ಕರ್ನಾಟಕ

karnataka

ETV Bharat / snippets

ಉಡುಪಿ: ಯಕ್ಷ ಸಾಧಕ ಹಂದಾಡಿ ಬಾಲಕೃಷ್ಣ ನಾಯಕ್ ಇನ್ನಿಲ್ಲ

By ETV Bharat Karnataka Team

Published : Jul 5, 2024, 1:24 PM IST

HANDADI BALAKRISHNA PASSED AWAY
ಹಂದಾಡಿ ಬಾಲಕೃಷ್ಣ ನಾಯಕ್ (ETV Bharat)

ಉಡುಪಿ:ಬಡಗುತಿಟ್ಟಿನ ಯಕ್ಷಗಾನ ಪ್ರಸಾಧನ ತಜ್ಞ ಹಂದಾಡಿ ಬಾಲಕೃಷ್ಣ ನಾಯಕ್ (76) ಗುರುವಾರ ನಿಧನರಾದರು. ಎಳೆಯ ವಯಸ್ಸಿನಲ್ಲಿ ಯಕ್ಷಗಾನದ ಹೆಜ್ಜೆಗಳನ್ನು ಹಂದಾಡಿಯ ಸುಬ್ಬಣ್ಣ ಭಟ್ ಅವರಲ್ಲಿ ಕಲಿತ ಬಾಲಕೃಷ್ಣ ಅವರು, ಪ್ರೌಢಶಾಲೆ ಮುಗಿಯುತ್ತಿದ್ದಂತೆ ಬ್ರಹ್ಮಾವರದ ಅಜಪುರ ಯಕ್ಷಗಾನ ಸಂಘ, ಅಜ್ಜ ಚಂದು ನಾಯಕರ ಪ್ರೋತ್ಸಾಹದಿಂದ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ ಬೆಳೆದರು. ಆದರೆ ಇವರನ್ನು ಸೆಳೆದಿದ್ದು ಪ್ರಸಾಧನ ಕಲೆ. ಮುಂದೆ ವೇಷ ಕಟ್ಟುವ, ಬಣ್ಣಗಾರಿಕೆ ಕಲಿತು ಅದರಲ್ಲಿ ತೊಡಗಿಸಿಕೊಂಡರು.

1993ರಲ್ಲಿ ಗಜಾನನ ಯಕ್ಷಗಾನ ವೇಷಭೂಷಣ ಸಂಸ್ಥೆ ಸ್ಥಾಪಿಸಿ ಯಕ್ಷಗಾನ ಕ್ಷೇತ್ರದಲ್ಲಿ ಬಾಲಣ್ಣನೆಂದೇ ಹೆಸರುವಾಸಿಯಾಗಿದ್ದರು. ಹಿಂದೆ ಬಳಸುತ್ತಿದ್ದ ಅಟ್ಟೆ ಮುಂಡಾಸು, ಅಟ್ಟೆ ಕೇದಲೆ ಮುಂದಲೆಗಳನ್ನು ಕಟ್ಟಿ ಪಾತ್ರಗಳನ್ನು ಸಜ್ಜುಗೊಳಿಸುವಲ್ಲಿ ನಿಷ್ಣಾತರಾಗಿದ್ದರು. 45 ವರ್ಷಗಳಿಂದ ಪ್ರಸಾಧನ ಕಲೆಗೆ ತನ್ನನ್ನು ಅರ್ಪಿಸಿಕೊಂಡಿದ್ದ ಇವರು ದೇಶ-ವಿದೇಶಗಳಲ್ಲಿ ಅನೇಕ ಯಕ್ಷಗಾನ ಕಾರ್ಯಕ್ರಮಗಳಿಗೆ ವೇಷಭೂಷಣ ಒದಗಿಸಿದ್ದಾರೆ.

ಮೃತರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ.

ಇದನ್ನೂ ಓದಿ:ಗಂಗಾವತಿ: ಆನೆಗೊಂದಿಯ ರಾಜವಂಶಸ್ಥೆ ರಾಣಿ ವಿಜಯಲಕ್ಷ್ಮಿ ನಿಧನ - Rani Vijayalakshmi No more

ABOUT THE AUTHOR

...view details