ETV Bharat / bharat

ಸ್ವತಂತ್ರ ಅಭ್ಯರ್ಥಿಗಳಿಗೆ 50 ರಿಂದ 100 ಕೋಟಿ 'ಮಹಾಯುತಿ' ಆಫರ್: ಸಂಜಯ್ ರಾವತ್ ಆರೋಪ

ಸ್ವತಂತ್ರ ಅಭ್ಯರ್ಥಿಗಳಿಗೆ ಮಹಾಯುತಿ ಮೈತ್ರಿಕೂಟವು 50 ರಿಂದ 100 ಕೋಟಿ ರೂಪಾಯಿಗಳ ಆಮಿಷ ಒಡ್ಡುತ್ತಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.

ಸಂಜಯ್ ರಾವತ್
ಸಂಜಯ್ ರಾವತ್ (IANS)
author img

By ETV Bharat Karnataka Team

Published : 5 hours ago

ಮುಂಬೈ: ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವ ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶಗಳು ನಾಳೆ (ಶನಿವಾರ, ನ.23) ಪ್ರಕಟವಾಗಲಿವೆ. ಪ್ರತಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ (ಎಂವಿಎ) ರಾಜ್ಯದಲ್ಲಿ ಕನಿಷ್ಠ 160 ಸ್ಥಾನಗಳನ್ನು ಗೆಲ್ಲಲಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ಮಾತನಾಡಿದ ರಾವತ್, "ನಾವು ಕಿಸಾನ್ ಮಜ್ದೂರ್ ಪಕ್ಷ, ಸಮಾಜವಾದಿ ಪಕ್ಷ, ಎಡಪಂಥೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಅಲ್ಲದೇ ಪ್ರಕಾಶ್ ಅಂಬೇಡ್ಕರ್ ಅವರ ಪಕ್ಷದಿಂದ 50 - 60 ಜನ ಶಾಸಕರು ಆಯ್ಕೆಯಾಗಲಿದ್ದಾರೆ" ಎಂದು ಹೇಳಿದರು.

ಸಣ್ಣ ಪಕ್ಷಗಳು ನಮ್ಮೊಂದಿಗಿವೆ: ಈ ಸಂದರ್ಭದಲ್ಲಿ ಮಾತನಾಡಿದ ಸಂಜಯ್ ರಾವತ್, "ನಾವು (ಮಹಾ ವಿಕಾಸ್ ಅಘಾಡಿ) ಪ್ರತಿಯೊಂದು ಕ್ಷೇತ್ರದ ಬಗ್ಗೆ ಅಧ್ಯಯನ ಮಾಡಿದ್ದು, ನಾವು ಕನಿಷ್ಠ 160 ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂಬುದು ಕಂಡು ಬಂದಿದೆ. ಈ ಬಗೆಗಿನ ಮತದಾನೋತ್ತರ ಸಮೀಕ್ಷೆಗಳನ್ನು ನಾವು ನಂಬುವುದಿಲ್ಲ. ನಾವು ಅಧಿಕಾರ ಹಿಡಿಯುವ ಸನಿಹಕ್ಕೆ ಬಂದರೆ ಸಣ್ಣ ಪಕ್ಷಗಳು ನಮ್ಮ ಪರವಾಗಿ ವಾಲಲಿವೆ. ಕಿಸಾನ್ ಮಜ್ದೂರ್ ಪಕ್ಷ, ಸಮಾಜವಾದಿ ಪಕ್ಷ, ಎಡಪಂಥೀಯ ಪಕ್ಷಗಳು ಈ ಎಲ್ಲಾ ಸಣ್ಣ ಪಕ್ಷಗಳು ಇದಕ್ಕಾಗಿ ನಮ್ಮೊಂದಿಗೆ ಇವೆ." ಎಂದರು.

ಏಕನಾಥ್ ಶಿಂಧೆ, ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರಿಗೆ ಗೆಲ್ಲುವುದು ಖಚಿತವಿಲ್ಲ. ಹೀಗಾಗಿಯೇ ಅವರು ಗೆಲ್ಲಬಹುದಾದ ಸ್ವತಂತ್ರ ಅಭ್ಯರ್ಥಿಗಳಿಗೆ 50 ರಿಂದ 100 ಕೋಟಿ ರೂಪಾಯಿ ಆಫರ್​ ನೀಡುತ್ತಿದ್ದಾರೆ ಎಂದು ರಾವತ್ ಆರೋಪಿಸಿದರು.

ಸಹೋದರಿಯರೇ ಗುಲಾಮಗಿರಿಯ ವಿರುದ್ಧ ದಂಗೆ ಎದ್ದಿದ್ದಾರೆ: ಈ ಬಾರಿ ಶೇಕಡಾವಾರು ಮತದಾನ ಹೆಚ್ಚಾಗಿರುವುದನ್ನು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

"ಮತದಾನದ ಅಂಕಿ - ಅಂಶಗಳು ಇದ್ದಕ್ಕಿದ್ದಂತೆ ಹೇಗೆ ಏರುತ್ತವೆ? ಹರಿಯಾಣದಲ್ಲೂ ಇದೇ ರೀತಿ ಆಯಿತು. ಶೇ 2 ರಿಂದ 4ರಷ್ಟು ಮತದಾನ ಹೆಚ್ಚಾಯಿತು ಮತ್ತು ಭಾರತೀಯ ಜನತಾ ಪಕ್ಷದ ಸ್ಥಾನಗಳು ಇದ್ದಕ್ಕಿದ್ದಂತೆ ಹೆಚ್ಚಾದವು.. ಇದು ಹೇಗೆ ಸಾಧ್ಯ? ಇದು ಯಾವ ರೀತಿಯ ಆಟ? ಚುನಾವಣಾ ಆಯೋಗವು ಇದನ್ನು ನಮಗೆ ವಿವರಿಸಬೇಕು" ಎಂದು ರಾವತ್ ಹೇಳಿದರು.

"ಈ ವರ್ಷ ಮಹಿಳಾ ಮತದಾನದ ಶೇಕಡಾವಾರು ಹೆಚ್ಚಾಗಿದ್ದು, ಇದನ್ನು ಸ್ವಾಗತಿಸುತ್ತೇವೆ. ಆದರೆ ನಮ್ಮ ಪ್ರೀತಿಯ ಸಹೋದರಿಯರು ನಮಗೇ ಮತ ಚಲಾಯಿಸಿದ್ದಾರೆ ಎಂದು ಫಡ್ನವೀಸ್ ಹೇಳಿದ್ದಾರೆ. ಪ್ರೀತಿಯ ಸಹೋದರಿಯರು ನಿಮಗೆ ಮಾತ್ರ ಮತ ಚಲಾಯಿಸಿದ್ದಾರೆಯೇ? ಆದರೆ 1500 ರೂಪಾಯಿ ಕೊಟ್ಟು ನಮ್ಮನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅವರೇ ನಿಮ್ಮ ವಿರುದ್ಧ ದಂಗೆ ಎದ್ದಿದ್ದಾರೆ ಮತ್ತು ಇದೇ ಕಾರಣಕ್ಕೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ" ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಪ್ರಕಾಶ್ ಅಂಬೇಡ್ಕರ್ ಪಕ್ಷದ 50 ರಿಂದ 60 ಶಾಸಕರ ಗೆಲುವು?: ವಂಚಿತ್ ಬಹುಜನ್ ಅಘಾಡಿ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಅವರು ಯಾರು ಈ ಬಾರಿ ಅಧಿಕಾರ ಹಿಡಿಯುತ್ತಾರೋ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಪ್ರಕಾಶ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವ ನಾಯಕ ಮತ್ತು ಈ ಬಾರಿ ಅವರ ಪಕ್ಷದ 50 ರಿಂದ 60 ಶಾಸಕರು ಆಯ್ಕೆಯಾದರೆ ಹಾಗೂ ನಮಗೆ 50 ರಿಂದ 60 ಶಾಸಕರ ಬೆಂಬಲದ ಅಗತ್ಯವಿದ್ದರೆ ನಾವು ಖಂಡಿತವಾಗಿಯೂ ಅವರ ಸಹಾಯ ಕೋರುತ್ತೇವೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿರುವುದರಿಂದ ಅವರು ನಮ್ಮೊಂದಿಗೆ ಇರಲಿದ್ದಾರೆ" ಎಂದು ರಾವತ್ ನುಡಿದರು.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಗೆಲ್ಲುವ ಯಾವುದೇ ಮೈತ್ರಿಕೂಟಕ್ಕೆ ನಮ್ಮ ಬೆಂಬಲ: ಪ್ರಕಾಶ್ ಅಂಬೇಡ್ಕರ್ ಅಚ್ಚರಿಯ ಹೇಳಿಕೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.