ETV Bharat / education-and-career

ಸಿಇಟಿ/ನೀಟ್: 2ನೇ ಸುತ್ತಿ‌ನ ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಪ್ರಕಟ; ಲಭ್ಯ‌ವಿರುವ ಸೀಟ್​ಗಳೆಷ್ಟು? - CET NEET Seat Allotment - CET NEET SEAT ALLOTMENT

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್​​​ಗಳ ಪ್ರವೇಶದ 2ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದೆ.

KEA
ಕೆಇಎ (ETV Bharat)
author img

By ETV Bharat Karnataka Team

Published : Sep 18, 2024, 4:59 PM IST

Updated : Sep 18, 2024, 6:02 PM IST

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್​​​ಗಳ ಪ್ರವೇಶದ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ವೆಬ್​ಸೈಟ್​​ನಲ್ಲಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಈ ಸುತ್ತಿನ ಸೀಟು ಹಂಚಿಕೆಗೆ ಸೆಪ್ಟೆಂಬರ್​ 13ರ ಮಧ್ಯಾಹ್ನ 2 ಗಂಟೆವರೆಗೆ ನಮೂದಿಸಿದ ಆಪ್ಶನ್​ಗಳನ್ನು ಪರಿಗಣಿಸಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ತಾತ್ಕಾಲಿಕ ಫಲಿತಾಂಶವಾಗಿರುವ ಕಾರಣ ಅಭ್ಯರ್ಥಿಗಳು ಕಾಲೇಜುಗಳಿಗೆ ಹೋಗಿ ಪ್ರವೇಶ ಪಡೆಯುವಂತಿಲ್ಲ ಎಂದು ವಿವರಿಸಿದ್ದಾರೆ.

ಯಾವುದಾದರೂ ನಿರ್ದಿಷ್ಟ ಆಕ್ಷೇಪಣೆಗಳು ಇದ್ದಲ್ಲಿ ಸೆಪ್ಟೆಂಬರ್ 19ರ ಬೆಳಗ್ಗೆ 10ಗಂಟೆಯೊಳಗೆ keauthority-ka@nic.inಗೆ ಇ-ಮೇಲ್ ಮಾಡಬಹುದು. ಆಕ್ಷೇಪಣೆ ಪರಿಶೀಲಿಸಿದ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೆಚ್. ಪ್ರಸನ್ನ ಮಾಹಿತಿ ನೀಡಿದ್ದಾರೆ.

ಪ್ರಾಧಿಕಾರದ ವೆಬ್​​ಸೈಟ್​​ಗೆ ಭೇಟಿ ನೀಡಿ: ಸೀಟು ಹಂಚಿಕೆ ಕುರಿತು ಪ್ರಕಟಿಸಲಾಗುವ ಸೂಚನೆಗಳು, ಅಧಿಸೂಚನೆಗಳು ಮತ್ತು ಪ್ರಕಟಣೆಗಳನ್ನು ನೋಡದೆ ಇರುವ ಕಾರಣದಿಂದ ಉಂಟಾಗುವ ಯಾವುದೇ ಪರಿಣಾಮಗಳಿಗೆ ಪ್ರಾಧಿಕಾರ ಜವಾಬ್ದಾರಿಯಲ್ಲ. ಅಭ್ಯರ್ಥಿಗಳು ಪ್ರತಿದಿನ ಕನಿಷ್ಠ ಎರಡು ಬಾರಿ ಪ್ರಾಧಿಕಾರದ ವೆಬ್​​ಸೈಟ್​​ಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಸೀಟು ಹಂಚಿಕೆ ಮಾಹಿತಿ ಹೀಗಿದೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶದ ಪ್ರಕಾರ, ಒಟ್ಟು 16,748 ಸೀಟು ಉಳಿದಿವೆ. ಒಟ್ಟು‌ 1,29,417 ಸೀಟುಗಳ ಪೈಕಿ 1,12,677 ಸೀಟುಗಳು‌ ಹಂಚಿಕೆಯಾಗಿವೆ ಎಂದು ಪ್ರಾಧಿಕಾರದ ಹೆಚ್.ಪ್ರಸನ್ನ ಮಾಹಿತಿ ಹಂಚಿಕೊಂಡಿದ್ದಾರೆ.

ಎಂಜಿನಿಯರಿಂಗ್ ಕೋರ್ಸ್​​ಗಳಿಗೆ 73,847 ಸೀಟು ಹಂಚಿಕೆಯಾಗಿದ್ದು, 3,126 ಸೀಟು ಉಳಿದಿವೆ. ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ 8,798 ಸೀಟು ಹಂಚಿಕೆಯಾಗಿದ್ದು, 383 ಮ್ಯಾನೇಜ್ಮೆಂಟ್ ಸೀಟು ಮಾತ್ರ ಹಂಚಿಕೆಗೆ ಬಾಕಿ‌ ಇವೆ. ದಂತ ವೈದ್ಯಕೀಯ ಕೋರ್ಸ್​​ನಲ್ಲಿ 2,636 ಸೀಟು ಹಂಚಿಕೆಯಾಗಿ, ಕೇವಲ 14 ಸೀಟು ಮಾತ್ರ ಉಳಿದಿವೆ. ಬಿ-ಫಾರ್ಮಾ ಮತ್ತು ಫಾರ್ಮಾ- ಡಿ ಕೋರ್ಸ್ ಗಳ ಎಲ್ಲ ಸೀಟು ಹಂಚಿಕೆಯಾಗಿವೆ. ಕೃಷಿ ಕೋರ್ಸ್​ಗಳಿಗೆ 2,782 ಸೀಟುಗಳ ಪೈಕಿ 12 ಸೀಟು ಮಾತ್ರ ಲಭ್ಯ‌ ಇವೆ.

ಆಯುಷ್​​ನಲ್ಲಿ ‌ 5,790 ಸೀಟುಗಳು ಹಂಚಿಕೆಯಾಗಿದ್ದು, 2,477 ಸೀಟು ಉಳಿದಿವೆ. ಯೋಗ, ನ್ಯಾಚುರೋಪತಿಯಲ್ಕಿ 374 ಸೀಟು ಹಂಚಿಕೆಯಾಗಿ, 34 ಸೀಟು ಬಾಕಿ‌ ಇವೆ. ಪಶುವೈದ್ಯ ಕೋರ್ಸ್​​ನಲ್ಲಿ‌ 315 ಸೀಟು ಹಂಚಿಕೆಯಾಗಿದ್ದು, ಕೇವಲ ಒಂದು ಸೀಟು ಮಾತ್ರ ಲಭ್ಯವಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು‌ ವಿವರಿಸಿದ್ದಾರೆ.

ನರ್ಸಿಂಗ್ ಕೋರ್ಸ್​​ನಲ್ಲಿ 14,448 ಸೀಟು ಹಂಚಿಕೆಯಾಗಿ, 10,194 ಸೀಟುಗಳು ಬಾಕಿ ಉಳಿದಿವೆ. ಆರ್ಕಿಟೆಕ್ಚರ್ ಕೋರ್ಸ್​ನಲ್ಲಿ‌ 484 ಸೀಟುಗಳು ಹಂಚಿಕೆಯಾಗಿ, 498 ಸೀಟು ಬಾಕಿ‌ ಇವೆ‌ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮಹಿಳೆಯರಿಗೆ ಭರ್ಜರಿ ಉದ್ಯೋಗಾವಕಾಶ - Chikkaballapur WCD Recruitment

Last Updated : Sep 18, 2024, 6:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.