ETV Bharat / state

ಶಿಗ್ಗಾವಿಗೆ ಯಾರೇ ಪ್ರಚಾರಕ್ಕೆ ಬಂದ್ರೂ ಏನೂ ಮಾಡೋಕಾಗಲ್ಲ, ಇಲ್ಲಿನ ಜನ ಬುದ್ಧಿವಂತರು: ಭರತ್ ಬೊಮ್ಮಾಯಿ

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಉಪಚುನಾವಣೆ ಕುರಿತು ಮಾತನಾಡುತ್ತಾ, ಈ ಕ್ಷೇತ್ರದಲ್ಲಿ ಯಾರೇ ಪ್ರಚಾರಕ್ಕೆ ಬಂದ್ರೂ ಏನೂ ಮಾಡೋಕಾಗಲ್ಲ, ಇಲ್ಲಿಯ ಜನ ಬುದ್ದಿವಂತರು ಎಂದರು.

bharath-bommai
ಭರತ್ ಬೊಮ್ಮಾಯಿ (ETV Bharat)
author img

By ETV Bharat Karnataka Team

Published : 3 hours ago

Updated : 2 hours ago

ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಪ್ರಚಾರಕ್ಕೆ ಬಂದರೂ ಏನೂ ಮಾಡೋಕಾಗಲ್ಲ. ಇಲ್ಲಿಯ ಜನ ಬುದ್ದಿವಂತರಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ತಿಳಿಸಿದ್ದಾರೆ.

ಶಿಗ್ಗಾವಿ ಕ್ಷೇತ್ರದ ಖುರ್ಸಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದು ಮನೆ ಮನೆಗೆ ತೆರಳಿ‌ದ ಅವರು ಮತಯಾಚಿಸಿದರು.

ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಮಾತನಾಡಿದರು (ETV Bharat)

ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಉಪ ಚುನಾವಣೆಯಲ್ಲಿ ಗೆಲುವು ನಮ್ಮದೇ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಸರ್ಕಾರದ ಸಚಿವರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಬರುತ್ತಾರೆ. ಆದರೆ, ಮತ ಎಣಿಕೆ ದಿನ ಮತಯಂತ್ರ ಓಪನ್ ಮಾಡಿದಾಗ, ನಮ್ಮ ತಂದೆ ಮಾಡಿದ ಅಭಿವೃದ್ದಿ ಕಾರ್ಯಗಳು ಜಯ ಸಾಧಿಸಿರುತ್ತವೆ ಎಂದರು.

ದಿನನಿತ್ಯ 10ರಿಂದ 11 ಹಳ್ಳಿಗಳಿಗೆ ಓಡಾಡಿ ಮತಯಾಚನೆ ಮಾಡುತ್ತಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಓಡಾಡುತ್ತಿದ್ದೇನೆ. ನಮ್ಮೆಲ್ಲ ಕಾರ್ಯಕರ್ತರು, ಹಿರಿಯರು, ಮತದಾರರ ಮನೆ ಮನೆಗೆ ಭೇಟಿ ನೀಡುತ್ತಿದ್ದೇನೆ. ಸಮಯ ಬಹಳ ಕಡಿಮೆ‌ ಇದೆ. ನನ್ನ ಪರ ನಮ್ಮ ತಂದೆ ತಾಯಿ ಕೂಡಾ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.

10,000 ಉದ್ಯೋಗ ಸೃಷ್ಟಿಸುತ್ತೇವೆ: ಶಾಶ್ವತ ಗ್ಯಾರಂಟಿ ಅಂದರೆ ಈ ಭಾಗಕ್ಕೆ ನೀರು ಕೊಟ್ಟಿದ್ದೀವಿ. 5 ಲಕ್ಷ ರೂಪಾಯಿಯ 15,000 ಮನೆಗಳನ್ನು ನೀಡಿದ್ದೇವೆ. 5000 ಉದ್ಯೋಗಾವಕಾಶ ಕೊಟ್ಟಿದ್ದೇವೆ. ಬರುವ ದಿನಗಳಲ್ಲಿ 10,000 ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ನೀರು, ಮನೆ, ಉದ್ಯೋಗ ಇವು ನಮ್ಮ ಪರ್ಮನೆಂಟ್ ಗ್ಯಾರಂಟಿ. ಈ ಗ್ಯಾರಂಟಿಗಳನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿಯವರ ಜಲ‌ಜೀವನ‌ ಮಿಷನ್ ಮೂಲಕ‌ ಮನೆ ಮನೆಗಳಿಗೆ ನೀರು ಕೊಟ್ಟಿದ್ದೇವೆ. ಒಂದು ಕೊಡ ನೀರಿಗೆ ತಾಯಂದಿರು ನಾಲ್ಕು ಐದು ಕಿ.ಮೀ ನಡೀತಿದ್ರು. ಆದರೆ, ಈಗ ಟ್ಯಾಪ್ ಓಪನ್ ಮಾಡಿದರೆ ನೀರು‌ ಬರುತ್ತಿದೆ. ಅಷ್ಟೇ ಅಲ್ಲದೇ, ಟೆಕ್ಸ್​ಟೈಲ್ಸ್​ ಪಾರ್ಕ್ ಶುರುವಾಗಲಿದೆ. ಇದೆಲ್ಲವೂ ಹೆಣ್ಣು ಮಕ್ಕಳಿಗೆ ಗೊತ್ತಿದೆ. ಹೀಗಾಗಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಪರಿಣಾಮ‌‌ ಏನೂ ಆಗಲ್ಲ ಎಂದರು.

ಮಂಜುನಾಥ ಕುನ್ನೂರು ನಾಮಪತ್ರ ತಿರಸ್ಕೃತ: ಉಪಚುನಾವಣೆಗೆ 19 ನಾಮಪತ್ರಗಳು ಅಂಗೀಕಾರಗೊಂಡಿವೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಂಜುನಾಥ ಕುನ್ನೂರು ನಾಮಪತ್ರ ತಿರಸ್ಕೃತಗೊಂಡಿದೆ.

ಮಂಜುನಾಥ್ ಕುನ್ನೂರು ತಮ್ಮ ಪುತ್ರ ರಾಜು ಕುನ್ನೂರು ಪರ ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಮಗನಿಗೆ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

ಮಂಜುನಾಥ ಕುನ್ನೂರು ಒಂದು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿದ್ದರು. ಇವರೂ ಸೇರಿ ಏಳು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ: ಭರತ್ ಬೊಮ್ಮಾಯಿ

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.