ETV Bharat / snippets

ಧಾರವಾಡ: ಸಂಗೊಳ್ಳಿ ರಾಯಣ್ಣ, ರೈತ ಮುಖಂಡನ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು

author img

By ETV Bharat Karnataka Team

Published : Sep 18, 2024, 11:52 AM IST

SANGOLLI RAYANNA STATUE VANDALIZED
ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನ (ETV Bharat)

ಧಾರವಾಡ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ರೈತ ಮುಖಂಡನೋರ್ವರ ಮೂರ್ತಿಗಳನ್ನು ಕಿಡಿಗೇಡಿಗಳು ಭಗ್ನಗೊಳಿಸಿದ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ನಡೆದಿದೆ.

ಬಸಪ್ಪ ಲಕ್ಕುಂಡಿ ಎನ್ನುವ ಹುತಾತ್ಮ ರೈತನ ಮೂರ್ತಿಯನ್ನು ಭಗ್ನಗೊಳಿಸಿದ್ದಲ್ಲದೆ, ಗ್ರಾಮದ ಬಸ್ ನಿಲ್ದಾಣದ ಎದುರಿಗಿದ್ದ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಸಹ ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. ಅಳಗವಾಡಿ ಗ್ರಾಮದಲ್ಲಿದ್ದ ಬಸಪ್ಪ ಲಕ್ಕುಂಡಿ ಎಂಬ ರೈತ ಮುಖಂಡನ ಮೂರ್ತಿ ಮತ್ತು ರಾಯಣ್ಣನ ಮೂರ್ತಿ, ಖಡ್ಗ ಹಾಗೂ ಕೆಲ ಭಾಗದಲ್ಲಿ ಕಿಡಿಗೇಡಿಗಳು ಭಗ್ನ ಮಾಡಿದ್ದಾರೆ.

ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ನವಲಗುಂದ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸದ್ಯ ಭಗ್ನವಾಗಿರೋ ಮೂರ್ತಿಗಳಿಗೆ ಬಟ್ಟೆ ಸುತ್ತಿದ್ದಾರೆ. ಈ ಕೃತ್ಯವೆಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.