ETV Bharat / bharat

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೇಜ್ರಿವಾಲ್​​​,​ ವಾಸಕ್ಕೆ ಯಾವ ನಿವಾಸ ಆಯ್ಕೆ ಮಾಡ್ತಾರೆ?: ಹೀಗೊಂದು ಕುತೂಹಲ! - Kejriwal also choose his bungalow - KEJRIWAL ALSO CHOOSE HIS BUNGALOW

DELHI CM RESIDENCE:ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅರವಿಂದ್ ಕೇಜ್ರಿವಾಲ್, ಶೀಘ್ರದಲ್ಲೇ ಸರ್ಕಾರಿ ಬಂಗಲೆ ಖಾಲಿ ಮಾಡಲಿದ್ದಾರೆ. ಮಾಜಿ ಸಿಎಂ ಖಾಲಿ ಮಾಡಿದ ನಿವಾಸ ನೂತನ ಸಿಎಂ ಆಗಲಿರುವ ಅತಿಶಿಗೆ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದು ನಿರ್ಧಾರವಾಗಿಲ್ಲ. ಕೇಜ್ರಿವಾಲ್ ಯಾವ ನಿವಾಸದಲ್ಲಿ ಇರಲಿದ್ದಾರೆ ಎಂಬುದು ಕೂಡಾ ಗೊತ್ತಿಲ್ಲ. ಈ ಹಿಂದೆ ದಿಲ್ಲಿ ಆಳಿದ ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಹೇಳುವುದಾದರೆ, ಅವರಿಗೆ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ನಿವಾಸಗಳಿವೆ.

arvind-kejriwal-will-left-delhi-cm-residence-where-will-he-stay-now
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೇಜ್ರಿವಾಲ್​​​​ ವಾಸಕ್ಕೆ ಯಾವ ನಿವಾಸ ಆಯ್ಕೆ ಮಾಡ್ತಾರೆ? (ETV Bharat)
author img

By ETV Bharat Karnataka Team

Published : Sep 19, 2024, 5:24 PM IST

ನವದೆಹಲಿ: ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ನೀಡಿರುವ ಅರವಿಂದ್ ಕೇಜ್ರಿವಾಲ್, ತಮ್ಮ ಸರ್ಕಾರಿ ನಿವಾಸವನ್ನೂ ತೊರೆಯಲಿದ್ದಾರೆ ಎಂದು ತಿಳಿದು ಬಂದಿದೆ. ಸಿಎಂ ಅಧಿಕೃತ ನಿವಾಸ ಖಾಲಿ ಮಾಡಿದ ಬಳಿಕ ಅವರು ಎಲ್ಲಿ ವಾಸಿಸುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರಾಂತ್ಯದಲ್ಲಿ ಸಿಎಂಗೆ ವಾಸಿಸಲು ಯಾವುದೇ ಅಧಿಕೃತ ಸರ್ಕಾರಿ ನಿವಾಸವಿಲ್ಲ. ಇತರ ರಾಜ್ಯಗಳಂತೆ ಯಾವುದೇ ಸರ್ಕಾರಿ ನಿವಾಸವನ್ನು ಮಾಜಿ ಮುಖ್ಯಮಂತ್ರಿಗಳಿಗೆ ನೀಡಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅರವಿಂದ್ ಕೇಜ್ರಿವಾಲ್ ಕೂಡ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂಬುದು ಈಗಿರುವ ಕುತೂಹಲ.

ಐದು ಬಾರಿಯ ಶಾಸಕ ಮೋಹನ್​ ಸಿಂಗ್​ ಹೇಳುವುದಿಷ್ಟು: ದೆಹಲಿಯ ರಾಜಕೀಯವನ್ನು ಹತ್ತಿರದಿಂದ ಬಲ್ಲ ಮತ್ತು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮೋಹನ್ ಸಿಂಗ್ ಬಿಶ್ತ್ ಹೇಳುವ ಪ್ರಕಾರ, ದೆಹಲಿಯ ಮಾಜಿ ಮುಖ್ಯಮಂತ್ರಿಗಳು ವಿವಿಧ ಸ್ಥಳಗಳಲ್ಲಿ ವಿವಿಧ ಸರ್ಕಾರಿ ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಈ ಸಮಸ್ಯೆಯನ್ನು ಎಂದಿಗೂ ಗಂಭೀರವಾಗಿ ಪರಿಗಣಿಸಲಾಗಿಲ್ಲ. 1993 ರಲ್ಲಿ ದೆಹಲಿಯಲ್ಲಿ ವಿಧಾನಸಭೆ ರಚನೆ ಮಾಡಿದಾಗ ವಿಧಾನಸಭೆಯ ಬಳಿ ಇರುವ ಸರ್ಕಾರಿ ಬಂಗಲೆ ಸಂಖ್ಯೆ 33ರನ್ನು ಅಂದಿನ ಮುಖ್ಯಮಂತ್ರಿ ಮದನ್‌ಲಾಲ್ ಖುರಾನಾ ಅವರಿಗೆ ನೀಡಲಾಗಿತ್ತು. ಆ ನಂತರ ಮುಂದಿನ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಆ ಬಂಗಲೆಯಲ್ಲಿ ವಾಸವಾಗಿರಲಿಲ್ಲ. ಶಾಮನಾಥ್ ಮಾರ್ಗದಲ್ಲಿರುವ ಇನ್ನೊಂದು ಬಂಗಲೆಯಲ್ಲಿ ವಾಸ ಮಾಡಲು ಅವರು ಆದ್ಯತೆ ನೀಡಿದ್ರು. ಅದಕ್ಕೂ ಮೊದಲು ಸಚಿವರಾಗಿ ಈ ಸರ್ಕಾರಿ ಬಂಗಲೆಯಲ್ಲಿ ವಾಸವಾಗಿದ್ದರು.

ಶೀಲಾ ದೀಕ್ಷಿತ್​ ಇದ್ದ ಮನೆಯಲ್ಲಿ ನಿಯೋಜಿತ ಸಿಎಂ ವಾಸ: 1998 ರ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳ ಮೊದಲು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು ಆ ಎರಡು ಬಂಗಲೆಗಳಲ್ಲಿ ವಾಸಿಸುತ್ತಿರಲಿಲ್ಲ. ಸಿವಿಲ್ ಲೈನ್ಸ್​​​ ನಲ್ಲಿರುವ ದೆಹಲಿಯ ತಮ್ಮ ಸರ್ಕಾರಿ ಬಂಗಲೆಯಲ್ಲಿ ಉಳಿಯಲು ನಿರ್ಧರಿಸಿದ್ದರು. ಸುಷ್ಮಾ ಸ್ವರಾಜ್ ದೆಹಲಿಯ ಮುಖ್ಯಮಂತ್ರಿಯಾಗಿ ಕೇವಲ 53 ದಿನ ಮಾತ್ರ ಇದ್ದರು. ಅವರ ನಾಯಕತ್ವದಲ್ಲಿ ಬಿಜೆಪಿ 1998 ರ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿತ್ತು. ಆ ಬಳಿಕ, ದಿಲ್ಲಿ ರಾಜ್ಯದ ಅಧಿಕಾರದ ಗದ್ದುಗೆ ಏರುವಲ್ಲಿ ಬಿಜೆಪಿ ವಿಫಲವಾಗಿದೆ. ಸುಷ್ಮಾ ಸ್ವರಾಜ್ ನಂತರ ಶೀಲಾ ದೀಕ್ಷಿತ್ ದೆಹಲಿಯ ಎರಡನೇ ಮಹಿಳಾ ಮುಖ್ಯಮಂತ್ರಿಯಾದರು. ಶೀಲಾ ದೀಕ್ಷಿತ್ ಅವರು ತಮ್ಮ ಮೊದಲ ಅವಧಿಯಲ್ಲಿ ಮಥುರಾ ರಸ್ತೆಯಲ್ಲಿರುವ ಎಬಿ-17 ಸರ್ಕಾರಿ ಮನೆಯಲ್ಲಿ ವಾಸಿಸುತ್ತಿದ್ದರು, ಪ್ರಸ್ತುತ ಈ ಸರ್ಕಾರಿ ನಿವಾಸ, ನಿಯೋಜಿತ ಸಿಎಂ ಅತಿಶಿಗೆ ಮಂಜೂರು ಮಾಡಲಾಗಿದೆ ಮತ್ತು ಅದಕ್ಕೂ ಮೊದಲು ಮನೀಶ್ ಸಿಸೋಡಿಯಾ ಈ ನಿವಾಸದಲ್ಲಿ ಅಧಿಕೃತವಾಗಿ ವಾಸಿಸುತ್ತಿದ್ದರು.

ಅರವಿಂದ್​ ಕೇಜ್ರಿವಾಲ್​ ನಿವಾಸ ಬದಲಿಸಿದ್ದರು; 2003ರಲ್ಲಿ ಶೀಲಾ ದೀಕ್ಷಿತ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾದಾಗ ನಿವಾಸ ಬದಲಾಯಿಸಿದ್ದರು. ದೆಹಲಿಯ ಲುಟಿಯನ್ಸ್‌ನ ಮೋತಿಲಾಲ್ ನೆಹರು ಮಾರ್ಗದ ಮಥುರಾ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಅವರು 10 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ವಾಸಿಸುತ್ತಿದ್ದರು. ಶೀಲಾ ದೀಕ್ಷಿತ್ ನಂತರ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ, ಅಂದರೆ 2013 ರಲ್ಲಿ ಅವರ ಮೊದಲ ಅವಧಿಯಲ್ಲಿ ಸುಪ್ರೀಂ ಕೋರ್ಟ್ ಬಳಿಯ ತಿಲಕ್ ಲೇನ್‌ನಲ್ಲಿರುವ ಸರ್ಕಾರಿ ಫ್ಲಾಟ್ ಅನ್ನು ತೆಗೆದುಕೊಂಡರು. ಆದರೆ, ನಂತರ ಸರ್ಕಾರ ಕೇವಲ 49 ದಿನಗಳ ಕಾಲ ಆಳ್ವಿಕೆಯಲ್ಲಿತ್ತು. ನಂತರ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಫ್ಲ್ಯಾಗ್ ಸ್ಟಾಫ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸ ಪಡೆದಿದ್ದ ಕೇಜ್ರಿವಾಲ್: 2015 ರಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಫ್ಲಾಗ್ ಸ್ಟಾಫ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸವನ್ನು ಪಡೆದುಕೊಂಡಿದ್ದರು. 2015 ರಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಪೂರ್ಣ ಬಹುಮತದೊಂದಿಗೆ ಮುಖ್ಯಮಂತ್ರಿಯಾದಾಗ ಅವರು ತಾವು ವಾಸಿಸುತ್ತಿದ್ದ ಫ್ಲ್ಯಾಗ್ ಸ್ಟಾಫ್ ರಸ್ತೆಯ ಸರ್ಕಾರಿ ಮನೆ ಸಂಖ್ಯೆ 6 ಅನ್ನು ಸ್ವತಃ ಆಯ್ಕೆ ಮಾಡಿಕೊಂಡಿದ್ದರು. 2020 ರಲ್ಲಿ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿಯಾದಾಗ ಮೊದಲ 5 ವರ್ಷಗಳು ಮತ್ತು ಉಳಿದ ವರ್ಷದಲ್ಲಿ ಅವರು ಅದೇ ಸರ್ಕಾರಿ ನಿವಾಸದಲ್ಲಿ ವಾಸಿಸುತ್ತಿದ್ದರು, ಆದರೆ, ಮೂರನೇ ಅವಧಿಯಲ್ಲಿ, ಹಳೆಯ ನಿವಾಸದ ಸ್ಥಳದಲ್ಲಿ ಹೊಸ ನಿವಾಸವನ್ನು ಕಟ್ಟಲಾಯಿತು. ಈ ವಿಚಾರ ಇನ್ನೂ ತನಿಖಾ ಹಂತದಲ್ಲಿದೆ. ಇದೀಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ಆಪ್ತೆ ಅತಿಶಿ ಅವರನ್ನು ಭಾವಿ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅತಿಶಿ ಎಲ್ಲಿ ಉಳಿಯುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನು ಓದಿ: ರಾಜಸ್ಥಾನ ಆಡಳಿತಾಧಿಕಾರಿ ಸಾವು; ವೈದ್ಯಕೀಯ ನಿರ್ಲಕ್ಷ್ಯ ಎಂದ ಕುಟುಂಬ - RAS Officer Died

ಪ್ರಧಾನಿ ಮೋದಿಗೆ ಸಿಕ್ಕ ಉಡುಗೊರೆಗಳ ಹರಾಜಿನ ಹಣ 'ನಮಾಮಿ ಗಂಗೆ ಯೋಜನೆ'ಗೆ ಅರ್ಪಣೆ - PM Souvenirs Auction

ETV Bharat Logo

Copyright © 2025 Ushodaya Enterprises Pvt. Ltd., All Rights Reserved.