ETV Bharat / snippets

ಪಿಂಚಣಿಗೆ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಉಡುಪಿ ಖಜಾನೆಯ ಉಪನಿರ್ದೇಶಕ, ಸಹಾಯಕ

Lokayukta raid ಲೋಕಾಯುಕ್ತ ದಾಳಿ
ಉಡುಪಿ ಖಜಾನೆಯ ಉಪನಿರ್ದೇಶಕ, ಸಹಾಯಕ (ETV Bharat)
author img

By ETV Bharat Karnataka Team

Published : 4 hours ago

ಉಡುಪಿ: ನಿವೃತ್ತ ಶಿಕ್ಷಕರೊಬ್ಬರಿಗೆ ಪಿಂಚಣಿ ಹಣ ಬಿಡುಗಡೆಗೊಳಿಸಲು ಲಂಚ ಪಡೆಯುತ್ತಿದ್ದ ಉಡುಪಿ ಖಜಾನೆಯ ಉಪನಿರ್ದೇಶಕ ಮತ್ತು ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಖಜಾನೆಯ ಉಪನಿರ್ದೇಶಕ ರವಿಕುಮಾರ್ ಮತ್ತು ಸಹಾಯಕ ರಾಘವೇಂದ್ರ ಎಂಬವರು ಪಿಂಚಣಿ ಹಣ ಬಿಡುಗಡೆಗೆ ನಿವೃತ್ತ ಶಿಕ್ಷಕ ಹಿತೇಂದ್ರ ಭಂಡಾರಿ ಅವರಿಂದ 5,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಹಿತೇಂದ್ರ ಭಂಡಾರಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಮಂಗಳೂರು ಲೋಕಾಯುಕ್ತ ಎಸ್ಪಿ ನಟರಾಜ್ ಮಾರ್ಗದರ್ಶನದಲ್ಲಿ ಉಡುಪಿ ಪ್ರಭಾರ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್, ಮಂಗಳೂರು ಲೋಕಾಯುಕ್ತ ಪಿಐ ಪಿ.ಸುರೇಶ್ ಹಾಗೂ ಕೆ.ಎನ್.ಚಂದ್ರಶೇಖರ್ ತಂಡ ಶನಿವಾರ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಿ, ರವಿಕುಮಾರ್ ಮತ್ತು ರಾಘವೇಂದ್ರ ಅವರನ್ನು ವಶಕ್ಕೆ ಪಡೆದಿದೆ.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬಂದಿ ನಾಗರಾಜ, ಸತೀಶ್, ಪ್ರಸನ್ನ, ರಮೇಶ್, ಸೂರಜ್, ಸುಧೀರ್, ರಾಘವೇಂದ್ರ, ಪುಷ್ಪಲತಾ, ಮಲ್ಲಿಕಾ ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.