ಹೈದರಾಬಾದ್: ತೆಲುಗು ರಾಜ್ಯದೆಲ್ಲೆಡೆ ಮಹಿಳೆಯರಂತೆ ದಿರಿಸು ಧರಿಸಿ 60 ದರೋಡೆ ಮತ್ತು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳರ ತಂಡದ ಸದಸ್ಯರನ್ನು ಬಂಧಿಸುವಲ್ಲಿ ರಾಜೇಂದ್ರ ನಗರ ಪೊಲೀಸ್ ಠಾಣೆಯ ಕ್ರೈಂ ತಂಡ ಯಶಸ್ವಿಯಾಗಿದೆ. ಸಿಸಿಎಸ್ ರಾಜೇಂದ್ರ ನಗರ ವಲಯದಲ್ಲಿ ಇವರನ್ನು ಬಂಧಿಸಲಾಗಿದೆ.
ಮೆಹದಿಪಟ್ಟಣಂ ನಿವಾಸಿಯಾಗಿರುವ ಆಟೋ ಡ್ರೈವರ್ ಗುಂಜಪೊಗು ಸುಧಾಕರ್ (33) ಸೇರಿದಂತೆ ಸರೂರ್ನಗರ ನಿವಾಸಿಯಾಗಿರುವ ಕಾರ್ ಕ್ಲೀನರ್ ಭಂಡಾರಿ ಸಮ್ಯೊನ್ (22), ಪುಣೆ ಮೂಲದ ನಾರಾಯಣಗುಡ ಕಾಲೋನಿ ವೆಲ್ಡರ್ ಶನಿದೇವ್ ಸಾಲುಂಕೆ (20), ಪಂಜಾಬ್ ಮೂಲದ ಡ್ರೈವರ್ ಅಮರ್ಜೀತ್ ಸಿಂಗ್ (31) ಬಂಧಿತರು.
ಬಂಧಿತರಿಂದ 35 ಲಕ್ಷ್ಯ ಮೌಲ್ಯದ 600 ಗ್ರಾಂ ಚಿನ್ನ ಮತ್ತು ವಜ್ರದ ಆಭರಣ ಹಾಗೂ ಬಜಾಜ್ ಡಿಸ್ಕವರ್ ಮೋಟರ್ಸೈಕಲ್ ವಶಕ್ಕೆ ಪಡೆಯಲಾಗಿದೆ.
ಸುಧಾಕರ್ ಈಗಾಗಲೇ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಅನೇಕ ಕಾರು ಕಳ್ಳತನ, ಮನೆಗೆ ಕನ್ನದಂತಹ ಪ್ರಕರಣದಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಅಲ್ಲಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ 50 ಲಕ್ಷ ಮೌಲ್ಯದ ಆಸ್ತಿ ಸಂಬಂಧಿತ ಕೊಲೆಯಲ್ಲಿ ಕೂಡ ಈತ ಭಾಗಿಯಾಗಿದ್ದಾನೆ. ಆಸಿಫ್ ನಗರ ಪೊಲೀಸರು ಈತನ ವಿರುದ್ಧ ಪಿಡಿ ಕಾಯ್ದೆ ಅಡಿ ಹುಡುಕಾಟ ನಡೆಸಿದ್ದರು.
ಹಲವು ಅಪರಾಧ: ಸುಧಾಕರ್, ಸಾಯಿ, ಸಲ್ಮಾನ್, ಕಾಕಾ, ಡೇಂಜರ್ ಮತ್ತು ಆಂಟೋನಿ ಎಂಬ ಅನೇಕ ಹೆಸರಿನಿಂದ ಕಾರ್ಯಾಚರಣೆ ಮಾಡುತ್ತಿದ್ದರು. ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಬೈಕ್ ಕಳ್ಳತನ ಮತ್ತು ಮನೆಗನ್ನ ಹಾಕುತ್ತಿದ್ದರು. ಅಲ್ಲದೇ ಆಗಾಗಗ್ಗೆ ವಾಹನದ ಮೂಲಕ ಕಣ್ಮರೆಯಾಗುತ್ತಿದ್ದರು. ಕಳ್ಳತನ ಮಾಡಿದ ದಿನ ಅವರು ವಿಗ್ ಮತ್ತು ಮಹಿಳೆಯರ ಉಡುಪು ಧರಿಸಿ, ತಮ್ಮ ಗುರುತು ಮರೆ ಮಾಚಿಕೊಳ್ಳುತ್ತಿದ್ದರು.
ಗ್ಯಾಂಗ್ ನೆಟ್ವರ್ಕ್ ಮತ್ತು ಜಾಮೀನು ತಂತ್ರ: ಸುಧಾಕರ್ ಈ ಹಿಂದೆ ಆಸೀಫ್ನಗರ ಪೊಲೀಸರಿಂದ ಪಿಡಿ ಕಾಯ್ದೆ ಅಡಿ ಬಂಧಿತನಾಗಿದ್ದ. ಈ ವೇಳೆ ಸ್ಯಾಮ್ಸನ್, ಸಾಲುಂಕೆ ಮತ್ತು ಸಿಂಗ್ ಅವರನ್ನು ಜೈಲಿನಲ್ಲಿ ಭೇಟಿಯಾಗಿದ್ದ. ಈ ವೇಳೆ, ಗ್ಯಾಂಗ್ ಕಟ್ಟಿಕೊಂಡ ಇವರು ದರೋಡೆ ಮಾಡಿ, ಕದ್ದ ವಸ್ತುಗಳನ್ನು ಆತನ ಸಹೋದರ ಗುಂಜಪೊಗು ಸುರೇಶ್ ಮೂಲಕ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಸ್ಥಳೀಯವಾಗಿ ಸುರೇಶ್ ಉತ್ತಮ ಹೆಸರು ಹೊಂದಿದ್ದು, ಆರ್ಥಿಕ ವ್ಯವಹಾರ ನಡೆಸುತ್ತಿದ್ದು, ಬಂದ ಹಣವನ್ನು ಸಂಗ್ರಹಿಸಿ ಸುಧಾಕರ್ ಮತ್ತು ಆತನ ಸಹಚರರು ಬಂಧನವಾದಾಗ ಜಾಮೀನು ಕೊಡಿಸುತ್ತಿದ್ದ.
ಭರವಸೆಯ ಬೆಳಕು: ಪ್ರತಿ ಬಾರಿ ಸುಧಾಕರ್ ಬಂಧನವಾದಾಗ ತಕ್ಷಣಕ್ಕೆ ವಕೀಲರು ಜಾಮೀನು ನೀಡಲು ಮುಂದಾಗಿ, ಅಪರಾಧ ಚಟುವಟಿಕೆ ಮುಂದುವರೆಸಲು ಅವಕಾಶ ನೀಡುತ್ತಿದ್ದರು. ಇದೀಗ ಸುಧಾಕರ್ ಮತ್ತು ಅವರ ಗ್ಯಾಂಗ್ ಪೊಲೀಸರ ಬಂಧನದಲ್ಲಿದ್ದು, ಹಲವಾರು ವರ್ಷಗಳಿಂದ ನಡೆಯುತ್ತಿರುವ ಈ ಅಪರಾಧ ಚಟುವಟಿಕೆ ಮುಕ್ತಾಯವಾಗಲಿದೆ ಎಂಬ ಭರವಸೆ ಮೂಡಿಸಿದೆ.
ಇದನ್ನೂ ಓದಿ: ಹಳಿ ತಪ್ಪಿದ ರಾಜಸ್ಥಾನಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲು