ಚಿಂದ್ವಾರ(ಮಧ್ಯಪ್ರದೇಶ): 12 ವರ್ಷದ ಮುಸ್ಲಿಂ ವಿದ್ಯಾರ್ಥಿನಿಯೋರ್ವಳು ಭಗವದ್ಗೀತೆಯ 500 ಶ್ಲೋಕಗಳನ್ನು ಪಟಪಟನೇ ಹೇಳುತ್ತಾಳೆ. ಮಧ್ಯಪ್ರದೇಶದ ಚಿಂದ್ವಾರ ಪ್ರದೇಶದಲ್ಲಿ ಈ ವಿದ್ಯಾರ್ಥಿನಿ ವಾಸಿಸುತ್ತಿದ್ದಾಳೆ.
ಮುಷಾರಿಫ್ ಖಾನ್ ಎಂಬ 12 ವರ್ಷದ ಮುಸ್ಲಿಂ ವಿದ್ಯಾರ್ಥಿನಿ 500 ಶ್ಲೋಕ ಕಂಠಪಾಠ ಮಾಡಿದ್ದು, ಚಿಂದ್ವಾರದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾಳೆ. ಇಲ್ಲಿಯವರೆಗೆ 500 ಪಂದ್ಯಗಳನ್ನ ನೆನಪಿನಲ್ಲಿಟ್ಟುಕೊಂಡಿದ್ದು, ಸುಲಭವಾಗಿ ಎಲ್ಲರ ಮುಂದೆ ಹೇಳುತ್ತಾಳೆ.
ಮಹಾಭಾರತದ ಯುದ್ಧದ ಸಮಯದಲ್ಲಿ ಅರ್ಜುನ್ ಕೌರವ ಸೈನ್ಯದೊಂದಿಗೆ ಯುದ್ಧ ಮಾಡಲು ಹೋಗುವುದು, ಇದಾದ ಬಳಿಕ 38ನೇ ಶ್ಲೋಕದಲ್ಲಿ ಶ್ರೀಕೃಷ್ಣ ಕರ್ಮದ ಬಗ್ಗೆ ಮಾತನಾಡಿರುವುದರ ಬಗ್ಗೆ ಆಕೆ ಹೇಳಿದ್ದಾಳೆ. ಮುಷಾರಿಫ್ ಖಾನ್ ಅವರ ತಾಯಿ ಕುರಾನ್ ಅನುಸರಣೆ ಮಾಡ್ತಿದ್ದು, ಅವರ ಮಗಳು ಭಗವದ್ಗೀತೆ ಕಲಿಯತ್ತಿರುವುದು ತನಗೆ ಸಂತೋಷವಾಗುತ್ತಿದೆ ಎಂದಿದ್ದಾರೆ.