ETV Bharat / assembly-elections

ಗೋವಿಂದರಾಜನಗರ ಕ್ಷೇತ್ರದಲ್ಲಿ ಸೋಮಣ್ಣ-ಪ್ರಿಯಾಕೃಷ್ಣ ನಡುವೆ ನೇರ ಪೈಪೋಟಿ: ಜೆಡಿಎಸ್ ಕಥೆ ಏನು? - ಕ್ಷೇತ್ರದ ರಾಜಕೀಯ ಹಿನ್ನೋಟ

ಬೆಂಗಳೂರಿನ 28 ವಿಧಾನಸಭಾ ಮತಕ್ಷೇತ್ರಗಳಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಕೂಡ ಒಂದು. ಮೂರು ಬಾರಿ ಕಾಂಗ್ರೆಸ್ ಗೆದ್ದಿದ್ದು, ಒಂದು ಬಾರಿ ಮಾತ್ರ ಬಿಜೆಪಿ ಗೆದ್ದಿರುವುದು ಕ್ಷೇತ್ರದ ವೈಶಿಷ್ಟ್ಯ. ಜೆಡಿಎಸ್ ಖಾತೆಯನ್ನೇ ತೆರೆದಿಲ್ಲ. ಹಾಗಾಗಿ ಈ ಬಾರಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುವ ನಿರೀಕ್ಷೆ ಇದೆ. ಇದರ ನಡುವೆ ಜೆಡಿಎಸ್​ ಕೂಡ ಪ್ರತಿಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದೆ.

Govindraj Nagar Assembly Constituency Profile

author img

By

Published : Mar 27, 2023, 1:54 PM IST

Updated : Mar 27, 2023, 2:18 PM IST

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು ಬೆಂಗಳೂರಿನ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಗೋವಿಂದರಾಜನಗರ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನೇರ ಪೈಪೋಟಿ ನಿರೀಕ್ಷಿಸಲಾಗಿದೆ. ಕೈ ತೆಕ್ಕೆಯಿಂದ ಕಮಲ ಪಾಳಯಕ್ಕೆ ಜಾರಿರುವ ಕ್ಷೇತ್ರದ ಸದ್ಯದ ವಸ್ತುಸ್ಥಿತಿಯ ಕುರಿತ ಪಕ್ಷಿನೋಟ ಇಲ್ಲಿದೆ.

Govindraj Nagar Assembly Constituency Profile
ಕಳೆದ ನಾಲ್ಕು ಚುನಾವಣೆಯಲ್ಲಿನ ಮತದಾರರ ಮಾಹಿತಿ

ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ 2008, 2009, 2013 ರಲ್ಲಿ ಸತತವಾಗಿ ಕೈ ವಶದಲ್ಲಿತ್ತು. ಆದರೆ, 2018ರಲ್ಲಿ ಮೊದಲ ಬಾರಿ ಇಲ್ಲಿ ಕಮಲ ಅರಳಿದೆ. ಆಪರೇಷನ್ ಕಮಲದ ಮೂಲಕ ಗೋವಿಂದರಾಜನಗರ ಕ್ಷೇತ್ರ ವಶಕ್ಕೆ ಮುಂದಾಗಿದ್ದ ಬಿಜೆಪಿಗೆ ಮೊದಲ ಚುಂಬನಂ ದಂತಭಗ್ನಂ ಎನ್ನುವಂತೆ ಉಪ ಚುನಾವಣೆಯಲ್ಲಿ ಸೋಲಾಗಿತ್ತು. ಅದಾಗಿ 9 ವರ್ಷದ ನಂತರ ಕಡೆಗೂ ಕ್ಷೇತ್ರವನ್ನು ದಕ್ಕಿಸಿಕೊಂಡಿದ್ದ ಬಿಜೆಪಿಗೆ ಈಗ ಕ್ಷೇತ್ರವನ್ನು ಉಳಿಸಿಕೊಳ್ಳಲು ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ, ಕ್ಷೇತ್ರ ಮರು ವಶಕ್ಕೆ ಕಾಂಗ್ರೆಸ್ ಭರ್ಜರಿ ತಯಾರಿ ಆರಂಭಿಸಿದ್ದು, ಈ ಬಾರಿ ತೀವ್ರ ಸ್ಪರ್ಧೆಯೊಡ್ಡಲು ಜೆಡಿಎಸ್ ಕೂಡ ಸನ್ನದ್ಧವಾಗಿ ಅಭ್ಯರ್ಥಿಯನ್ನೂ ಈಗಾಗಲೇ ಘೋಷಿಸಿದೆ. ಕಾಂಗ್ರೆಸ್​ನಿಂದ ಪ್ರಿಯಾಕೃಷ್ಣ ಟಿಕೆಟ್​ ಘೋಷಣೆಯಾಗಿದ್ದರೆ ಜೆಡಿಎಸ್​ನಿಂದ ಆರ್.ಪ್ರಕಾಶ್​ ಕಣಕ್ಕಿಳಿಯಲಿದ್ದಾರೆ.

ಕಳೆದ ಮೂರು ಚುನಾವಣೆಯಲ್ಲಿ ಗೆದ್ದ ಮತ್ತು ಪರಾಜಿತ ಅಭ್ಯರ್ಥಿಗಳು ಪಡೆದ ಮತಗಳು ಹಾಗೂ ಗೆಲವಿನ ಅಂತರ

ವಾರ್ಡ್​ಗಳು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವು ಕಾರ್ಪೊರೇಷನ್ ಕಾಲೋನಿ, ಬಿಎಂಪಿ ಕಾಲೋನಿ, ಪ್ರಶಾಂತ್ ನಗರ, ಗೋವಿಂದರಾಜನಗರ, ತಿಮ್ಮೇನಹಳ್ಳಿ, ಮಾಗಡಿ ಕಾರ್ಡ್ ರಸ್ತೆ ಲೇಔಟ್, ಬಿನ್ನಿ ಲೇಔಟ್, ವಿಜಯನಗರ 1ನೇ ಹಂತ, ಸಿಹೆಚ್​ಬಿಎಸ್​ ಲೇಔಟ್ ಪ್ರದೇಶಗಳನ್ನು ಹೊಂದಿದೆ.

ಕ್ಷೇತ್ರದಲ್ಲಿ ಗೆದ್ದ ರಾಜಕೀಯ ಪಕ್ಷಗಳ ಮಾಹಿತಿ

ಮತದಾರರ ವಿವರ: ಒಕ್ಕಲಿಗರ ಪ್ರಾಬಲ್ಯ ಇರುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,81,098 ಮತದಾರರಿದ್ದು, 1,45,574 ಪುರುಷ ಮತದಾರರು, 1,35,483 ಮಹಿಳಾ ಮತದಾರರು, 41 ತೃತೀಯ ಲಿಂಗಿಗಳಿದ್ದಾರೆ. ಒಕ್ಕಲಿಗರೊಂದಿಗೆ ಲಿಂಗಾಯತರು, ಬ್ರಾಹ್ಮಣ, ಒಬಿಸಿ, ಎಸ್ಸಿ-ಎಸ್ಟಿ, ಮುಸ್ಲಿಂ ಸೇರಿ ಇತರೆ ಸಮುದಾಯದ ಮತದಾರರಿದ್ದಾರೆ. ಒಕ್ಕಲಿಗ ಪ್ರಾಬಲ್ಯವಿದ್ದರೂ ಒಬಿಸಿ ಮತದಾರರು, ಎಸ್ಸಿ-ಎಸ್ಟಿ ಸಮುದಾಯದ ಮತದಾರರು ಇಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಕಳೆದ ಮೂರು ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಗಳಿಸಿಕೊಂಡ ಸ್ಥಾನಗಳು

ಕ್ಷೇತ್ರದ ರಾಜಕೀಯ ಹಿನ್ನೋಟ: 2008ರಲ್ಲಿ ಕಾಂಗ್ರೆಸ್​ನಿಂದ ಗೆದ್ದಿದ್ದ ಸೋಮಣ್ಣ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿ ಬಿಜೆಪಿಯಿಂದ ಉಪ ಚುನಾವಣೆಗೆ ಸ್ಪರ್ಧಿಸಿದರು. ಆದರೆ, ಕಾಂಗ್ರೆಸ್​ನಿಂದ ವಿಜಯನಗರ ಶಾಸಕ ಕೃಷ್ಣಪ್ಪ ಪುತ್ರ ಪ್ರಿಯಾಕೃಷ್ಣ ಸ್ಪರ್ಧಿಸಿ ಸೋಮಣ್ಣಗೆ ಸೋಲಿನ ರುಚಿ ತೋರಿಸಿದ್ದರು. ನಂತರ 2013 ರಲ್ಲಿ ಎರಡನೇ ಬಾರಿಗೆ ಬಿಜೆಪಿಯಿಂದ ಕಣಕ್ಕಿಳಿದ ಸೋಮಣ್ಣ, ಗೋವಿಂದರಾಜನಗರ ಬದಲು ವಿಜಯನಗರದಿಂದ ಕಣಕ್ಕಿಳಿದು ಅದೃಷ್ಠ ಪರೀಕ್ಷೆಗೆ ಮುಂದಾದ ಹಿನ್ನೆಲೆಯಲ್ಲಿ ಗೋವಿಂದರಾಜನಗರ ಕ್ಷೇತ್ರದಿಂದ ಪ್ರಿಯಾಕೃಷ್ಣ ಅನಾಯಾಸವಾಗಿ ಗೆದ್ದರು. ಆದರೆ, 2018ರಲ್ಲಿ ಮತ್ತೆ ಕ್ಷೇತ್ರ ಬದಲಿಸಿದ ಸೋಮಣ್ಣ, ವಿಜಯನಗರ ಬದಲು ಗೋವಿಂದರಾಜನಗರ ಕ್ಷೇತ್ರದಿಂದ ಪ್ರಿಯಾಕೃಷ್ಣ ವಿರುದ್ಧ ಕಣಕ್ಕಿಳಿದು ಗೆಲುವಿನ ನಗೆ ಬೀರಿ ಸದ್ಯ ವಸತಿ ಸಚಿವರಾಗಿದ್ದಾರೆ.

ಕಳೆದ ಮೂರು ಚುನಾವಣೆಯಲ್ಲಿ ಆಯಾ ರಾಜಕೀಯ ಪಕ್ಷಗಳು ತೆಗೆದುಕೊಂಡ ಮತಗಳು (ಶೇಕಡಾವಾರು)

ಟಿಕೆಟ್ ಆಕಾಂಕ್ಷಿಗಳು: ಬಿಜೆಪಿಯಿಂದ ಸೋಮಣ್ಣ ಆಕಾಂಕ್ಷಿಯಾಗಿದ್ದು, ವಯಸ್ಸಿನ ಕಾರಣ ಅಡ್ಡಿಯಾದಲ್ಲಿ ಸೋಮಣ್ಣ ಪುತ್ರ ಅರುಣ್ ಸೋಮಣ್ಣಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಕೂಡ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಸೋಮಣ್ಣ ಪಕ್ಷ ತೊರೆದರೆ ತಮಗೆ ಟಿಕೆಟ್ ಸಿಗಲಿದೆ ಎನ್ನುವ ಲೆಕ್ಕಾಚಾರ ಉಮೇಶ್ ಶೆಟ್ಟಿಯವರದ್ದಾಗಿದೆ. ಕಾಂಗ್ರೆಸ್​ನಿಂದ ಮೂರು ಬಾರಿ ಗೆದ್ದು ಕಳೆದ ಬಾರಿ ಪರಾಜಿತವಾಗಿರುವ ಪ್ರಿಯಾಕೃಷ್ಣಗೆ ಟಿಕೆಟ್ ಘೋಷಣೆಯಾಗಿದೆ. ಹಾಗಾಗಿ ಸೋಮಣ್ಣ ವರ್ಸೆಸ್ ಪ್ರಿಯಾಕೃಷ್ಣ ನಡುವೆ ಮತ್ತೊಂದು ಸುತ್ತಿನ ಹೋರಾಟ ಈ ಬಾರಿ ಖಚಿತವಾಗಿದೆ.

ಇನ್ನು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಈ ಬಾರಿ ಪಕ್ಷದ ಮಹಾನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್​ಗೆ ಟಿಕೆಟ್ ಘೋಷಿಸಿದ್ದು, ಅಭ್ಯರ್ಥಿ ಆಯ್ಕೆ ವಿಷಯ ಮುಗಿದ ಅಧ್ಯಾಯವಾಗಿದೆ. ತ್ರಿಕೋನ ಸ್ಪರ್ಧೆಗೆ ಮುನ್ನುಡಿ ಬರೆಯಲು ಪ್ರಕಾಶ್ ಸಿದ್ದತೆ ನಡೆಸಿಕೊಳ್ಳುತ್ತಿದ್ದಾರೆ. ಆದರೆ 2008 ರಲ್ಲಿ 19155 ಮತ ಪಡೆದಿದ್ದ ಜೆಡಿಎಸ್ 2013 ರಲ್ಲಿ 20662 ಮತ ಪಡೆದಿತ್ತು. ಆದರೆ, 2018 ರಲ್ಲಿ ಕೇವಲ 7090 ಮತಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಮತ ಗಳಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿರುವ ಜೆಡಿಎಸ್ ಯಾವ ರೀತಿ ಸ್ಪರ್ಧೆ ಒಡ್ಡಲಿದೆ ಎನ್ನುವುದು ಪ್ರಶ್ನೆಯಾಗಿದೆ.

ಕಳೆದ ಮೂರು ಚುನಾವಣೆಯಲ್ಲಿನ ಪುರುಷ ಹಾಗೂ ಮಹಿಳಾ ಮತದಾರರ ಮಾಹಿತಿ (ಶೇಕಡಾವಾರು)

ಕ್ಷೇತ್ರದ ಸಮಸ್ಯೆಗಳು: ಡಾ.ರಾಜ್​ಕುಮಾರ್ ಹೆಸರು ವಾರ್ಡ್​ಗೆ ಇಡಲಾಗಿದ್ದು, ಐತಿಹಾಸಿಕ ಮಾರುತಿ ಮಂದಿರ ಇದೆ, ಮೆಟ್ರೋ ಮಾರ್ಗವಿದೆ. ಉತ್ತಮ ವಸತಿ ಪ್ರದೇಶಗಳು ಇವೆ. ಆದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿ ಬಾರಿಯೂ ಕಾಣಿಸಿಕೊಳ್ಳುತ್ತಿದೆ. ಕ್ಷೇತ್ರದ ಹಲವು ಭಾಗಗಳಾದ ಕಾವೇರಿಪುರ, ಗಂಗೊಂಡನಹಳ್ಳಿ ಸೇರಿ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲದಿರುವುದೂ ಸಮಸ್ಯೆಯಾಗಿದೆ. ಮಾಗಡಿ ರಸ್ತೆ ಹೌಸಿಂಗ್ ಬೋರ್ಡ್ ಸಮೀಪದಲ್ಲಿ ನಡೆಯುತ್ತಿರುವ ಗ್ರೇಡ್ ಸಪರೇಟರ್ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಕ್ಷೇತ್ರದಲ್ಲಿ ಸಮಸ್ಯೆಯಾಗುತ್ತಿದೆ. ಪಾರ್ಕಿಂಗ್ ಸಮಸ್ಯೆಯೂ ಕ್ಷೇತ್ರದಲ್ಲಿದೆ.

ಗೋವಿಂದರಾಜ್ ನಗರ ವಿಧಾನಸಭಾ ಕ್ಷೇತ್ರದ ವಿವರ

ಒಟ್ಟಿನಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಕಾಂಗ್ರೆಸ್ ಗೆದ್ದಿದ್ದು, ಒಂದು ಬಾರಿ ಮಾತ್ರ ಬಿಜೆಪಿ ಗೆದ್ದಿದೆ. ಜೆಡಿಎಸ್ ಖಾತೆಯನ್ನೇ ತೆರೆದಿಲ್ಲ. ಹಾಗಾಗಿ ಈ ಬಾರಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುವ ನಿರೀಕ್ಷೆ ಇದೆ. ಸಾಂಪ್ರದಾಯಿಕ ಎದುರಾಳಿಗಳಾದ ಸೋಮಣ್ಣ, ಪ್ರಿಯಾಕೃಷ್ಣ ನಡುವೆಯೇ ನೇರ ಪೈಪೋಟಿ ನಡೆಯಲಿದೆ ಎನ್ನಲಾಗಿದೆ. ಆದರೂ ಕ್ಷೇತ್ರದ ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎನ್ನುವುದು ನಿಗೂಢವಾಗಿದೆ. ಮತ್ತೊಮ್ಮೆ ಕಮಲ ಅರಳುತ್ತಾ, ಮರಳಿ ಕೈ ವಶವಾಗುತ್ತಾ ಇಲ್ಲವೇ ದಳಕ್ಕೆ ಒಲಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಬಾದಾಮಿಯಲ್ಲಿ ಸೋಲುವ ಮಾಹಿತಿ ಸಿದ್ದರಾಮಯ್ಯಗೆ ಸಿಕ್ಕಿದೆ, ಹೀಗಾಗಿ ಕ್ಷೇತ್ರ ಬದಲಿಸಿದ್ದಾರೆ: ಸಚಿವ ಮುರುಗೇಶ ನಿರಾಣಿ

Last Updated : Mar 27, 2023, 2:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.