ETV Bharat / bharat

ಛಾವಾಲಾ ರೇಪ್​ ಕೇಸ್​: ಮರಣದಂಡನೆಗೆ ಗುರಿಯಾಗಿದ್ದ ಮೂವರು ಅಪರಾಧಿಳನ್ನ ಖುಲಾಸೆ ಮಾಡಿ ಸುಪ್ರೀಂ

ದೆಹಲಿಯ ಛಾವಾಲಾ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಮೂವರು ಅಪರಾಧಿಗಳನ್ನು ಸುಪ್ರೀಂಕೋರ್ಟ್​ ಪ್ರಕರಣದಿಂದಲೇ ಖುಲಾಸೆ ಮಾಡಿದೆ.

chhawala-rape-case
ಛಾವಾಲಾ ರೇಪ್​ ಕೇಸ್​
author img

By

Published : Nov 7, 2022, 5:04 PM IST

ನವದೆಹಲಿ: ದೆಹಲಿಯ ಛಾವಾಲಾ ಪ್ರದೇಶದಲ್ಲಿ 2012 ರಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಮೂವರು ಆರೋಪಿಗಳನ್ನು ಸುಪ್ರೀಂಕೋರ್ಟ್​ ಖುಲಾಸೆ ಮಾಡಿ, ದೆಹಲಿ ಹೈಕೋರ್ಟ್​ ನೀಡಿದ ಆದೇಶವನ್ನು ರದ್ದು ಮಾಡಿದೆ.

10 ವರ್ಷಗಳ ಹಿಂದೆ 19 ವರ್ಷದ ಯುವತಿಯೊಬ್ಬಳನ್ನು ಅಪಹರಿಸಿದ್ದ ಮೂವರು ಆಕೆಯ ಮೇಲೆ ಪೈಶಾಚಿಕ ಕೃತ್ಯ ಎಸಗಿ ಬಳಿಕ, ಕಬ್ಬಿಣದ ರಾಡು ಮತ್ತು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದರು ಎಂದು ಆಪಾದಿಸಲಾಗಿತ್ತು. ಬಳಿಕ ಶವವನ್ನು ಹರಿಯಾಣದ ರೇವಾರಿ ಜಿಲ್ಲೆಯ ಗ್ರಾಮವೊಂದರ ಹೊಲದಲ್ಲಿ ಬಿಸಾಡಿ ಪರಾರಿಯಾಗಿದ್ದರು ಎಂದು ದೂರು ನೀಡಲಾಗಿತ್ತು.

ಶವ ಪತ್ತೆಯಾದ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದರು. ದೆಹಲಿ ಹೈಕೋರ್ಟ್​ನಲ್ಲಿ ವಿಚಾರಣೆ ನಡೆದು ಮೂವರಿಗೂ ಅತ್ಯಾಚಾರ, ಕೊಲೆ ಆರೋಪದಡಿ ಮರಣ ದಂಡನೆ ಶಿಕ್ಷೆ ವಿಧಿಸಿತ್ತು.

ಇದರ ವಿರುದ್ಧ ಆರೋಪಿಗಳು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್​, ಮೂವರನ್ನೂ ಪ್ರಕರಣದಿಂದ ಖುಲಾಸೆ ಮಾಡಿದೆ.

ಓದಿ: ಆರ್ಥಿಕ ದುರ್ಬಲ ವರ್ಗದವರಿಗೆ ಮೀಸಲಾತಿ: ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.