ಚಾಮರಾಜನಗರ:ಎಷ್ಟು ಬಾರಿ ಮನವಿ ಮಾಡಿದರೂ ಕಸ ವಿಲೇವಾರಿ ಹಾಗೂ ಸಂಗ್ರಹಕ್ಕೆ ಪಟ್ಟಣ ಪಂಚಾಯಿತಿ ಮುಂದಾಗದ ಪರಿಣಾಮ, ನಿವಾಸಿಗಳು ಪ.ಪಂ ಕಚೇರಿ ಮುಂದೆಯೇ ಕಸ ಸುರಿದು ಆಕ್ರೋಶ ಹೊರಹಾಕಿದ್ದಾರೆ.
ಹನೂರು ಪಟ್ಟಣದ 8ನೇ ವಾರ್ಡ್ನ ದೊಡ್ಡಿಕೇರಿ ಬೀದಿಯಲ್ಲಿ ಸಮರ್ಪಕವಾಗಿ ಕಸ ಸಂಗ್ರಹಣೆ ಮಾಡಲಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಹೀಗಾಗಿ, ಕಸ ಸಂಗ್ರಹಣೆ ಮಾಡಿ ಪಟ್ಟಣ ಪಂಚಾಯತಿ ಕಚೇರಿ ಮುಂಭಾಗ ಸುರಿದಿದ್ದಾರೆ.