ಕರ್ನಾಟಕ

karnataka

ಧಾರವಾಡ: ನಕಲಿ ವೈದ್ಯನ ವಿರುದ್ಧ ಎಫ್​ಐಆರ್, ಕ್ಲಿನಿಕ್ ಸೀಜ್

By ETV Bharat Karnataka Team

Published : Jul 12, 2024, 10:02 AM IST

FIR against fake doctor  DHO  clinic seized  Dharwad
ಧಾರವಾಡದಲ್ಲಿ ನಕಲಿ ವೈದ್ಯರ ಹಾವಳಿ (EVT Bharat)

ಧಾರವಾಡ:ನಕಲಿ ವೈದ್ಯರು ಮತ್ತು ಅನಧಿಕೃತ ಆಸ್ಪತ್ರೆಗಳ ವಿರುದ್ಧ ಜಿಲ್ಲಾ ಆರೋಗ್ಯ ಇಲಾಖೆ ತಪಾಸಣೆ ಹಾಗೂ ಕಾನೂನು ಕ್ರಮ ಆರಂಭಿಸಿದೆ. ಧಾರವಾಡ ತಾಲೂಕಿನ ತೇಗೂರ ಗ್ರಾಮದಲ್ಲಿ ನಕಲಿ ವೈದ್ಯನೋರ್ವನನ್ನು ಪತ್ತೆ ಹಚ್ಚಿ, ಎಫ್ಐ​ಆರ್ ದಾಖಲಿಸಿದ್ದಾರೆ.

ಡಿಎಚ್ಒ ಡಾ.ಶಶಿ ಪಾಟೀಲ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಡಾ.ತನುಜಾ ಕೆ.ಎನ್. ನೇತೃತ್ವದಲ್ಲಿ ಇಲಾಖೆ ಸಿಬ್ಬಂದಿಯ ತಂಡ ಯಾವುದೇ ವೈದ್ಯಕೀಯ ಪ್ರಮಾಣಪತ್ರ ಮತ್ತು ವ್ಯಾಸಂಗ ಮಾಡದೇ, ತೇಗೂರ ಗ್ರಾಮದಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿರುವ ಮಂಜುನಾಥ ಇಳಿಗೇರ ಎಂಬವರ ಕ್ಲಿನಿಕ್ ಮೇಲೆ ದಾಳಿ ಮಾಡಿ, ಕೆಪಿಎಂಇ ಕಾಯ್ದೆ ಸೆಕ್ಷನ್ 19 ಪ್ರಕಾರ ಎಫ್ಐ‍​ಆರ್ ದಾಖಲಿಸಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಶಿ ಪಾಟೀಲ, ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು ಎಂದು ಸೂಚಿಸಿದರು.

ಇದನ್ನೂ ಓದಿ:ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ED ವಶಕ್ಕೆ - ED Detained B Nagendra

ABOUT THE AUTHOR

...view details