ETV Bharat / state

ದೀಪಾವಳಿ ವೇಳೆ ಜನದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ಕ್ರಮ: ಹೆಚ್ಚುವರಿ ರೈಲು, ಕೋಚ್‌ ಅಳವಡಿಕೆ - SOUTH WESTERN RAILWAY

ದೀಪಾವಳಿ ಹಬ್ಬದ ನಿಮಿತ್ತ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ಒಟ್ಟು 55 ರೈಲುಗಳನ್ನು ಓಡಿಸುತ್ತಿದೆ. ವೈಟಿಂಗ್ ಲಿಸ್ಟ್ ಆಧಾರದ ಮೇಲೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ.

ನೈಋತ್ಯ ರೈಲ್ವೆ
ನೈಋತ್ಯ ರೈಲ್ವೆ (ETV Bharat)
author img

By ETV Bharat Karnataka Team

Published : Oct 28, 2024, 10:45 PM IST

ಹುಬ್ಬಳ್ಳಿ: ದೀಪಾವಳಿ ಮತ್ತು ಛತ್ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಒಟ್ಟು 55 ರೈಲುಗಳನ್ನು ಓಡಿಸಲಾಗುತ್ತಿದೆ. ಸಾಮಾನ್ಯ ರೈಲುಗಳ ದಟ್ಟಣೆಯನ್ನು ನಿವಾರಿಸಲು, ವೇಟಿಂಗ್ ಲಿಸ್ಟ್ ಆಧಾರದ ಮೇಲೆ ಬೋಗಿಗಳನ್ನು ಹೆಚ್ಚಿಸಲಾಗಿದೆ.

ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಾಸ್ಕೋ ಡ ಗಾಮಾ, ಗದಗ, ಹೊಸಪೇಟೆ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ಮೈಸೂರು, ತುಮಕೂರು, ಬೆಂಗಳೂರು ಕಂಟೋನ್ಮೆಂಟ್, ಮಂಡ್ಯ, ಹಾಸನ, ದಾವಣಗೆರೆ ಮತ್ತು ನೈಋತ್ಯ ರೈಲ್ವೆಯ ಇತರ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಅಧಿಕಾರಿಗಳು, ವಾಣಿಜ್ಯ ಸಿಬ್ಬಂದಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ಭದ್ರತಾ ಸಿಬ್ಬಂದಿಯೊಂದಿಗೆ ದಟ್ಟಣೆಯ ಸಮಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಸುವ್ಯವಸ್ಥೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ರೈಲ್ವೆ ಸುರಕ್ಷತಾ ಬಲ (ರೈಲ್ವೆ ಪ್ರೊಟೆಕ್ಷನ್ ಫೋರ್ಸ್) ಉಪಸ್ಥಿತಿಯನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿ ಸಿಸಿಟಿವಿ ಕ್ಯಾಮರಾಗಳು ಮತ್ತು ಬ್ಯಾಗೇಜ್ ಸ್ಕ್ಯಾನರ್​ಗಳ ಸ್ಥಾಪನೆಯೊಂದಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ಸಂಭಾವ್ಯ ತಾಂತ್ರಿಕ ಅಡೆತಡೆಗಳನ್ನು ನಿರ್ವಹಿಸಲು ಹೆಚ್ಚುವರಿ ಬೆಳಕು ಮತ್ತು ಬ್ಯಾಕಪ್ ವಿದ್ಯುತ್ ಸರಬರಾಜುಗಳನ್ನೂ ಸಹ ಮಾಡಲಾಗಿದೆ.

  • ನೈಋತ್ಯ ರೈಲ್ವೆಯ ಎಲ್ಲ ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಟಿಕೆಟಿಂಗ್, ನಿರ್ದೇಶನಗಳು ಮತ್ತು ವೇಳಾಪಟ್ಟಿ ಮಾಹಿತಿಯೊಂದಿಗೆ ಸಹಾಯ ಮಾಡಲು ತಾತ್ಕಾಲಿಕ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
  • ನಿರಂತರ ಎಟಿವಿಎಂ ಟಿಕೆಟಿಂಗ್‌ನ ಅನುಕೂಲಕ್ಕಾಗಿ ಎಲ್ಲಾ ಎಟಿವಿಎಂ ಆಯೋಜಕರಿಗೆ ಹೆಚ್ಚುವರಿ ಸ್ಮಾರ್ಟ್ ಕಾರ್ಡ್‌ಗಳನ್ನು ಮುಂಚಿತವಾಗಿ ನೀಡಲಾಗಿದೆ.
  • ಕಾಯುವ ಸಮಯವನ್ನು ಕಡಿಮೆ ಮಾಡಲು ಮೊಬೈಲ್ ಟಿಕೆಟಿಂಗ್, ಸ್ಮಾರ್ಟ್ ಕಾರ್ಡ್‌ಗಳು ಅಥವಾ ಕ್ಯೂಆರ್ ಆಧರಿತ ಟಿಕೆಟಿಂಗ್ ಅನ್ನು ಪ್ರೋತ್ಸಾಹಿಸಲಾಗಿದೆ.
  • ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಹೆಚ್ಚುವರಿ ಟಿಕೆಟಿಂಗ್ ಕೌಂಟರ್‌ಗಳನ್ನು ಒದಗಿಸಲಾಗಿದೆ.
  • ಪ್ರಯಾಣಿಕರು ಟಿಕೆಟ್ ಪಡೆಯುವುದನ್ನು ಮತ್ತು ಕ್ರಮಬದ್ಧವಾಗಿ ರೈಲು ಹತ್ತುವುದನ್ನು ಖಚಿತಪಡಿಸಿಕೊಳ್ಳಲು ಬುಕಿಂಗ್ ಕೌಂಟರ್ ಗಳಲ್ಲಿ ಮತ್ತು ಸಾಮಾನ್ಯ ಕೋಚ್ ಪ್ರವೇಶದ್ವಾರಗಳಲ್ಲಿ ಕ್ಯೂ ಮ್ಯಾನೇಜರ್‌ಗಳನ್ನು ನಿಯೋಜಿಸಲಾಗಿದೆ.
  • ವಿವಿಧ ಸ್ಥಳಗಳಿಗೆ ವಿಶೇಷ ರೈಲುಗಳ ಬಗ್ಗೆ ಬುಕಿಂಗ್ ಕಚೇರಿ ಮತ್ತು ನಿಲ್ದಾಣದ ಪ್ರವೇಶದ್ವಾರದಲ್ಲಿ ಮೆಗಾ ಫೋನ್ ಪ್ರಕಟಣೆಗಳನ್ನು ಮಾಡಲಾಗುತ್ತಿದೆ.
  • ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ಲಭ್ಯತೆ ಮತ್ತು ಜನಸಂದಣಿಯ ಒತ್ತಡದಿಂದಾಗಿ ಆರೋಗ್ಯ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸಿಬ್ಬಂದಿ ಸನ್ನದ್ಧರಾಗಿದ್ದಾರೆ ಎಂದು ಖಚಿತಪಡಿಸಲಾಗುತ್ತಿದೆ.
  • ನೈಋತ್ಯ ರೈಲ್ವೆಯ ಪ್ರಮುಖ ನಿಲ್ದಾಣಗಳಲ್ಲಿ ಆಂಬ್ಯುಲೆನ್ಸ್ ಜೊತೆಗೆ ವೈದ್ಯಕೀಯ ಬೂತ್‌ಗಳನ್ನು ಒದಗಿಸಲಾಗಿದೆ.
  • ವಿಶೇಷ ರೈಲುಗಳ ಲಭ್ಯತೆಯ ಬಗ್ಗೆ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ನಿಲ್ದಾಣಗಳಲ್ಲಿ ಹೆಚ್ಚುವರಿ ಟಿಕೆಟ್ ತಪಾಸಣಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಇದಲ್ಲದೆ ಇದು ಅಸ್ತಿತ್ವದಲ್ಲಿರುವ ರೈಲುಗಳ ಜನದಟ್ಟಣೆ ಕಡಿಮೆ ಮಾಡುತ್ತದೆ.
  • ಪ್ರಯಾಣಿಕರಿಗೆ ನಿರಂತರ ಕುಡಿಯುವ ನೀರು ಪೂರೈಕೆಯನ್ನು ಖಾತ್ರಿಪಡಿಸಲಾಗಿದೆ. ಎಲ್ಲ ಕ್ಯಾಟರಿಂಗ್ ಸ್ಟಾಲ್‌ಗಳು ಸಾಕಷ್ಟು ನೀರಿನ ಬಾಟಲಿಗಳಿಂದ ತುಂಬಿವೆ. ಹೆಚ್ಚುವರಿಯಾಗಿ, ರೈಲು-ಬದಿಯ ಮಾರಾಟಗಾರರು ಮತ್ತು ಟ್ರಾಲಿ ಸೇವೆಗಳು ಬೋಗಿಗಳ ಒಳಗೆ ಅಥವಾ ಹತ್ತಿರ ನೀರಿನ ಬಾಟಲಿಗಳನ್ನು ನೀಡಲು ಸಿದ್ಧವಾಗಿವೆ.
  • ಪಾದಚಾರಿ ಮೇಲ್ಸೇತುವೆಗಳು (ಎಫ್​ಒಬಿಗಳು), ಎಸ್ಕಲೇಟರ್​ಗಳು, ವಿಶ್ರಾಂತಿ ಕೊಠಡಿಗಳು ಮತ್ತು ಪ್ಲಾಟ್‌ಫಾರ್ಮ್‌ಗಳಿಗೆ ಪ್ರಯಾಣಿಕರಿಗೆ ಪರಿಣಾಮಕಾರಿಯಾಗಿ ಮಾರ್ಗದರ್ಶನ ನೀಡಲು ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚುವರಿ ಸಂಕೇತ/ಟೈಮ್ ಟೇಬಲ್ ಬೋರ್ಡ್​ಗಳನ್ನು ಸ್ಥಾಪಿಸಲಾಗಿದೆ.

ದೀಪಾವಳಿ ಮತ್ತು ಛತ್ ಪೂಜಾ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ನೈಋತ್ಯ ರೈಲ್ವೆ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ವಿಶೇಷ ರೈಲುಗಳೊಂದಿಗೆ ಸೇವೆಗಳನ್ನು ಹೆಚ್ಚಿಸುವ ಮೂಲಕ, ಹೆಚ್ಚಿದ ಬೇಡಿಕೆಯನ್ನು ಪೂರೈಸುವ ಮತ್ತು ಪ್ರಯಾಣಿಕರ ಆರಾಮ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು ಸಂಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.