ETV Bharat / snippets

ಹು-ಧಾ ಪೊಲೀಸ್ ಕಮಿಷನರ್ ಸಿಟಿರೌಂಡ್ಸ್ ಎಫೆಕ್ಟ್; ₹1,66,500 ದಂಡ ವಸೂಲಿ, 13 FIR​ ದಾಖಲು

POLICE COMMISSIONER CITY ROUNDS
ವಾಹನಗಳ ದಾಖಲಾತಿ ಪರಿಶೀಲನೆ (ETV Bharat)
author img

By ETV Bharat Karnataka Team

Published : 2 hours ago

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಇತ್ತೀಚಿಗೆ ನೈಟ್ ಸಿಟಿ ರೌಂಡ್ಸ್‌ ನಡೆಸಿದ್ದು, ಅಪಾರ ಪ್ರಮಾಣದ ದಾಖಲೆರಹಿತ ವಾಹನಗಳನ್ನು ಸೀಜ್ ಮಾಡಲಾಗಿತ್ತು.

ಅ.26ರಂದು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದಕ್ಷಿಣ ಉಪವಿಭಾಗದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 14 ಚೆಕ್‌ಪೋಸ್ಟ್​ಗಳನ್ನು ಹಾಕಿಕೊಂಡು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ದಾಖಲಾತಿ ಇಲ್ಲದ 258 ಬೈಕ್​ಗಳು ಮತ್ತು 3 ಆಟೋಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಾಹನಗಳ ದಾಖಲಾತಿ ಪರಿಶೀಲನೆ ನಡೆಸಲಾಗಿದ್ದು, ದಾಖಲಾತಿ ತೋರಿಸಿದ ವಾಹನಗಳನ್ನು ವಾಹನ ಮಾಲೀಕರಿಗೆ ಮರಳಿಸಿ, ದಾಖಲಾತಿ ಇಲ್ಲದ ವಾಹನಗಳಿಗೆ ಒಟ್ಟು 1,66,500 ದಂಡ ವಿಧಿಸಿದ್ದು, ದಾಖಲಾತಿಗಳನ್ನು ಪಡೆಯುವಂತೆ ಸೂಚಿಸಲಾಗಿತ್ತು. ಸೀಜ್ ಮಾಡಲಾಗಿದ್ದ ವಾಹನಗಳ ಮಾಲೀಕರು ಬರದೇ ಇರದ ಕಾರಣ 5 ಪೊಲೀಸ್ ಠಾಣೆಗಳಲ್ಲಿ ಒಟ್ಟು 13 ಎಫ್​ಐಆರ್​ ದಾಖಲಿಸಿ, ಒಟ್ಟು 28 ಬೈಕ್​ಗಳ ಸಮೇತ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.