ETV Bharat / state

ಸಿಎಂ, ಡಿಸಿಎಂ ಮತ್ತು ಅಂಬಿಕಾಪತಿ ಕಟ್ಟಿದ್ದ ಸುಳ್ಳಿ‌ನ ಮಹಲ್ ಕುಸಿದು ಬಿದ್ದಿದೆ: ಆರ್. ಅಶೋಕ್ - R ASHOK

ಸಿದ್ದರಾಮಯ್ಯ ತೆರೆದ ಪುಸ್ತಕ ಅಂತಾರೆ. ದಿನ ಒಬ್ಬೊಬ್ಬ ಮಂತ್ರಿ ದರೋಡೆಯ ಪುಸ್ತಕ ತೆರೆಯುತ್ತಿದ್ದಾರೆ. ಕನ್ನ ಹಾಕುವ ಮಂತ್ರಿ ರಾಜ್ಯದಲ್ಲಿ ಇದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್​ ಕಿಡಿಕಾರಿದರು.

ಆರ್​. ಅಶೋಕ್​, ಗೋವಿಂದ ಕಾರಜೋಳ
ಆರ್​. ಅಶೋಕ್​, ಗೋವಿಂದ ಕಾರಜೋಳ (ETV Bharat)
author img

By ETV Bharat Karnataka Team

Published : Nov 17, 2024, 3:38 PM IST

ಬೆಂಗಳೂರು: ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಅಂಬಿಕಾಪತಿ ಸುಳ್ಳಿನ ಮಹಲ್ ಕಟ್ಟಿದ್ರು. ಆದರೆ, ಅದು ಈಗ ಕುಸಿದು ಬಿದ್ದು ಹೋಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಬಿಜೆಪಿ ಕಚೇರಿಯಲ್ಲಿ ಸಂಸದ ಗೋವಿಂದ ಕಾರಜೋಳ ಜೊತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಳ್ಳು ರಾಮಯ್ಯ ಅನ್ನೋದು ಇವತ್ತು ಪ್ರೂವ್ ಆಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್​ನವರು 40% ಆರೋಪ ಮಾಡಿದ್ದರು, ಈಗ ನಾವು ಆರೋಪ‌ ಮುಕ್ತವಾಗಿದ್ದೇವೆ. ಕೆಂಪಣ್ಣ ಮತ್ತೆ ಪದ್ಮನಾಭ ಅವರು ಕಾಂಗ್ರೆಸ್​ನ ಟೂಲ್​ಕಿಟ್ ಆಗಿ ಕೇಸ್ ದಾಖಲು ಮಾಡಿದ್ರು. ಆರು ವರ್ಷದಿಂದ ಅಂಬಿಕಾಪತಿ ಗುತ್ತಿಗೆ ಕೆಲಸ ಮಾಡಿಲ್ಲ. ನಿರುದ್ಯೋಗಿ ಕಾಂಟ್ರಾಕ್ಟರ್ ಎಲ್ಲಾ ಸೇರಿ 40% ಸರ್ಕಾರ ಎಂದು ಆರೋಪ‌ ಮಾಡಿದ್ದರು. ಕೋವಿಡ್ ಹಗರಣ ಬಗ್ಗೆ ಹೇಳ್ತಿದ್ದಾರೆ ಈಗ. 40% ಆರೋಪ ಸಂಬಂಧ ಹೈಕೋರ್ಟ್​ನಲ್ಲಿ ದಾಖಲೆ ಕೊಟ್ಟಿಲ್ಲ. ನೋಟಿಸ್ ಕೊಟ್ರು ಅಟೆಂಡ್ ಆಗಿಲ್ಲ. ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿದೆ. ಅವರು ಆರು ವರ್ಷದಿಂದ ಕೆಲಸ ಮಾಡಿಲ್ಲ. ಹೇಗೆ ಪರ್ಸೆಂಟೇಜ್ ಕೊಡ್ತಾರೆ ಎಂದು ಲೊಕಾಯುಕ್ತ ಕೇಸ್ ವಜಾ ಮಾಡಿದೆ ಎಂದು ಅಶೋಕ್​ ಹೇಳಿದ್ರು.

ಸಿದ್ದರಾಮಯ್ಯ ಮುಸ್ಲಿಮರ ಹೀರೋ ಆಗುವುದಕ್ಕೆ ಹೊರಟಿದ್ದಾರೆ: ''ಸಿದ್ದರಾಮಯ್ಯ ತೆರೆದ ಪುಸ್ತಕ ಅಂತಾರೆ. ದಿನ ಒಬ್ಬೊಬ್ಬ ಮಂತ್ರಿ ದರೋಡೆಯ ಪುಸ್ತಕ ತೆರೆಯುತ್ತಿದ್ದಾರೆ. ಕನ್ನ ಹಾಕುವ ಮಂತ್ರಿ ರಾಜ್ಯದಲ್ಲಿ ಇದ್ದಾರೆ. ತೆರೆದ ಪುಸ್ತಕ ನಾವು ನೋಡಿದ್ರೆ ಕಪ್ಪು ಚುಕ್ಕೆ ಇಡೋಕೆ ಜಾಗನೆ ಇಲ್ಲ. ಸಿದ್ದರಾಮಯ್ಯ ಅವರ ಕುಟುಂಬ ಲೂಟಿ‌ ಮಾಡ್ತಿದೆ. ನನ್ನ ಮುಟ್ಟಿ ನೋಡಿ, ಕೇಸ್ ಹಾಕಿ‌ ನೋಡಿ ಸಿಎಂ ಪದವಿಯಿಂದ ಇಳಿಯುವುದಿಲ್ಲ ಅಂತಿದ್ದಾರೆ. ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಹೀಗೆ ಹೇಳ್ತಿರಾ?. 14 ಸೈಟ್​ಗಳನ್ನು ಯಾಕೆ ವಾಪಸ್​ ಕೊಟ್ರಿ?. ಏಕ ವಚನದಲ್ಲಿ ಮಾತಾಡ್ತಾರೆ. ಕೇಳುದ್ರೆ ಹಳ್ಳಿಯಿಂದ ಬಂದವನು ಅಂತಾರೆ. ನಾನು ಸೈಟ್ ವಾಪಸ್​ ಮಾಡಿಲ್ಲ. ನನ್ನ ಹೆಂಡ್ತಿ ನನಗೆ ಗೊತ್ತಿಲ್ಲದೆ ಕೊಟ್ಟಿದ್ದಾರೆ ಅಂತಾರೆ. ಅಹಿಂದ ನಾಯಕರಾಗಿಲ್ಲಾ ಅವರು. ಈಗ ಅವರು ಅಲ್ಪಸಂಖ್ಯಾತರ ಚಾಂಪಿಯನ್ ಆಗಿದ್ದಾರೆ. ಮುಸ್ಲಿಮರ ಹೀರೋ ಆಗುವುದಕ್ಕೆ ಹೊರಟಿದ್ದಾರೆ'' ಎಂದು ಟೀಕಿಸಿದರು.

''ಪ್ರಧಾನಿ ಬಗ್ಗೆ ಸಿಎಂ ಮಾತಾಡಿದ್ದಾರೆ. ದಾಖಲೆ ಕೊಡಿ ಅಂತಾ ಕೇಳಿದ್ದಾರೆ. ದಾಖಲೆ ಕೊಟ್ರು ಪ್ರಧಾನಿ ಮೇಲೆ ಆರೋಪ ಮಾಡ್ತಿದ್ದಾರೆ. ರಾಜಭವನಕ್ಕೆ ದೂರು ನೀಡಿದ್ದವರ ಮೇಲೆ ಎಸ್​ಐಟಿ ರಚನೆ ಮಾಡಿ. ಅಬಕಾರಿ ಮಾಲೀಕರ ಸಂಘದವರ ಮೇಲೆ ಎಸ್​ಐಟಿ‌ ಮಾಡಿ. ಲೂಟಿ ಹೊಡೆದು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದೀರಿ. 40% ಹೇಳುದ್ರು ಅದು ಸುಳ್ಳಾಯ್ತು. ಮುಖ್ಯಮಂತ್ರಿಗಳನ್ನು ಸಿದ್ದರಾಮಯ್ಯ ಅನ್ನೋದು ಬಿಟ್ಟು ಸುಳ್ಳುರಾಮಯ್ಯ ಅಂತ ಕರಿಬೇಕು'' ಎಂದು ಕಿಡಿಕಾರಿದರು.

ಅಧಿವೇಶನ ನಡೆಯುವುದೇ ಡೌಟ್​: ಸಾಕಷ್ಟು ವಿಚಾರ ಇಟ್ಟುಕೊಂಡು ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ.‌ ಅಧಿವೇಶನ ಕರೆಯುತ್ತಾರೋ ಇಲ್ಲವೋ ಎಂದು ಗೊತ್ತಿಲ್ಲ, ಈಗಾಗಲೇ ಸಿದ್ದರಾಮಯ್ಯ ಭಯದಲ್ಲಿ ಇದ್ದಾರೆ. ಬಹುತೇಕ ಅಧಿವೇಶನ ಕರೆಯೋದು ಡೌಟಿದೆ ಎಂದು ಅಶೋಕ್​ ತಿಳಿಸಿದ್ರು.

ವಕ್ಫ್ ಅಭಿಯಾನ ಹೋರಾಟದಲ್ಲಿ ಬಿಜೆಪಿ ಬಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಯಾವುದೇ ಬಣ ಇಲ್ಲ. ವಕ್ಫ್ ವಿಚಾರದಲ್ಲಿ ರೈತರು, ಸಂಘ ಸಂಸ್ಥೆಯವರು ಹೋರಾಟ ಮಾಡ್ತಿದ್ದಾರೆ. ನಾವು ಅವರ ಹೋರಾಟಕ್ಕೂ ಸಪೋರ್ಟ್ ಮಾಡುತ್ತೇವೆ. ಅಧ್ಯಕ್ಷರು ಹೇಳಿದ್ದಾರೆ, ರೈತರ ಪರವಾಗಿ ಯಾರೇ ಹೋರಾಟ ಮಾಡಿದ್ರು ನಾವು ಸ್ವಾಗತ ಮಾಡುತ್ತೇವೆ.‌ ಮೊದಲು ಹೋರಾಟ ಆರಂಭ ಮಾಡಿದ್ದು ಯತ್ನಾಳ್. ನಾವೆಲ್ಲ ಸೇರಿ ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ರು.

ಪಟ್ಟಿ ಮಾಡುವವರಿಗೆ ಅನುಭವದ ಕೊರತೆ ಇದೆ: ವಕ್ಫ್ ವಿರುದ್ಧದ ಹೋರಾಟದಲ್ಲಿ ಕಾರಜೋಳ ಹೆಸರು ನಿನ್ನೆ ಸೇರಿಸಿದ್ದಕ್ಕೆ ಪರೋಕ್ಷ ಟಾಂಗ್ ನೀಡಿದ ಸಂಸದ ಗೋವಿಂದ ಕಾರಜೋಳ, ಪಟ್ಟಿ ಮಾಡೋರಿಗೆ ಅನುಭವದ ಕೊರತೆ ಇದೆ. ರಾಜಕೀಯಕ್ಕೆ ಅನುಭವ ಮುಖ್ಯ. ನಾನು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಿ. ಆಫೀಸ್​ನಲ್ಲಿ ಕುಳಿತು ಪಟ್ಟಿ ಮಾಡೋರಿಗೆ ಅನುಭವ ಇಲ್ಲ. ಅನುಭವ ಇದ್ದವರು ಬೇಕು ರಾಜಕೀಯಕ್ಕೆ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: 'ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.