Google Photos Introduces AI Info: ಪ್ರಸ್ತುತ, ಕೃತಕ ಬುದ್ಧಿಮತ್ತೆ (AI) ಬಳಕೆ ಪ್ರಪಂಚದಾದ್ಯಂತ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದು ಬಹುತೇಕ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಿದೆ. ಜಗತ್ತು AI ಕಡೆಗೆ ಓಡುತ್ತಿದ್ದು, ಎಲ್ಲಾ ಕಂಪನಿಗಳು AI ಪರಿಕರಗಳನ್ನು ಬಳಸುತ್ತಿವೆ. AI ಉಪಕರಣಗಳ ಬಳಕೆ ಹೆಚ್ಚುತ್ತಿರುವ ಈ ಸಮಯದಲ್ಲಿ AI ಸಹಾಯದಿಂದ ಫೋಟೋ ಮತ್ತು ವಿಡಿಯೋಗಳನ್ನು ಸುಲಭವಾಗಿ ರಚಿಸಲಾಗುತ್ತಿದೆ.
ಇದು ನಿಜವಾದ ಫೋಟೋವೇ ಅಥವಾ AI ಸಹಾಯದಿಂದ ರೂಪಿಸಿದ್ದಾರಾ ಎಂಬುದು ತಿಳಿದುಕೊಳ್ಳುವುದು ಸಹ ಕಷ್ಟವಾಗುತ್ತದೆ. ಈ ಸಮಸ್ಯೆ ಪರಿಶೀಲಿಸಲು ಗೂಗಲ್ ಫೋಟೋಸ್ ಸಿದ್ಧವಾಗಿದೆ. ಇದಕ್ಕಾಗಿ ಗೂಗಲ್ ಫೋಟೋಸ್ನಲ್ಲಿ ಎಐ ಇನ್ಫೋ ಎಂಬ ಹೊಸ ಫೀಚರ್ ಅನ್ನು ತಂದಿದೆ. AI ಸಹಾಯದಿಂದ ರಚಿಸಲಾದ ಫೋಟೋಗಳನ್ನು ಸುಲಭವಾಗಿ ಗುರುತಿಸಲು ಈ ವೈಶಿಷ್ಟ್ಯವು ಉಪಯುಕ್ತವಾಗಿದೆ.
ಈ ಎಐ ಇನ್ಫೋ ಸೌಲಭ್ಯವನ್ನು ತಂದಿರುವುದಾಗಿ ಗೂಗಲ್ ತನ್ನ ಬ್ಲಾಗ್ ಪೋಸ್ಟ್ನಲ್ಲಿ ಹಂಚಿಕೊಂಡಿದೆ. AI ಸಹಾಯದಿಂದ ರೂಪಿಸಿದ್ದ ಫೋಟೋಗಳನ್ನು ಸುಲಭವಾಗಿ ಗುರುತಿಸಬಹುದು. ಅಂದರೆ ಇನ್ಮುಂದೆ AI ಉಪಕರಣಗಳನ್ನು ಬಳಸಿ ಎಡಿಟ್ ಮಾಡಬಹುದಾದ ಫೋಟೋಗಳನ್ನು ಕಾಣಬಹುದು. ಆದರೆ, ಗೂಗಲ್ ತಂದಿರುವ ಎಐ ಟೂಲ್ಗಳ ಸಹಾಯದಿಂದ ಫೋಟೋಗಳನ್ನು ಎಡಿಟ್ ಮಾಡಿದ್ರೆ ಮಾತ್ರ ಅಂತಹ ಎಐ ಫೋಟೋಗಳನ್ನು ಗುರುತಿಸಬಹುದಾಗಿದೆ ಎಂದು ತಿಳಿದು ಬಂದಿದೆ.
ಇದು ಕೆಲಸ ಮಾಡುವುದು ಹೇಗೆ?:
- ಗೂಗಲ್ ಫೋಟೋಸ್ ಅಪ್ಲಿಕೇಶನ್‌ನಲ್ಲಿ ಫೋಟೋಗಳನ್ನು ಆಯ್ಕೆ ಮಾಡಿದ ನಂತರ ಕೆಳಗೆ ಸ್ಕ್ರೋಲ್ ಮಾಡಿದಾಗ 'Details' ಸೆಕ್ಷನ್ ಕಾಣಿಸಿಕೊಳ್ಳುತ್ತದೆ.
- ಅದರಲ್ಲಿ AI ಸಹಾಯದಿಂದ ರಚಿಸಲಾದ ಫೋಟೋದಲ್ಲಿ 'Edited with Google AI' ಎಂದು ತೋರಿಸುತ್ತದೆ.
- ಎಲ್ಲ ಜನಪ್ರಿಯ ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳು AI ಆಧಾರಿತ ಪರಿಕರಗಳನ್ನು ನೀಡುತ್ತವೆ.
- ಹೆಚ್ಚು ಉತ್ತಮವಾದ ಎಡಿಟಿಂಗ್ ಆಯ್ಕೆಗಳು ಬಳಕೆದಾರರಿಗೆ ಲಭ್ಯವಾಗುತ್ತಿವೆ.
- ಇದರೊಂದಿಗೆ, ಗೂಗಲ್ ಫೋಟೋಸ್ ಇತ್ತೀಚೆಗೆ ಮ್ಯಾಜಿಕ್ ಎಡಿಟರ್ ಮತ್ತು ಮ್ಯಾಜಿಕ್ ಎರೇಸರ್ ಸೇರಿದಂತೆ ತನ್ನ ಎಲ್ಲ ಬಳಕೆದಾರರಿಗೆ ಇತರ AI ಟೂಲ್ಗಳನ್ನು ಲಭ್ಯವಾಗುವಂತೆ ಮಾಡಿದೆ.
ಗೂಗಲ್ ಇತ್ತೀಚೆಗೆ ತನ್ನ ಹೊಸ ಮುಖ್ಯ ತಂತ್ರಜ್ಞರಾಗಿ ಪ್ರಭಾಕರ್ ರಾಘವನ್ ಅವರನ್ನು ನೇಮಿಸಿದೆ. ಇವರನ್ನು ಗೂಗಲ್ ಸಿಇಒ ಸುಂದರ್ ಪಿಚೈ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಭಾಕರ್ ರಾಘವನ್ ಯಾರು? ಗೂಗಲ್ ಅವರನ್ನು ಹೊಸ ಮುಖ್ಯ ತಂತ್ರಜ್ಞರನ್ನಾಗಿ ಏಕೆ ನೇಮಿಸಿತು? ಮುಂತಾದ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಓದಿ: ಭಾರತೀಯನಿಗೆ ಒಲಿದ ಗೂಗಲ್ ಚೀಫ್ ಟೆಕ್ನಾಲಾಜಿಸ್ಟ್ ಹುದ್ದೆ: ಯಾರಿವರು ರಾಘವನ್?