ಇತ್ತೀಚೆಗಷ್ಟೇ ಸೌತ್ ಸೂಪರ್ ಸ್ಟಾರ್ ಧನುಷ್ ವಿರುದ್ಧ ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಸಿನಿಮಾಗೆ ಸಂಬಂಧಿಸಿದ ಹಕ್ಕುಸ್ವಾಮ್ಯ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಪ್ರಕರಣದ ತಾಪ ಕಡಿಮೆಯಾಗದ ಈ ಹೊತ್ತಲ್ಲಿ ನಟ ನಟಿ ಒಂದೇ ಕಡೆ ಕಾಣಿಸಿಕೊಂಡಿದ್ದಾರೆ. ಒಂದೇ ಫ್ರೇಮ್ನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದು, ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗಿವೆ.
ಹೌದು, ಧನುಷ್ ಮತ್ತು ನಯನತಾರಾ ಒಂದೇ ಸೂರಿನಡಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಆಕಾಶ್ ಭಾಸ್ಕರನ್ ವಿವಾಹ ಸಮಾರಂಭಕ್ಕೆ ಸೌತ್ನ ಈ ಸೂಪರ್ಸ್ಟಾರ್ಸ್ ಸಾಕ್ಷಿಯಾಗಿದ್ದಾರೆ. ಇಬ್ಬರೂ ಕೊಂಚ ಅಂತರದಲ್ಲಿ ಕುಳಿತಿರುವುದು ಕಂಡು ಬಂದಿದೆ. ಆದರೆ ಇಬ್ಬರೂ ಒಬ್ಬರನ್ನೊಬ್ಬರು ನಿರ್ಲಕ್ಷಿಸಿದಂತೆ ತೋರಿದೆ. ಇಬ್ಬರ ನಡುವೆಯೂ ಅಂಗರಕ್ಷಕರಿರುವುದನ್ನು ಈ ವೈರಲ್ ವಿಡಿಯೋಗಳಲ್ಲಿ ಗಮನಿಸಬಹುದು.
Dhanush and Nayanthara at Idli kadai producer’s wedding 😂pic.twitter.com/gjDZIxbnGT
— Kajanthini (@Kajanthini03) November 21, 2024
ಕಾಪಿರೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಯನತಾರಾ ಅವರಿಗೆ ಧನುಷ್ 10 ಕೋಟಿ ರೂಪಾಯಿಯ ಲೀಗಲ್ ನೋಟಿಸ್ ಕಳುಹಿಸಿದ್ದರು. ಹಾಗಾಗಿ ಇದೇ ನವೆಂಬರ್ 16ರಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ನಯನತಾರಾ ಬಹಿರಂಗ ವಾಗ್ದಾಳಿ ನಡೆಸಿದ್ದರು. 'ನಯನತಾರಾ: ದಿ ಬಿಯಾಂಡ್ ಫೇರಿಟೇಲ್' ಸಾಕ್ಷ್ಯಚಿತ್ರಕ್ಕಾಗಿ ನಾನುಂ ರೌಡಿ ಧಾನ್ ಚಿತ್ರದ 3 ಸೆಕೆಂಡುಗಳ ದೃಶ್ಯವನ್ನು ಬಳಸಿದ್ದಕ್ಕಾಗಿ ನಿರ್ಮಾಪಕ ಧನುಷ್ ಅವರು ನಯನತಾರಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಈ ವಿವಾದದ ಕೆಲವೇ ನಂತರ, ನಯನತಾರಾ ಮತ್ತು ಧನುಷ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮದುವೆ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
#Dhanush and #Nayanthara Spotted in same hall 👀😂 pic.twitter.com/ZSXXuKxYHt
— Skyyy✨ (@IamSK462) November 21, 2024
ವೈರಲ್ ವಿಡಿಯೋಗಳಲ್ಲಿ, ಧನುಷ್ ಮತ್ತು ನಯನತಾರಾ ವೆಡ್ಡಿಂಗ್ ಹಾಲ್ನಲ್ಲಿ ಅಕ್ಕಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದು. ನಡುವೆ ಸ್ವಲ್ಪವೇ ಅಂತರವಿದೆ. ಇಬ್ಬರೂ ಒಬ್ಬರನ್ನೊಬ್ಬರು ನಿರ್ಲಕ್ಷಿಸಿದ್ದಾರೆ. ತಾರೆಯರ ಗಮನ ಮದುವೆ ಸಮಾರಂಭದ ಮೇಲಿದೆ. ಜೊತೆಗೆ, ತಮ್ಮ ಜೊತೆಗಿದ್ದವರೊಂದಿಗೆ ಮಾತನಾಡುತ್ತಿದ್ದಾರೆ. ಧನುಷ್ ಬಿಳಿ ಸಾಂಪ್ರದಾಯಿಕ ಉಡುಗೆಯಲ್ಲಿದ್ದರೆ, ನಯನತಾರಾ ಗುಲಾಬಿ ಬಣ್ಣದ ಸೀರೆಯಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಪತಿ ವಿಘ್ನೇಶ್ ಶಿವನ್ ಜೊತೆ ನಯನತಾರಾ ಮದುವೆಗೆ ಆಗಮಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಯನತಾರಾ ಮತ್ತು ಧನುಷ್ ಅವರ ವಿಡಿಯೋ ಕುರಿತು ಭಾರಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: ಸೂಪರ್ಸ್ಟಾರ್ ಧನುಷ್ ವಿರುದ್ಧ ಲೇಡಿ ಸೂಪರ್ಸ್ಟಾರ್ ನಯನತಾರಾ ಬಹಿರಂಗ ವಾಗ್ದಾಳಿ
ಏನಿದು ಪ್ರಕರಣ? 2015ರಲ್ಲಿ ನಟ ಧನುಷ್ 'ನಾನುಂ ರೌಡಿ ಧಾನ್' ಚಿತ್ರವನ್ನು ನಿರ್ಮಿಸಿದ್ದರು. ಈ ಸಿನಿಮಾದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿದ್ದು, ಸಿನಿಮಾ ಸೂಪರ್ಹಿಟ್ ಆಯಿತು. ನಟಿ ನಯನತಾರಾ ತಮ್ಮ ಜೀವನಾಧಾರಿತ 'ನಯನತಾರಾ: ದಿ ಬಿಯಾಂಡ್ ಫೇರಿಟೇಲ್' ಸಾಕ್ಷ್ಯಚಿತ್ರವನ್ನು ಮಾಡಿದ್ದು, ಅದರಲ್ಲಿ ನಾನುಂ ರೌಡಿ ಧಾನ್ ಚಿತ್ರದ ಕೆಲ ದೃಶ್ಯಗಳನ್ನು ಸೇರಿಸಲು ಅನುಮತಿ ಕೇಳಿದ್ದರು. ನಿರ್ಮಾಪಕರಿಂದ ಉತ್ತರಕ್ಕಾಗಿ 2 ವರ್ಷಗಳ ಕಾಲ ಕಾದಿದ್ದಾರೆ. ಆದ್ರೆ ಅನುಮತಿ ಸಿಕ್ಕಿರಲಿಲ್ಲ.
#Dhanush and #Nayanthara Spotted in same hall..🤯🔥
— Tharani ᖇᵗк (@iam_Tharani) November 21, 2024
pic.twitter.com/rOw4xC3Ger
ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ಧನುಷ್ ಅವರು ತಮ್ಮ ಚಿತ್ರದ 3 ಸೆಕೆಂಡುಗಳ ದೃಶ್ಯಗಳನ್ನು ತಮ್ಮ ಅನುಮತಿಯಿಲ್ಲದೇ ಬಳಸಿರುವುದಾಗಿ ಆರೋಪಿಸಿ ಕಾಪಿರೈಟ್ ಕೇಸ್ ದಾಖಲಿಸಿದ್ದಾರೆ. ಜೊತೆಗೆ, 10 ಕೋಟಿ ರೂ. ಕೇಳಿದ್ದಾರೆ. ಈ ಲೀಗಲ್ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ನಯನತಾರಾ ಸುದೀರ್ಘ ಪೋಸ್ಟ್ ಮೂಲಕ ಧನುಷ್ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ. 3 ಸೆಕೆಂಡುಗಳ ಕ್ಲಿಪ್ ಅನ್ನು ವೈಯಕ್ತಿಕ ಕ್ಯಾಮರಾದಿಂದ ಚಿತ್ರೀಕರಿಸಲಾಗಿದೆ. ಹಾಗಾಗಿ ಅದನ್ನು ಬಳಸಲಾಗಿದೆ ಎಂದು ನಟಿ ತಿಳಿಸಿದ್ದಾರೆ.