ಕರ್ನಾಟಕ

karnataka

ಬೆಂಗಳೂರು: ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ಬಳಸದ ಸವಾರರು, ಪೊಲೀಸರಿಂದ ಟೋಯಿಂಗ್

By ETV Bharat Karnataka Team

Published : Aug 31, 2024, 4:26 PM IST

ಪೊಲೀಸರಿಂದ ಟೋಯಿಂಗ್
ಪೊಲೀಸರಿಂದ ಟೋಯಿಂಗ್ (ETV Bharat)

ಬೆಂಗಳೂರು:ನಗರದ ಹೃದಯಭಾಗವಾದ ಮೆಜೆಸ್ಟಿಕ್‌ನ ಸುತ್ತಮುತ್ತ ಅನಗತ್ಯವಾಗಿ ವಾಹನಗಳ ನಿಲುಗಡೆಗೆ ಮುಕ್ತಿ ಕಲ್ಪಿಸುವ ಉದ್ದೇಶದಿಂದ ಫ್ರೀಡ್ಂ ಪಾರ್ಕ್ ಪಕ್ಕದಲ್ಲಿ ಅತ್ಯಾಧುನಿಕ ಬಹುಮಹಡಿ ಪಾರ್ಕಿಂಗ್ ಸಂಕೀರ್ಣವನ್ನ ಲೋಕಾರ್ಪಣೆಗೊಳಿಸಿ ಎರಡೂವರೆ ತಿಂಗಳುಗಳೇ ಕಳೆದಿದೆ. ಆದರೂ ಸಹ ರಸ್ತೆ ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಮಾಡುತ್ತಿರುವವರಿಗೆ ಬಿಬಿಎಂಪಿ ಹಾಗೂ ಉಪ್ಪಾರಪೇಟೆ ಸಂಚಾರಿ ಪೊಲೀಸರು ಬಿಸಿ‌ ಮುಟ್ಟಿಸುತ್ತಿದ್ದಾರೆ.

ಉಪ್ಪಾರಪೇಟೆ ಸಂಚಾರಿ ಠಾಣಾ ವ್ಯಾಪ್ತಿಯ ಗಾಂಧಿನಗರ, ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುತ್ತಿರುವ ವಾಹನಗಳನ್ನ ಟೋಯಿಂಗ್ ಮಾಡುವ ಕೆಲಸಕ್ಕೆ ಮರು ಚಾಲನೆ ನೀಡಲಾಗಿದೆ. ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿಯಲ್ಲಿ ಫ್ರೀಡ್ಂ ಪಾರ್ಕ್ ಬಳಿ ನಿರ್ಮಾಣವಾದ ಬಹುಮಹಡಿ ಪಾರ್ಕಿಂಗ್ ಸಂಕೀರ್ಣವನ್ನು ಜೂನ್ 20 ರಂದು ಸಾರ್ವಜನಿಕ ಬಳಕೆಗೆ ಮುಕ್ತಿಗೊಳಿಸಲಾಗಿತ್ತು. ಅಗತ್ಯ ಸೌಲಭ್ಯಗಳು ಮಾತ್ರವಲ್ಲದೆ ವಾಹನ ನಿಲುಗಡೆ ಮಾಡುವವರಿಗೆ ನಿಗದಿತ ಸ್ಥಳಕ್ಕೆ ಉಚಿತ ಡ್ರಾಪ್ ಮತ್ತು ಪಿಕ್​ಅಪ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಆದರೂ ಸಹ ನೂತನ ವ್ಯವಸ್ಥೆಯ ಕಡೆ ಆಸಕ್ತಿ ತೋರದ ವಾಹನ ಸವಾರರು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಟೋಯಿಂಗ್ ಮಾಡಿ ದಂಡ ವಿಧಿಸುವ ಕೆಲಸ ಆರಂಭಿಸಲಾಗಿದೆ.

ABOUT THE AUTHOR

...view details