ETV Bharat / snippets

ವಿಪ್ ಉಲ್ಲಂಘನೆ: ಆನೇಕಲ್ ಪುರಸಭೆ ಅಧ್ಯಕ್ಷೆ, ಸದಸ್ಯನನ್ನು ಉಚ್ಚಾಟಿಸಿದ ಬಿಜೆಪಿ

author img

By ETV Bharat Karnataka Team

Published : Sep 17, 2024, 3:29 PM IST

ಬಿಜೆಪಿ
ಬಿಜೆಪಿ (ETV Bharat)

ಬೆಂಗಳೂರು: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಹಾಲಿ ಅಧ್ಯಕ್ಷೆ ಸುಧಾ ನಿರಂಜನ್ ಮತ್ತು ಸದಸ್ಯ ಸುರೇಶ್ ಬಾಬು ಅವರನ್ನು ಪಕ್ಷ ವಿರೋಧಿ ಚುಟುವಟಿಕೆಗಳ ಆರೋಪದಡಿ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬಿಜೆಪಿ ಉಚ್ಚಾಟನೆ ಮಾಡಿದೆ.

ಆಗಸ್ಟ್ 31 ರಂದು ನಡೆದ ಆನೇಕಲ್ ಪುರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಪಕ್ಷದ ಸಂವಿಧಾನದ ನಿಯಮಗಳ ವಿರುದ್ಧವಾಗಿ ಪಕ್ಷದ ವಿಪ್‌ ಉಲ್ಲಂಘನೆ ಮಾಡಿ ಬಂಡಾಯವಾಗಿ ಸ್ಪರ್ಧಿಸಿ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆನೇಕಲ್ ಪುರಸಭೆ ಹಾಲಿ ಅಧ್ಯಕ್ಷೆ ಸುಧಾ.ವಿ ನಿರಂಜನ್ ಮತ್ತು ಹಾಲಿ ಸದಸ್ಯ ಸುರೇಶ್ ಬಾಬು. ಜಿ ರವರನ್ನು 6 (ಆರು) ವರ್ಷಗಳ ಕಾಲ ಭಾರತೀಯ ಜನತಾ ಪಾರ್ಟಿಯಿಂದ ಉಚ್ಚಾಟನೆಗೊಳಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ ರಾಮಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪನವರ ಮಗ ಎಂಬ ಅಹಂಕಾರವಿಲ್ಲ, ಹೆಮ್ಮೆ ಇದೆ: ಬಿ.ವೈ. ವಿಜಯೇಂದ್ರ - BJP State President

ETV Bharat Logo

Copyright © 2024 Ushodaya Enterprises Pvt. Ltd., All Rights Reserved.