ನವದೆಹಲಿ: ಕಳೆದ ಒಂದು ದಿನದಲ್ಲಿ ದೇಶದಲ್ಲಿ ಒಟ್ಟು 163 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರೊಂದಿಗೆ ಈವರೆಗೆ ದೇಶದಲ್ಲಿ ಕೊರೊನಾವೈರಸ್ ಪೀಡಿತರ ಒಟ್ಟು ಸಂಖ್ಯೆ ನಾಲ್ಕು ಕೋಟಿ ನಲ್ವತ್ತಾರು ಲಕ್ಷ (4,46,76,678) ದಾಟಿದೆ. ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ 3,380ಕ್ಕೆ ಇಳಿಕೆಯಾಗಿದೆ.
ಶುಕ್ರವಾರ ಬೆಳಗ್ಗೆ ಎಂಟು ಗಂಟೆಗೆ ಭಾರತದ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಪ್ಡೇಟ್ ಪ್ರಕಾರ, ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿನಿಂದ ಇಬ್ಬರು ಹಾಗೂ ದೆಹಲಿಯಲ್ಲಿ ಓರ್ವ ರೋಗಿ ಸಾವನ್ನಪ್ಪಿದ ನಂತರ ಸಾವಿನ ಸಂಖ್ಯೆ 5,30,690ಕ್ಕೆ ಏರಿದೆ.
ಸೋಂಕಿನಿಂದಾದ ಸಾವಿನ ಅಂಕಿ - ಅಂಶಗಳನ್ನು ಮರು ಹೊಂದಾಣಿಕೆ ಮಾಡುವಾಗ, ರೋಗದಿಂದಾಗಿ ಪ್ರಾಣ ಕಳೆದುಕೊಂಡ ರೋಗಿಗಳ ಪಟ್ಟಿಗೆ ಕೇರಳ ಇನ್ನೂ ಆರು ಹೆಸರುಗಳನ್ನು ಸೇರಿಸಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಕೊರೊನಾವೈರಸ್ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ 3,380 ಕ್ಕೆ ಇಳಿದಿದೆ. ಇದು ಒಟ್ಟು ಪ್ರಕರಣಗಳ 0.01 ಪ್ರತಿಶತವಾಗಿದೆ. ಕಳೆದ 24 ಗಂಟೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆಯಲ್ಲಿ 22 ಪ್ರಕರಣಗಳು ಕಡಿಮೆಯಾಗಿವೆ.
ದೇಶದಲ್ಲಿ ರೋಗಿಗಳ ಚೇತರಿಕೆಯ ರಾಷ್ಟ್ರೀಯ ದರ 98.80 ಪ್ರತಿಶತವಾಗಿದೆ. ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಇದುವರೆಗೆ ಒಟ್ಟು 4,41,42,608 ಜನ ಸೋಂಕು ಮುಕ್ತರಾಗಿದ್ದಾರೆ. ಕೋವಿಡ್ -19 ನಿಂದ ಸಾವಿನ ಪ್ರಮಾಣ 1.19 ಪ್ರತಿಶತವಾಗಿದೆ.
ಆರೋಗ್ಯ ಸಚಿವಾಲಯದ ವೆಬ್‌ಸೈಟ್ ಪ್ರಕಾರ, ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿ ಇದುವರೆಗೆ 220.03 ಡೋಸ್ ಆ್ಯಂಟಿ ಕೋವಿಡ್ ಲಸಿಕೆ ನೀಡಲಾಗಿದೆ. ಆಗಸ್ಟ್ 7, 2020 ರಂದು ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿತ್ತು. ಆಗಸ್ಟ್ 23, 2020 ರಂದು ಈ ಸಂಖ್ಯೆ 30 ಲಕ್ಷ ಮತ್ತು ಸೆಪ್ಟೆಂಬರ್ 5, 2020 ರಂದು 40 ಲಕ್ಷಕ್ಕೂ ಹೆಚ್ಚಾಗಿತ್ತು. 16 ಸೆಪ್ಟೆಂಬರ್ 2020 ರಂದು 50 ಲಕ್ಷ, 28 ಸೆಪ್ಟೆಂಬರ್ 2020 ರಂದು 60 ಲಕ್ಷ, 11 ಅಕ್ಟೋಬರ್ 2020 ರಂದು 70 ಲಕ್ಷ, 29 ಅಕ್ಟೋಬರ್ 2020 ರಂದು 80 ಲಕ್ಷ ಮತ್ತು ನವೆಂಬರ್ 20 ರಂದು 90 ಲಕ್ಷ ದಾಟಿತ್ತು.
19 ಡಿಸೆಂಬರ್ 2020 ರಂದು ಸೋಂಕಿತರ ಸಂಖ್ಯೆ ಒಂದು ಕೋಟಿ ದಾಟಿತ್ತು. ಕಳೆದ ವರ್ಷ ಮೇ 4 ರಂದು ಸೋಂಕಿತರ ಸಂಖ್ಯೆ ಎರಡು ಕೋಟಿ ದಾಟಿತ್ತು ಮತ್ತು ಜೂನ್ 23, 2021 ರಂದು ಮೂರು ಕೋಟಿ ದಾಟಿತ್ತು. ಈ ವರ್ಷದ ಜನವರಿ 25 ರಂದು ಒಟ್ಟು ಸೋಂಕಿತರ ಸಂಖ್ಯೆ ನಾಲ್ಕು ಕೋಟಿ ದಾಟಿತ್ತು.
ಇದನ್ನೂ ಓದಿ: ಕೋವಿಡ್ ನಿಯಂತ್ರಣಕ್ಕೆ ಎಲ್ಲ ಕ್ರಮ.. ಔಷಧ ಸಾಗಣೆಗೆ ಡ್ರೋನ್ಗಳ ಬಳಕೆ; ಜ್ಯೋತಿರಾದಿತ್ಯ ಸಿಂದಿಯಾ