T10 League: ಅಬುಧಾಬಿ T10 ಕ್ರಿಕೆಟ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಮಾಜಿ ಬ್ಯಾಟರ್ ವಿಧ್ವಂಸಕ ಪ್ರದರ್ಶನ ತೋರಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಅಜ್ಮನ್ ಬೋಲ್ಟ್ಸ್ ತಂಡ, ನಿಗದಿತ 10 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 79 ರನ್ ಕಲೆ ಹಾಕಿತ್ತು.
ಅಜ್ಮನ್ ಬೋಲ್ಟ್ಸ್ ಪರ ಡ್ಯಾನಿಯಲ್ (22), ರವಿ ಬೊಪಾರ (23), ಶೆಹಾನ್ ಜಯಸೂರ್ಯ (10) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಡ್ಯಾನಿಯಲ್ 10 ಎಸೆತಗಳನ್ನು ಎದುರಿಸಿ 3 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರೆ, ಬೊಪಾರ 3 ಬೌಂಡರಿ ಒಂದು ಸಿಕ್ಸರ್ ಸಿಡಿಸಿ ತಂಡದ ಸ್ಕೋರ್ಗೆ ಕೊಡುಗೆ ನೀಡಿದರು.
ಅಬು ಧಾಬಿ ಪರ ಮಾರ್ಕ್ ಅದೈರ್, ಜೀಶಾನ್ ನಾಸೀರ್, ಕದೀಮ್ ತಲಾ 2 ವಿಕೆಟ್, ರೆಯಿಸ್ ಮತ್ತು ಕೇಲ್ ಮೇಯರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಅಜ್ಮನ್ ನೀಡಿದ್ದ ಈ ಗುರಿ ಬೆನ್ನತ್ತಿದ ಅಬು ಧಾಬಿ, ಫಿಲ್ಸಾಲ್ಟ್ ಮತ್ತು ಜಾನಿ ಬೇರ್ಸ್ಟೋ ಬ್ಯಾಟಿಂಗ್ ನೆರವಿನಿಂದ 1 ವಿಕೆಟ್ ಕಳೆದುಕೊಂಡು 5.4 ಓವರ್ಗಳಲ್ಲಿ 81 ರನ್ ಸಿಡಿಸಿ ಗೆಲುವಿನ ದಡ ಸೇರಿತು.
Salt makes it spicy! 🌶️🥵
— FanCode (@FanCode) November 21, 2024
The swashbuckling English opener smacked 34 runs in an over and finished with 53* (19) leading Team Abu Dhabi to a thumping win in the #AbuDhabiT10 opener! 👊#ADT10onFanCode pic.twitter.com/V0ZiTNjldp
ಸಾಲ್ಟ್ ಸ್ಪೋಟಕ ಬ್ಯಾಟಿಂಗ್: ಪಂದ್ಯದಲ್ಲಿ ಅಬು ಧಾಬಿ ಪರ ಫಿಲ್ ಸಾಲ್ಟ್ ವಿಧ್ವಂಸಕ ಪ್ರದರ್ಶನ ತೋರಿದರು. ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಮೇತ 53 ರನ್ ಸಿಡಿಸಿದರು. ಸಾಲ್ಟ್ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್ ಮತ್ತು 2 ಬೌಂಡರಿ ಸೇರಿದ್ದವು. ಗುಲ್ಬದೀನ್ ಎಸೆದ ಓವರ್ನಲ್ಲಿ 5 ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿದರು. ಈ ಓವರ್ನ ಮೊದಲ ಎರಡು ಎಸೆತದಲ್ಲಿ ಮಿಡ್ ವಿಕೆಟ್ನಿಂದ ಸಿಕ್ಸ್ ಸಿಡಿಸಿದ್ದ ಸಾಲ್ಟ್ ಮೂರನೇ ಎಸೆತದಲ್ಲಿ ಬೌಂಡರಿ ಕಲೆ ಹಾಕಿದರು. ನಾಲ್ಕು ಮತ್ತು ಐದನೇ ಎಸೆತದಲ್ಲಿ ಸತತ ಎರಡು ಲಾಂಗ್ ಆಫ್ನತ್ತ ಸಿಕ್ಸರ್ ಬಾರಿಸಿದರು. ಕೊನೆಯ ಮತ್ತು ಅಂತಿಮ ಬೌಲ್ನಲ್ಲೂ ಲಾಂಗ್ ಆನ್‌ನತ್ತ ಸಿಕ್ಸ್ ಸಿಡಿಸಿ ಘರ್ಜಿಸಿದರು. ಇದರೊಂದಿಗೆ ಈ ಓವರ್ಲ್ಲಿ 34 ರನ್ ಪೇರಿಸಿ ಅರ್ಧಶತಕ ಪೂರೈಸಿದರು.
ಈ ಮೂಲಕ ಐಪಿಎಲ್ ಮೆಗಾ ಹರಾಜು ಹೊಸ್ತಿಲಲ್ಲಿ ಫಿಲ್ ಸಾಲ್ಟ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಕಳೆದ ವರ್ಷ ಕೆಕೆಆರ್ ಪರ ಆಡಿದ್ದ ಇವರನ್ನು ಈ ಬಾರಿ ತಂಡದಿಂದ ಕೈ ಬಿಡಲಾಗಿದೆ.
ಇದನ್ನೂ ಓದಿ: IPL 2025ರ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ಆಘಾತ; ಪ್ರಮುಖ ಆಟಗಾರನಿಗೆ ನಿಷೇಧ!