ಹೈದರಾಬಾದ್: ಅಪರಿಚಿತ ಬಂದೂಕುಧಾರಿಗಳು ಗುಂಡುಹಾರಿಸಿದ ಕಾರಣದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡಿರುವ ಘಟನೆ ಹೈದರಾಬಾದ್ನ ಕುಕಟ್ಪಲ್ಲಿಯಲ್ಲಿರುವ ಪಟೇಲ್ ಕುಂಟ ಪಾರ್ಕ್ ಬಳಿಯಿರುವ ಹೆಚ್ಡಿಎಫ್ಸಿ ಎಟಿಎಂ ಕೇಂದ್ರದ ಬಳಿ ನಡೆದಿದೆ.
ಬ್ಯಾಂಕ್ ಸಿಬ್ಬಂದಿ ಅಲಿ ಬೇಗ್ ಮತ್ತು ಶ್ರೀನಿವಾಸ್ ಯಂತ್ರಗಳಲ್ಲಿ ಹಣವನ್ನು ಲೋಡ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಗೊಂಡಿದ್ದ ಅಲಿ ಬೇಗ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಶ್ರೀನಿವಾಸ ಪರಿಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ಸ್ಕ್ರ್ಯಾಪ್ನಲ್ಲಿ ಜೀಪ್ : ಈ ವಿಶಿಷ್ಟ ವಾಹನ ನೋಡಿದ್ರೆ ನೀವೂ ಬೆರಗಾಗ್ತೀರಿ..!
ಬಂದೂಕುಧಾರಿಗಳು ನಗದು ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರಾಬಾದ್ ಪೊಲೀಸರು ಎರಡು ಗುಂಡುಗಳು ಮತ್ತು ಬುಲೆಟ್ ಲಾಕ್ ಅನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.