ETV Bharat / assembly-elections

ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ‌ ತ್ರಿಕೋನ‌ ಸ್ಪರ್ಧೆ: ಶ್ರೀ ಯಲ್ಲಮ್ಮದೇವಿ ಆಶೀರ್ವಾದ ಯಾರಿಗೆ..? - ಮತದಾರರ ಮಾಹಿತಿ

ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಪಕ್ಷಗಳ ಬಲಾಬಲ ನೋಡಿದರೆ ಸದ್ಯಕ್ಕೆ ಗೆಲುವು ಇಂತವರದ್ದೇ ಆಗಲಿದೆ ಎಂದು ನಿಖರವಾಗಿ ಹೇಳುವುದು ಅಸಾಧ್ಯ. ಹಾಗಾಗಿ ಶ್ರೀ ಯಲ್ಲಮ್ಮದೇವಿಯ ಆಶೀರ್ವಾದ ಯಾರಿಗೆ ಸಿಗುತ್ತೆ ಎಂಬುದನ್ನು ಕಾದು‌ ನೋಡಬೇಕಿದೆ ಎನ್ನುತ್ತಿದ್ದಾರೆ ಇಲ್ಲಿನ ಮತದಾರ ಪ್ರಭುಗಳು.

Saundatti Yellamma Assembly Constituency Profile

author img

By

Published : Apr 13, 2023, 4:19 PM IST

ಬೆಳಗಾವಿ: ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಟಿಕೆಟ್​ ಘೋಷಣೆಯಾಗಿದ್ದು, ಚುನಾವಣಾ ಅಖಾಡದಲ್ಲಿ ಗೆದ್ದು ಬೀಗಲು ಅಭ್ಯರ್ಥಿಗಳು‌ ಮತದಾರರ ಓಲೈಕೆಗೆ ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಶಾಸಕರಾಗಿದ್ದ ಆನಂದ ಮಾಮನಿ ಅಕಾಲಿಕ ಅಗಲಿಕೆ ಹಿನ್ನೆಲೆಯಲ್ಲಿ ಅವರ ಪತ್ನಿ ರತ್ನಾ ಮಾಮನಿ ಅವರಿಗೆ ಈ ಬಾರಿ‌ ಬಿಜೆಪಿ‌ ಟಿಕೆಟ್ ಸಿಕ್ಕಿದ್ದು, ಕಾಂಗ್ರೆಸ್ ಈ ಬಾರಿಯೂ ವಿಶ್ವಾಸ ವೈದ್ಯ ಅವರಿಗೆ ಮಣೆ ಹಾಕಿದೆ. ಇನ್ನು ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ‌ ದಿ. ಆನಂದ ಚೋಪ್ರಾ ಸುಪುತ್ರ ಸೌರವ್ ಚೋಪ್ರಾಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಾಳ‌ ಹಾಕಿದ್ದು, ಟಿಕೆಟ್ ಖಚಿತಪಡಿಸಿದ್ದಾರೆ. ಟಿಕೆಟ್​ ಘೋಷಣೆಯಿಂದ ಸಹಜವಾಗಿ ಕ್ಷೇತ್ರ ರಂಗು ಪಡೆದಿದೆ.

Saundatti Yellamma Assembly Constituency Profile
ಸವದತ್ತಿ ಯಲ್ಲಮ್ಮ ಮತಕ್ಷೇತ್ರ

ಆನಂದ ಚಂದ್ರಶೇಖರ ಮಾಮನಿ

ರತ್ನಾ ಮಾಮನಿ ಅವರಿಗೆ ಬಿಜೆಪಿ ಪಕ್ಷದ ವರಿಷ್ಠರು ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಸವದತ್ತಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು‌ ಕೆಲ ಸದಸ್ಯರು ಬಿಜೆಪಿಗೆ ಗುಡ್​​​​​​ ಬೈ ಹೇಳಿದ್ದಲ್ಲದೇ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಬಿಜೆಪಿ ಟಿಕೆಟ್ ಕೇಳಿದ್ದ ವಿರೂಪಾಕ್ಷ ಮಾಮನಿ, ಬಸವರಾಜ ಪಟ್ಟಣಶೆಟ್ಟಿ ಬಿಜೆಪಿಗೆ ಬೆಂಬಲಿಸುವ ಸಾಧ್ಯತೆ ಕಡಿಮೆ ಇದೆ. ಇದು ರತ್ನಾ ಮಾಮನಿ ಅವರನ್ನು ಚಿಂತೆಗೀಡಾಗುವಂತೆ ಮಾಡಿದೆ‌. ಕಾಂಗ್ರೆಸ್​ನಲ್ಲಿಯೂ‌ ವಿಶ್ವಾಸ ವೈದ್ಯಗೆ ಟಿಕೆಟ್ ಸಿಗುತ್ತಿದ್ದಂತೆ ಸೌರವ್ ಚೋಪ್ರಾ ಜೆಡಿಎಸ್ ಪಕ್ಷದಿಂದ‌ ಸ್ಪರ್ಧಿಸಲು ಮುಂದಾಗಿದ್ದಾರೆ. ಅಲ್ಲದೇ ಇನ್ನೊಬ್ಬ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದ ಪಂಚನಗೌಡ ದ್ಯಾಮನಗೌಡರ ಕೂಡ ಸೌರವ್​ಗೆ ಬೆಂಬಲ‌ ಘೋಷಿಸಿದ್ದಾರೆ. ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಕ್ಕೂ ಹೊಡೆತ ಬೀಳಬಹುದು ಎನ್ನುತ್ತಿದ್ದಾರೆ ಇಲ್ಲಿನ ರಾಜಕೀಯ ವಿಶ್ಲೇಷಕರು. ಒಟ್ಟಾರೆ ಈ ಬಾರಿ‌ ಸವದತ್ತಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಅಂತಿಮ‌ವಾಗಿ ಶ್ರೀ ಯಲ್ಲಮ್ಮದೇವಿಯ ಆಶೀರ್ವಾದ ಯಾರಿಗೆ ಸಿಗುತ್ತೆ ಎಂಬುದನ್ನು ಕಾದು‌ ನೋಡಬೇಕಿದೆ.

ರತ್ನಾ ಆನಂದ ಮಾಮನಿ

ಕ್ಷೇತ್ರದ ವಿಶೇಷತೆ: ಉತ್ತರಕರ್ನಾಟಕ ಜನರ ಆರಾಧ್ಯ ದೇವಿ ಶ್ರೀ ಯಲ್ಲಮ್ಮದೇವಿ ಹೆಸರಿನ ಸವದತ್ತಿ ಯಲ್ಲಮ್ಮ ಕ್ಷೇತ್ರವು, ಐತಿಹಾಸಿಕ ಸವದತ್ತಿಯ ರಟ್ಟರ ಕೋಟೆ, ಮುನವಳ್ಳಿಯ ಪಂಚಲಿಂಗೇಶ್ವರ ದೇವಾಲಯ, ನೂರು ದೇವಾಲಯ, ನೂರು ಬಾವಿಗಳು ಇರುವ ಐತಿಹಾಸಿಕ ದೇವಾಲಯಗಳ ಬೀಡು ಹೂಲಿ, ಮಲಪ್ರಭಾ ನದಿಗೆ ಮುನವಳ್ಳಿ ಬಳಿಯ ನವೀಲುತೀರ್ಥ ಜಲಾಶಯ ಇರುವುದು ಕೂಡ ಇದೇ ಕ್ಷೇತ್ರದಲ್ಲಿ. ಹೆಚ್ಚು ಕಬ್ಬು ಬೆಳೆಯುವ ತಾಲೂಕಿನಲ್ಲಿ ರೇಣುಕಾ ಶುಗರ್ಸ್, ಹರ್ಷಾ ಶುಗರ್ಸ್ ಸಕ್ಕರೆ ಕಾರ್ಖಾನೆಗಳೂ ಇವೆ.

ವಿಶ್ವಾಸ ವೈದ್ಯ

ಕ್ಷೇತ್ರದ ಹಿನ್ನೆಲೆ: 1951ರಿಂದ ಈವರೆಗೆ ನಡೆದ 16 ಚುನಾವಣೆಗಳಲ್ಲಿ 7 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, 3 ಬಾರಿ ಬಿಜೆಪಿ, 4 ಬಾರಿ ಸ್ವತಂತ್ರ ಅಭ್ಯರ್ಥಿಗಳಿಗೆ ಸವದತ್ತಿ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿದ್ದಾರೆ. ಒಂದು ಬಾರಿ ಜನತಾದಳ ಅಭ್ಯರ್ಥಿಗೂ ಇಲ್ಲಿನ ಮತದಾರರು ಮಣೆ ಹಾಕಿದ್ದಾರೆ. ಕಾಂಗ್ರೆಸ್ ಭದ್ರಕೋಟೆ ಛಿದ್ರ ಮಾಡಿದ್ದ ಆನಂದ ಮಾಮನಿ ಬಿಜೆಪಿ‌ ಬಾವುಟ‌ ಹಾರಿಸುವಲ್ಲಿ ಯಶಸ್ವಿಯಾಗಿದ್ದರು.

ಸೌರವ್ ಚೋಪ್ರಾ

ಮಾಮನಿ, ಕೌಜಲಗಿ ಮೆನತನದ ಪಾರುಪತ್ಯ: ಸವದತ್ತಿ ಕ್ಷೇತ್ರವು ‌ಮೊದಲು ಪರಸಗಡ ಹೆಸರಿನಲ್ಲಿತ್ತು, 2008ರಲ್ಲಿ‌ ಸವದತ್ತಿ ಯಲ್ಲಮ್ಮ‌ ಕ್ಷೇತ್ರ ಎಂದು‌ ಮರು ನಾಮಕರಣ ಮಾಡಲಾಗಿದೆ. ಆರಂಭದಲ್ಲಿ‌ ಕೌಜಲಗಿ ಮನೆತನ ಸೇರಿ ಮತ್ತಿತರರು ಈ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದರು. ಬಳಿಕ ಮಾಮನಿ ಮನೆತನವು ಕ್ಷೇತ್ರವನ್ನು‌ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 4 ಬಾರಿ‌ ಕೌಜಲಗಿ ಮನೆತನದವರು ಶಾಸಕರಿದ್ದರೆ, 7 ಬಾರಿ ಮಾಮನಿ ಕುಟುಂಬಕ್ಕೆ ಇಲ್ಲಿನ ಜನ ಆಶೀರ್ವಾದ ಮಾಡಿದ್ದಾರೆ.

ಸವದತ್ತಿ ಕ್ಷೇತ್ರಕ್ಕೆ ಒಂದೇ ಬಾರಿ‌ ಮಂತ್ರಿ ಸ್ಥಾನ: 1967ರಲ್ಲಿ ಸವದತ್ತಿ ಕ್ಷೇತ್ರದಿಂದ‌ ಶಾಸಕರಾಗಿದ್ದ ಹೇಮಪ್ಪ ವೀರಭದ್ರಪ್ಪ ಕೌಜಲಗಿ ಅವರು, ವಿರೇಂದ್ರ ಪಾಟೀಲ ಸರ್ಕಾರದಲ್ಲಿ‌ ಕಂದಾಯ ಮತ್ತು ಕಾನೂನು ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇದಾದ ಬಳಿಕ ಸವದತ್ತಿ ಪ್ರತಿನಿಧಿಸುವ ಯಾವೊಬ್ಬ ಶಾಸಕರಿಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ.

ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ವಿವರ

ಮತದಾರರ ಮಾಹಿತಿ: 99,473 ಪುರುಷರು, 98,804 ಮಹಿಳೆಯರು ಹಾಗೂ ಇತರ ಇಬ್ಬರು ಮತದಾರರು ಸೇರಿ ಒಟ್ಟು 1,98,279 ಮತದಾರರು ಸವದತ್ತಿ ಕ್ಷೇತ್ರದಲ್ಲಿದ್ದಾರೆ. ಅತೀ ಹೆಚ್ಚು ಲಿಂಗಾಯತರು ಕ್ಷೇತ್ರದಲ್ಲಿ‌ ಇನ್ನುಳಿದಂತೆ ಎಸ್ಸಿ-ಎಸ್ಟಿ, ಮುಸ್ಲಿಮರು, ಕುರುಬರು ಸೇರಿ ಮತ್ತಿತರ ಸಮುದಾಯದ ಮತದಾರರಿದ್ದಾರೆ.

ಕ್ಷೇತ್ರದ ಶಾಸಕರ ವಿವರ:
1951 - ಹೇಮಪ್ಪ ವೀರಭದ್ರಪ್ಪ ಕೌಜಲಗಿ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಬಾಂಬೆ ಸರ್ಕಾರ)
1957 - ಶಂಕರರಾವ್ ಬಿಂದೂರಾವ್ ಪದಕಿ - ಸ್ವತಂತ್ರ
1962 - ವೆಂಕರಡ್ಡಿ ಶಿದರಡ್ಡಿ ತಿಮ್ಮಾರಡ್ಡಿ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1967 - ಹೇಮಪ್ಪ ವೀರಭದ್ರಪ್ಪ ಕೌಜಲಗಿ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1972 - ಶಂಕರರಾವ್ ಬಿಂದೂರಾವ್ ಪದಕಿ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1977 - ಗೂಡನಷಾ ಖಾನಷಾ ಟಕ್ಕೇದ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1983 - ರಾಮಮಗೌಡ ವೆಂಕನಗೌಡ ಪಾಟೀಲ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1985 - ಚಂದ್ರಶೇಖರ ಮಲ್ಲಿಕಾರ್ಜುನ ಮಾಮನಿ - ಸ್ವತಂತ್ರ
1989 - ಸುಭಾಷ ಸಿದ್ರಾಮಪ್ಪ ಕೌಜಲಗಿ - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
1994 - ಚಂದ್ರಶೇಖರ ಮಲ್ಲಿಕಾರ್ಜುನ ಮಾಮನಿ - ಜನತಾ ದಳ
1999 - ಸುಭಾಷ ಸಿದ್ರಾಮಪ್ಪ ಕೌಜಲಗಿ - ಸ್ವತಂತ್ರ
2004 - ವಿಶ್ವನಾಥ ಕರಬಸಪ್ಪ ಮಾಮನಿ - ಸ್ವತಂತ್ರ
2008 - ಆನಂದ ಚಂದ್ರಶೇಖರ ಮಾಮನಿ - ಬಿಜೆಪಿ
2013 - ಆನಂದ ಚಂದ್ರಶೇಖರ ಮಾಮನಿ - ಬಿಜೆಪಿ
2018 - ಆನಂದ ಚಂದ್ರಶೇಖರ ಮಾಮನಿ - ಬಿಜೆಪಿ

ಇದನ್ನೂ ಓದಿ: ದುಡುಕುವ ಅವಶ್ಯಕತೆಯಿಲ್ಲ, ಮುಂದೆ ಒಳ್ಳೆಯ ಭವಿಷ್ಯವಿದೆ: ಸವದಿಗೆ ಸಿಎಂ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.