ಕರ್ನಾಟಕ

karnataka

ETV Bharat / snippets

ವಕ್ಫ್ ಕಾಯಿದೆ ಗೊಂದಲ: ರೈತರ ಅಹವಾಲು ಸ್ವೀಕರಿಸಲು ತಂಡ ರಚಿಸಿದ ಬಿಜೆಪಿ

WAQF BOARD NOTICE ROW
ಬಿಜೆಪಿ (ETV Bharat)

By ETV Bharat Karnataka Team

Published : 5 hours ago

Updated : 4 hours ago

ಬೆಂಗಳೂರು: ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್ ಬೋರ್ಡ್ ಕಾಯ್ದೆಯಿಂದ ಆಗುತ್ತಿರುವ ಸಮಸ್ಯೆ ಹಾಗೂ ವಕ್ಫ್‌ ಬೋರ್ಡ್‌ನಿಂದ ರೈತರು ಎದುರಿಸುತ್ತಿರುವ ಅಹವಾಲುಗಳನ್ನು ಸ್ವೀಕರಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಂಡ ರಚಿಸಿದ್ದಾರೆ.

ಸಂಸದ ಗೋವಿಂದ ಕಾರಜೋಳ, ಸಂಸದ ರಮೇಶ್ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಹರೀಶ್ ಪೂಂಜಾ, ಮಹೇಶ್ ಟೆಂಗಿನಕಾಯಿ, ಮಾಜಿ ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ, ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಮಾಜಿ ಜಿಲ್ಲಾಧ್ಯಕ್ಷ ಎಂ.ಜಿ.ಜಿರಲಿ ನೇತೃತ್ಬದಲ್ಲಿ ತಂಡ ರಚಿಸಲಾಗಿದ್ದು, ಬಿಜೆಪಿ ನಿಯೋಗ ನಾಳೆ (ಅ.29) ವಿಜಯಪುರ ಜಿಲ್ಲೆಯಾದ್ಯಂತ ಭೇಟಿ ನೀಡಿ, ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ಕುಟುಂಬಗಳನ್ನು ಭೇಟಿ ಮಾಡಿ ವರದಿ ನೀಡಲಿದೆ.

ಮೊದಲು ರಮೇಶ ಜಿಗಜಿಣಗಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಹೆಸರನ್ನು ಕೈಬಿಡಲಾಗಿತ್ತು. ಅವರ ಅಸಮಾಧಾನ ಬೆನ್ನಲ್ಲೆ ತಂಡ ಮರುರಚಿ‌ಸಿ ಆದೇಶಿಸಲಾಗಿದೆ. ಐದು ಜನರಿದ್ದ ತಂಡದ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಗೆಜೆಟ್ ದೋಷದಿಂದಾಗಿ ಹೊನವಾಡ ಗ್ರಾಮದ ರೈತರ ಜಮೀನು ವಿಷಯದಲ್ಲಿ ಗೊಂದಲ: ಸಚಿವ ಎಂ.ಬಿ. ಪಾಟೀಲ್

Last Updated : 4 hours ago

ABOUT THE AUTHOR

...view details