊಲೀಸ್ ಠಾಣೆಗೆ ಅದರ ಪ್ರತಿ ಬಂದಿದೆ. ಮಹಿಳೆ ಸೊಸೈಡ್​ ನೋಟ್​ನಲ್ಲಿ ಬರೆದಿರುವ ವಿಚಾರದ ಬಗ್ಗೆ ಕೂಡ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Last Updated : Nov 23, 2021, 7:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.