ಸಿಕರ್ (ರಾಜಸ್ಥಾನ): ರಾಜಸ್ಥಾನದ ಸಿಕರ್ ಜಿಲ್ಲೆಯ ಖಂಡೇಲಾ ಬಳಿ ವರ್ಷದ ಮೊದಲ ದಿನವೇ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಖಂಡೇಲಾ-ಪಲ್ಸಾನಾ ರಸ್ತೆಯಲ್ಲಿ ಪಿಕಪ್ ವಾಹನವು ಮೊದಲು ಬೈಕ್‌ಗೆ ಡಿಕ್ಕಿ ಹೊಡೆದು, ಬಳಿಕ ಎದುರಿನಿಂದ ಬರುತ್ತಿದ್ದ ಬೋರ್‌ವೆಲ್ ಲಾರಿಗೆ ಗುದ್ದಿತ್ತು.
ಮೃತದೇಹಗಳನ್ನು ಖಂಡೇಲಾ ಮತ್ತು ಪಲ್ಸಾನಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಪಘಾತದಲ್ಲಿ ಮೃತಪಟ್ಟವರು ರಾಜಸ್ಥಾನದ ಸಮೋದ್ ಪ್ರದೇಶದ ನಿವಾಸಿಗಳಾಗಿದ್ದಾರೆ. ಹೊಸ ವರ್ಷದಂದು ಜನರು ಪಿಕಪ್ ವಾಹನದಲ್ಲಿ ಸಾವರಖಂಡೇಲಾ ದೇವಸ್ಥಾನಕ್ಕೆ ಭೇಟಿ ನೀಡಲು ಬಂದಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಖಂಡೇಲಾ ಪೊಲೀಸ್ ಠಾಣೆ ಎಸ್‌ಹೆಚ್‌ಒ ಸೋಹನ್‌ಲಾಲ್ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರು ಹೇಳುವಂತೆ, ಖಂಡೇಲಾ ಕಡೆಯಿಂದ ಬೈಕ್ ಬರುತ್ತಿತ್ತು. ಇದೇ ವೇಳೆ ಎದುರಿನಿಂದ ಬಂದ ಪಿಕಪ್ ವಾಹನ ಬೈಕ್‌ಗೆ ಡಿಕ್ಕಿಯಾಗಿದೆ. ನಂತರ ಎರಡೂ ವಾಹನಗಳು ಬೋರ್‌ವೆಲ್ ವಾಹನಕ್ಕೆ ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಪಿಕಪ್‌ನಲ್ಲಿದ್ದವರಾಗಿದ್ದಾರೆ.
-
सीकर के खंडेला क्षेत्र में पलसाना-खंडेला मार्ग पर हुई सड़क दुर्घटना में 8 लोगों की मृत्यु अत्यंत दुखद है। शोकाकुल परिजनों के प्रति मेरी गहरी संवेदनाएं,ईश्वर उन्हें यह आघात सहने की शक्ति प्रदान करें, दिवंगतों की आत्मा को शांति प्रदान करें।घायलों के शीघ्र स्वास्थ्य लाभ की कामना है।
— Ashok Gehlot (@ashokgehlot51) January 1, 2023 " class="align-text-top noRightClick twitterSection" data="
">सीकर के खंडेला क्षेत्र में पलसाना-खंडेला मार्ग पर हुई सड़क दुर्घटना में 8 लोगों की मृत्यु अत्यंत दुखद है। शोकाकुल परिजनों के प्रति मेरी गहरी संवेदनाएं,ईश्वर उन्हें यह आघात सहने की शक्ति प्रदान करें, दिवंगतों की आत्मा को शांति प्रदान करें।घायलों के शीघ्र स्वास्थ्य लाभ की कामना है।
— Ashok Gehlot (@ashokgehlot51) January 1, 2023सीकर के खंडेला क्षेत्र में पलसाना-खंडेला मार्ग पर हुई सड़क दुर्घटना में 8 लोगों की मृत्यु अत्यंत दुखद है। शोकाकुल परिजनों के प्रति मेरी गहरी संवेदनाएं,ईश्वर उन्हें यह आघात सहने की शक्ति प्रदान करें, दिवंगतों की आत्मा को शांति प्रदान करें।घायलों के शीघ्र स्वास्थ्य लाभ की कामना है।
— Ashok Gehlot (@ashokgehlot51) January 1, 2023
ಸಿಎಂ ಗೆಹ್ಲೋಟ್ ಸಂತಾಪ: ಅಪಘಾತದ ಬಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ವ್ಯಕ್ತಪಡಿಸಿದ್ದಾರೆ. ಸಿಕರ್‌ನ ಖಂಡೇಲಾ ಪ್ರದೇಶದ ಪಲ್ಸಾನಾ-ಖಂಡೇಲಾ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜನರ ಸಾವು ಅತ್ಯಂತ ದುಃಖಕರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಗಲಿದ ಕುಟುಂಬದವರಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಅಪಘಾತದ ಮಾಹಿತಿ ತಿಳಿದು ಸಿಕರ್ ಸಂಸದ ಸುಮೇಧಾನಂದ ಸರಸ್ವತಿ ಮತ್ತು ಮಾಜಿ ಕೇಂದ್ರ ಸಚಿವ ಸುಭಾಷ್ ಮಹರಿಯಾ ಕೂಡ ಪಲ್ಸಾನಾ ಆಸ್ಪತ್ರೆಗೆ ತೆರಳಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
-
सीकर (राजस्थान) में हुए भीषण सड़क हादसे में कई लोगों की मृत्यु हृदयविदारक है। ईश्वर दिवंगत आत्माओं को शांति प्रदान करें तथा शोक संतप्त परिवारों को इस आघात को सहन करने का संबल दें।मेरी गहन संवेदनाएं पीड़ित परिजनों के साथ हैं। घायलों के शीघ्र स्वास्थ्य लाभ की प्रार्थना करता हूं।
— Om Birla (@ombirlakota) January 1, 2023 " class="align-text-top noRightClick twitterSection" data="
">सीकर (राजस्थान) में हुए भीषण सड़क हादसे में कई लोगों की मृत्यु हृदयविदारक है। ईश्वर दिवंगत आत्माओं को शांति प्रदान करें तथा शोक संतप्त परिवारों को इस आघात को सहन करने का संबल दें।मेरी गहन संवेदनाएं पीड़ित परिजनों के साथ हैं। घायलों के शीघ्र स्वास्थ्य लाभ की प्रार्थना करता हूं।
— Om Birla (@ombirlakota) January 1, 2023सीकर (राजस्थान) में हुए भीषण सड़क हादसे में कई लोगों की मृत्यु हृदयविदारक है। ईश्वर दिवंगत आत्माओं को शांति प्रदान करें तथा शोक संतप्त परिवारों को इस आघात को सहन करने का संबल दें।मेरी गहन संवेदनाएं पीड़ित परिजनों के साथ हैं। घायलों के शीघ्र स्वास्थ्य लाभ की प्रार्थना करता हूं।
— Om Birla (@ombirlakota) January 1, 2023
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಂತಾಪ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಈ ಘಟನೆಗೆ ಸಂತಾಪ ಸೂಚಿಸಿದ್ದಾರೆ. ರಾಜಸ್ಥಾನದ ಸಿಕರ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಲವರು ಸಾವನ್ನಪ್ಪಿರುವುದು ಹೃದಯ ವಿದ್ರಾವಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಮತ್ತು ದುಃಖತಪ್ತ ಕುಟುಂಬಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆ : ನದಿಗೆ ಈಜಲು ಹೋದ ಮೂವರು ಮುಳುಗಿ ಸಾವು