ETV Bharat / snippets

ಬಿಎಂಟಿಸಿ ಬಸ್ ಡಿಕ್ಕಿಯಾಗಿ ವಿಶೇಷಚೇತನ ವ್ಯಕ್ತಿ ಸಾವು

author img

By ETV Bharat Karnataka Team

Published : Sep 18, 2024, 10:15 AM IST

BMTC BUS  DISABLED PERSON DIES  BENGALURU
ಬಿಎಂಟಿಸಿ ಬಸ್ ಹರಿದು ವಿಶೇಷಚೇತನ ವ್ಯಕ್ತಿ ಸಾವು (ETV Bharat)

ಬೆಂಗಳೂರು: ಬಿಎಂಟಿಸಿ ಬಸ್ ಹರಿದು ವಿಶೇಷಚೇತನ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಡರಾತ್ರಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆಯಿತು. ರಾತ್ರಿ‌ 12:15ರ ಸುಮಾರಿಗೆ ಬಸ್ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಗೆ ವೇಗವಾಗಿ ಬಂದ ಬಸ್ ಡಿಕ್ಕಿಯಾಗಿದೆ. ಈ ವೇಳೆ ಅವರು ನೆಲಕ್ಕೆ ಬಿದ್ದಿದ್ದು, ತಲೆಯ ಮೇಲೆ ಬಸ್‌ನ ಮುಂದಿನ ಚಕ್ರ ಹರಿದಿದೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಜಾಗರೂಕತೆಯಿಂದ ಚಾಲನೆ ಮಾಡಿದ ಬಸ್ ಚಾಲಕ ಗೋಪಾಲ್​ ಅವರನ್ನು ಉಪ್ಪಾರಪೇಟೆ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತನ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: ಹಳೆ ವೈಷಮ್ಯ: ಬೆಳಗಾವಿಯಲ್ಲಿ ಮೂವರಿಗೆ ಚಾಕು ಇರಿತ - Three Youths Stabbed

ETV Bharat Logo

Copyright © 2024 Ushodaya Enterprises Pvt. Ltd., All Rights Reserved.