ETV Bharat / assembly-elections

ರೇಷ್ಮೆ ನಗರಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಬಿಸಿ: ಪಕ್ಷಗಳಲ್ಲಿ ಬಲಾಬಲ ಹೀಗಿದೆ - Details of Ramnagar Assembly Constituency

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರೀಕೋನ ಸ್ಪರ್ಧೆ ನಡೆಯಲಿದೆ. ಮೂರು ಪಕ್ಷಗಳಲ್ಲಿ ಬಲಾಬಲ ಏರ್ಪಟ್ಟಿದ್ದರಿಂದ ಸದ್ಯಕ್ಕೆ ಕ್ಷೇತ್ರದ ಮುಂದಿನ ಶಾಸಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗದು. ಕಾರಣ ಆಯಾ ಪಕ್ಷದ ಅಭ್ಯರ್ಥಿಗೆ ಕೆಲವು ಗೆಲ್ಲುವ ಲಕ್ಷಣಗಳಿದ್ದರೆ ಅಷ್ಟೇ ಪ್ರಮಾಣದಲ್ಲಿ ಸೋಲುವ ಕಾರಣಗಳಿವೆ. ಹಾಗಾಗಿ ಯಾವುದನ್ನೂ ಅಷ್ಟು ಸಲೀಸಾಗಿ ತಳ್ಳಿಹಾಕುವಂತಿಲ್ಲ.

Ramnagar Assembly Constituency
Ramnagar Assembly Constituency
author img

By

Published : Mar 28, 2023, 3:34 PM IST

Updated : Mar 28, 2023, 4:05 PM IST

ರಾಮನಗರ: ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಟ್ಟ ಹೆಗ್ಗಳಿಕೆಗೆ ರಾಮನಗರ ಜಿಲ್ಲೆಗೆ ಸಲ್ಲುತ್ತದೆ. ರಾಜ್ಯ ರಾಜಕೀಯದ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಮುಖ್ಯಮಂತ್ರಿ ಅಲ್ಲದೇ ಹಲವು ಘಟನಾವಳಿಗಳನ್ನು ನೀಡಿದ ಶ್ರೇಯಸ್ಸು ಕೂಡ ಇದೇ ಜಿಲ್ಲೆಗೆ ಸೇರುತ್ತದೆ. ಹಾಗಾಗಿ ರೇಷ್ಮೆ ನಗರಿ ರಾಮನಗರ ಜಿಲ್ಲೆಗೆ ತನ್ನದೇಯಾದ ರಾಜಕೀಯ ಹಿನ್ನೆಲೆ ಇದೆ. ಅದೇ ಕ್ಷೇತ್ರದಲ್ಲಿ ಇದೀಗ ವಿಧಾನಸಭಾ ಚುನಾವಣೆ ಕಹಳೆ ಮೊಳಗಿದ್ದು ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್​ ಪಕ್ಷ ಸದ್ಯ ಹಿಡಿತ ಸಾಧಿಸಿದ್ದು, ಕಾಂಗ್ರೆಸ್​ ಪ್ರಬಲ ಪೈಪೋಟಿ ನೀಡಲು ಮುಂದಾಗಿದೆ. ಇದರ ನಡುವೆ ಬಿಜೆಪಿ ಕೂಡ ಕ್ಷೇತ್ರದಲ್ಲಿ ಹಿಡಿತ ಸಾಧಿಸುವ ಇನ್ನಿಲ್ಲದ ಪ್ರಯತ್ನ ನಡೆಸಿದೆ.

Ramnagar Assembly Constituency
ಸ್ಥಾನವಾರು ವಿಧಾನಸಭೆ ಚುನಾವಣೆ

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರ ತವರು ಕ್ಷೇತ್ರವಾದ ಇಲ್ಲಿ ಸದ್ಯ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕಿ. ಬರುವ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲು ಮುಂದಾಗಿದ್ದು, ನಿಖಿಲ್​ಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಸಿದ್ಧತೆ ಮಾಡಿಕೊಂಡಿವೆ.

ಜೆಡಿಎಸ್​ ಪ್ರಾಬಲ್ಯ: ಕಳೆದ ಬಾರಿ ರಾಮನಗರ-ಚನ್ನಪಟ್ಟಣ ಎರಡು ಕಡೆ ಸ್ಪರ್ಧೆ ಮಾಡಿದ್ದ ಕುಮಾರಸ್ವಾಮಿ, ಗೆದ್ದ ನಂತರ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಸಮ್ಮಿಶ್ರ ಸರ್ಕಾರ ರಚನೆ ನಂತರ ಪತ್ನಿ ಅನಿತಾ ಕುಮಾರಸ್ವಾಮಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಲ್ಲದೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದಿದ್ದರು. ಇತ್ತೀಚೆಗೆ ನಡೆಸಿದ ಪಂಚರತ್ನ ಯಾತ್ರೆ ವೇಳೆ 'ನಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕುವೆ' ಎಂದು ಹೇಳುವ ಮೂಲಕ ರಾಮನಗರ ವಿಧಾನಸಭಾ ಕ್ಷೇತ್ರದ ಟಿಕೆಟ್​ ಘೋಷಣೆ ಮಾಡಿದ್ದರು. ಟಿಕೆಟ್​ ಘೋಷಣೆ ಬಳಿಕ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವರಿಗೆ ಪೈಪೋಟಿ ನೀಡಲು ಕಾಂಗ್ರೆಸ್​ನಿಂದ ಇಕ್ಬಾಲ್ ಹುಸೇನ್ ಕಣಕ್ಕಿಳಿಯಲಿದ್ದು, ಬಿಜೆಪಿಯಿಂದ ಗೌತಮ್ ಗೌಡ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ಈ ಬಾರಿ ತ್ರೀಕೋನ ಸ್ಪರ್ದೆ ನಡೆಯಲಿದೆ.

Ramnagar Assembly Constituency
ಯಾವ ಪಕ್ಷ ಎಷ್ಟು ಬಾರಿ ಗೆಲುವು ಸಾಧಿಸಿದೆ ಎಂಬ ಮಾಹಿತಿ

ಕಾಂಗ್ರೆಸ್​ ಬಲಾಬಲ: ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡಿ ಪ್ರಬಲ ಪೈಪೋಟಿ ನೀಡಿ 20 ಸಾವಿರ ಮತಗಳಿಂದ ಸೋಲನುಭವಿಸಿದ್ದ ಇಕ್ಬಾಲ್ ಹುಸೇನ್, ಈ ಬಾರಿ ಗೆಲ್ಲುವ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿರುವ ಅವರು, ಸೋಲಿನ ಸೇಡು ತೀರಿಸಿಕೊಳ್ಳುವ ಛಲದಲ್ಲಿದ್ದಾರೆ. ಕೋವಿಡ್ ವೇಳೆ ಕ್ಷೇತ್ರದ ಜನರ ಜೊತೆಗೆ ಇದ್ದು ಫುಡ್ ಕಿಟ್, ಔಷಧಿಗಳ ಕಿಟ್ ಸೇರಿದಂತೆ ಇತರೆ ಸಮಾಜಸೇವೆ ಮಾಡುವ ಮೂಲಕ ಕ್ಷೇತ್ರದ ಜನರ ಜೊತೆ ನಿಂತಿದ್ದು ಅವರಿಗೆ ಬಲ ತರಿಸಿದೆ. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಂಸದ ಡಿ ಕೆ ಸುರೇಶ್ ನೇತೃತ್ವದಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಪ್ರೀತಿಗೂ ಪಾತ್ರರಾಗಿದ್ದಾರೆ. ಪಕ್ಷದ ಮುಖಂಡರೆಲ್ಲ ತಮ್ಮ ಮುನಿಸನ್ನು ಬಿಟ್ಟು ಇಕ್ಬಾಲ್ ಹುಸೇನ್ ಕೈಹಿಡಿಯುವುದಾಗಿ ಹೇಳಿದ್ದು, ಅವರಿಗೆ ವರದಾನವಾಗಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

Ramnagar Assembly Constituency
ಅಭ್ಯರ್ಥಿಗಳ ಗೆಲುವಿನ ಅಂತರ

ಬಿಜೆಪಿ ಟಾರ್ಗೆಟ್​: ಇನ್ನು, ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ಎಡವಿದ್ದ ಬಿಜೆಪಿ, ಈ ಬಾರಿ ಉತ್ಸಾಹದೊಂದಿಗೆ ಕಣಕ್ಕಿಳಿಯುವ ನಿರ್ಧಾರ ಮಾಡಿದೆ. ಹಳೆ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡಿಕೊಂಡಿರುವ ಕಮಲ ನಾಯಕರು, ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಗೌತಮ್ ಗೌಡರಿಗೆ ಬಿಜೆಪಿ ಟಿಕೆಟ್ ನೀಡುವ ನಿರ್ಧಾರ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದರೂ ಸಹ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದ್ರೆ ಅವರು ಸಚಿವ ಅಶ್ವತ್ಥನಾರಾಯಣ ಜೊತೆಗೂಡಿ‌ ಈಗಾಗಲೇ ಕ್ಷೇತ್ರದಾದ್ಯಂತ ಓಡಾಟ ನಡೆಸಿದ್ದಾರೆ. ಹಾಗಾಗಿ ಮೂರು ಪಕ್ಷಗಳಿಂದ ರಾಜಕೀಯ ಲೆಕ್ಕಾಚಾರ ಜೋರಾಗಿರುವುದರಿಂದ ಕ್ಷೇತ್ರದಲ್ಲಿ ಈ ಬಾರಿ ತ್ರೀಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Ramnagar Assembly Constituency
ರಾಮನಗರ ವಿಧಾನಸಭಾ ಕ್ಷೇತ್ರದ ವಿವರ

ಕ್ಷೇತ್ರದ ಮತದಾರರು: ಕ್ಷೇತ್ರದಲ್ಲಿ 2,06,982 ಒಟ್ಟು ಮತದಾರರಿದ್ದಾರೆ. ಅದರಲ್ಲಿ 1,02,938 ಪುರುಷ ಮತದಾರರು ಹಾಗೂ 1,04,019 ಮಹಿಳಾ ಹಾಗೂ 25 ಇತರೆ ಮತದಾರರಿದ್ದಾರೆ. ಒಕ್ಕಲಿಗರ ಸಮುದಾಯ ಸಂಖ್ಯಾಬಲದಲ್ಲಿ ಮುಂದಿದ್ದು, ಇವರೊಂದಿಗೆ ಎಸ್ಸಿ-ಎಸ್ಟಿ, ಲಿಂಗಾಯತ, ಅಲ್ಪಸಂಖ್ಯಾತರು ಹಾಗೂ ಕುರುಬ ಸಮುದಾಯದವರು ನಿರ್ಣಾಯಕರಾಗಿದ್ದಾರೆ.

ಪ್ಲಸ್​ ಆ್ಯಂಡ್​ ಮೈನಸ್​: ಮೂರು ಪಕ್ಷಗಳಲ್ಲಿ ಬಲಾಬಲ ಏರ್ಪಟ್ಟಿದ್ದರಿಂದ ಸದ್ಯಕ್ಕೆ ಕ್ಷೇತ್ರದ ಶಾಸಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗದು. ಕಾರಣ ಆಯಾ ಪಕ್ಷದ ಅಭ್ಯರ್ಥಿಗೆ ಕೆಲವು ಗೆಲ್ಲುವ ಲಕ್ಷಣಗಳಿದ್ದರೆ, ಅಷ್ಟೇ ಪ್ರಮಾಣದಲ್ಲಿ ಸೋಲುವ ಕಾರಣಗಳಿವೆ. ಹಾಗಾಗಿ ಯಾವುದನ್ನು ಅಷ್ಟು ಸಲೀಸಾಗಿ ತಳ್ಳಿಹಾಕುವಂತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Ramnagar Assembly Constituency
ಕ್ಷೇತ್ರದಲ್ಲಿರುವ ಪುರುಷ ಮತ್ತು ಮಹಿಳಾ ಮತದಾರರ ವಿವರ

ರಾಮನಗರ ಕ್ಷೇತ್ರ ಜೆಡಿಎಸ್​ನ ಭದ್ರಕೋಟೆ. ಮಂಡ್ಯದ ಸೋಲಿನ ಸಿಂಪತಿ ಇಲ್ಲಿ ವರ್ಕೌಟ್ ಆಗಬಹುದು. ಜೊತೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಅಭಿವೃದ್ಧಿ ಕೆಲಸಗಳು ಘೋಷಿತ ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ವರದಾನವಾಗಬಹುದು. ಆದರೆ, ಕಾಂಗ್ರೆಸ್​ ಮತ್ತು ಬಿಜೆಪಿಯ ಪ್ರಬಲ ಪೈಪೋಟಿ ಹಿನ್ನೆಲೆ ಜೆಡಿಎಸ್​ಗೆ ಹಿನ್ನಡೆ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ಬಾರಿ ಸೋತಿದ್ದರು ಕೂಡ ಜನರ ಜೊತೆ ಮತ್ತೆ ಬೆರೆತಿದ್ದು ಕಾಂಗ್ರೆಸ್​ ಘೋಷಿತ ಅಭ್ಯರ್ಥಿ ಇಕ್ಬಾಲ್ ಹುಸೇನ್​ಗೆ ಪ್ಲಸ್ ಪಾಯಿಂಟ್​ ಆಗಬಹುದು. ಅಲ್ಲದೇ ಕಾಂಗ್ರೆಸ್​ಗೆ ಈ ಬಾರಿ ಪ್ರತಿಷ್ಠೆಯ ಕ್ಷೇತ್ರ ಕೂಡ ಆಗಿದ್ದರಿಂದ ಗೆಲುವು ಅನಿವಾರ್ಯ. ಕೋವಿಡ್ ಸಂದರ್ಭದಲ್ಲಿನ ಸೇವೆಗಳು ಹಾಗೂ ಡಿ ಕೆ ಬ್ರದರ್ಸ್ ಕೃಪಾಕಟಾಕ್ಷ ಕಾಂಗ್ರೆಸ್​ ಅಭ್ಯರ್ಥಿ ಕೈ ಹಿಡಿಯಬಹುದು. ಆದರೆ, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ, ಕುಮಾರಸ್ವಾಮಿ ವರ್ಚಸ್ಸು ಕಾಂಗ್ರೆಸ್​ ಗೆಲುವಿಗೆ ಅಡ್ಡಿಯಾಗಲೂಬಹುದು ಎನ್ನಲಾಗುತ್ತಿದೆ.

Ramnagar Assembly Constituency
ಪಕ್ಷವಾರು ಮತಗಳು (ಶೇಕಡಾವಾರು)

ಬಿಜೆಪಿಯ ಗೌತಮ್ ಗೌಡ (ಟಿಕೆಟ್​ ಘೋಷಣೆ ಆಗಿಲ್ಲ) ಅವರಿಗೆ ಸಚಿವ ಅಶ್ವತ್ಥನಾರಾಯಣ ಕೃಪಾಕಟಾಕ್ಷ ಪ್ಲಸ್ ಪಾಯಿಂಟ್ಸ್ ಆಗಬಹುದು. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯನ್ನು ಸಮಪರ್ಕವಾಗಿ ಸಂಘಟನೆ ಮಾಡುತ್ತಿರುವುದು ಅವರ ಕೈ ಹಿಡಿಯಬಹುದು. ಆದರೆ, ಕ್ಷೇತ್ರದಲ್ಲಿ ಬಿಜೆಪಿ ಅಷ್ಟು ನೆಲೆ ಕಂಡಿಲ್ಲ. ಪಕ್ಷದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದರಿಂದ ಇವರಿಗೆ ಹಿನ್ನಡೆ ಕಾರಣ ಆಗಬಹುದು ಎಂಬ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಬಿಎಸ್​ವೈ ಮನೆ ಮೇಲೆ ಕಲ್ಲು ತೂರಾಟದ ಹಿಂದೆ ರಾಜಕೀಯ ದುರುದ್ದೇಶ ಇದೆ: ಸಿಎಂ ಬೊಮ್ಮಾಯಿ

Last Updated : Mar 28, 2023, 4:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.