ETV Bharat / bharat

4 ತಾಸಲ್ಲಿ 25 ಕಿಮೀ ಈಜಿ ದಾಖಲೆ ಬರೆದ 10 ವರ್ಷದ ಪೋರಿ! - ಕಡಿಮೆ ಅವಧಿಯಲ್ಲಿ ಈಜಿ ಚೆನ್ನೈ ಬಾಲಕಿ ದಾಖಲೆ

ತಮಿಳುನಾಡಿನ 10 ವರ್ಷದ ಬಾಲಕಿ 4 ಗಂಟೆ 48 ನಿಮಿಷದಲ್ಲಿ 25 ಕಿಮೀ ಈಜುವ ಮೂಲಕ ದಾಖಲೆ ಬರೆದಿದ್ದಾರೆ.

chennai-girl
ಚೆನ್ನೈ ಬಾಲಕಿ
author img

By

Published : Apr 26, 2022, 4:03 PM IST

ಚೆನ್ನೈ(ತಮಿಳುನಾಡು): 6ನೇ ತರಗತಿ ಓದುತ್ತಿರುವ 10 ವರ್ಷದ ಬಾಲಕಿ ಸಂಜನಾ ಎಂಬುವವರು ಸತತ 4 ಗಂಟೆ ಈಜಿ 25 ಕಿ.ಮೀ. ಕ್ರಮಿಸಿ ದಾಖಲೆ ನಿರ್ಮಿಸಿದ್ದಾರೆ. ಈಜುಪಟುವಾಗಿರುವ ಚೆನ್ನೈನ ಕೊಟ್ಟೂರುಪುರಂ ನಿವಾಸಿಯಾದ ಈಕೆ ವಿಜಿಪಿ ಬೀಚ್​ನಿಂದ ಮರೀನಾ ಬೀಚ್​ವರೆಗಿನ 25 ಕಿ.ಮೀ ದೂರವನ್ನು 4 ಗಂಟೆ 48 ನಿಮಿಷಗಳಲ್ಲಿ ಕ್ರಮಿಸಿದ್ದಾರೆ.

ನಿನ್ನೆ ಬೆಳಗ್ಗೆ 6.30ರ ಸುಮಾರಿಗೆ ವಿಜಿಪಿ ಬೀಚ್‌ನಿಂದ ಈಜಲು ಶುರು ಮಾಡಿದ ಸಂಜನಾ, 11.30ಕ್ಕೆ ಮರೀನಾ ಬೀಚ್‌ನ ಬಳಿ ಸೇರಿಕೊಂಡರು. ಈ ಸಾಧನೆಯೊಂದಿಗೆ ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಸೇರಿದ್ದಾರೆ. ಚಿಕ್ಕ ವಯಸ್ಸಿನಲ್ಲಿನ ಮಹತ್ತರ ಸಾಧನೆ ಮಾಡಿದ ಬಾಲಕಿಯನ್ನು ಕ್ರೀಡಾ ಅಭಿವೃದ್ಧಿ ಇಲಾಖೆ ಸನ್ಮಾನಿಸಿದೆ.

ಇದನ್ನೂ ಓದಿ: 6-12 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್​; 5-12 ವರ್ಷದ ಮಕ್ಕಳಿಗೆ ಕಾರ್ಬೆವಾಕ್ಸ್ ಲಸಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.