ಕರ್ನಾಟಕ

karnataka

ETV Bharat / snippets

ಹಾಸನ : ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿ

By ETV Bharat Karnataka Team

Published : Jul 3, 2024, 10:37 PM IST

dengue
ಡೆಂಗ್ಯೂ (ETV Bharat)

ಹಾಸನ :ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಬಾಲಕಿಯೊಬ್ಬಳು ಬಲಿಯಾಗಿರುವ ಘಟನೆ ಹೊಳೆನರಸೀಪುರ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಗಟ್ಟೇನಹಳ್ಳಿ ಗ್ರಾಮದ ಕಲಾಶ್ರೀ ಜಿ. ಎಲ್ (11) ಡೆಂಗ್ಯೂಗೆ ಬಲಿಯಾದ ಹನ್ನೊಂದು ವರ್ಷದ ಪುಟ್ಟ ಬಾಲಕಿ. ಗ್ರಾಮದ ಲೋಕೇಶ್ ಮತ್ತು ತನುಜಾ ಎಂಬುವರ ಪುತ್ರಿಯಾದ ಬಾಲಕಿಗೆ ವಾರದ ಹಿಂದೆ ಜ್ವರ ಕಾಣಿಸಿಕೊಂಡಿತ್ತು.

ಬಳಿಕ ಆಕೆಯನ್ನು ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಜ್ವರ ಹೆಚ್ಚಾದ ಹಿನ್ನೆಲೆ ಜೂ.29ರಂದು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಬಲಿಯಾಗಿದ್ದಾಳೆ. ಒಂದು ವಾರದ ಹಿಂದೆ ಇದೇ ತಾಲೂಕಿನ ವರ್ಷಿಕಾ (8) ಎಂಬ ಬಾಲಕಿ ಬಲಿಯಾಗಿದ್ದಳು. ಒಂದೇ ವಾರದಲ್ಲಿ ಡೆಂಗ್ಯೂ ಜ್ವರಕ್ಕೆ ಇಬ್ಬರು ಹೆಣ್ಣು ಮಕ್ಕಳ ಬಲಿಯಾಗಿದ್ದು, ತಾಲೂಕಿನಲ್ಲಿ ಡೆಂಗ್ಯೂ ಜ್ವರ ಉಲ್ಬಣವಾಗುತ್ತಿದೆ.

ಇದನ್ನೂ ಓದಿ :ರಾಜ್ಯದಲ್ಲಿ ಏರುಗತಿಯಲ್ಲಿ ಡೆಂಘೀ ಪ್ರಕರಣಗಳು: ಪ್ಲೇಟ್ಲೆಟ್ಸ್​​​​ಗೆ ಹೆಚ್ಚಾದ ಡಿಮ್ಯಾಂಡ್ - increased demand for platelets

ABOUT THE AUTHOR

...view details