ETV Bharat / bharat

ರಾಮ ಮಂದಿರ ಟ್ರಸ್ಟ್​​ ಅಧ್ಯಕ್ಷ ಮಹಂತ್​ ನೃತ್ಯ ಗೋಪಾಲ್​ ದಾಸ್​ ಆರೋಗ್ಯ ಗಂಭೀರ - Mahant Gopal Das Hospitalised - MAHANT GOPAL DAS HOSPITALISED

ಮಹಂತ್​ ನೃತ್ಯ ಗೋಪಾಲ್​ ದಾಸ್ ಅವರು ಭಾನುವಾರ ಸಂಜೆ ಅಸ್ವಸ್ಥಗೊಂಡಿದ್ದು ಮೆದಾಂತ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ram-mandir-trust-chief-mahant-nritya-gopal-das-hospitalised-condition-critical
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಂತ್​ ನೃತ್ಯ ಗೋಪಾಲ್​ ದಾಸ್ (ETV Bharat)
author img

By PTI

Published : Sep 9, 2024, 1:45 PM IST

ಲಕ್ನೋ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ ಅಧ್ಯಕ್ಷರಾಗಿರುವ ಮಹಂತ್​ ನೃತ್ಯ ಗೋಪಾಲ್​ ದಾಸ್​ ಅವರು ಭಾನುವಾರ ಸಂಜೆ ದಿಢೀರ್​​ ಅನಾರೋಗ್ಯ ಪರಿಸ್ಥಿತಿಗೆ ಒಳಗಾಗಿದ್ದು, ಇಲ್ಲಿನ ಮೆದಾಂತ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು, ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ

ಮೂತ್ರ ಸಮಸ್ಯೆಯ ಜೊತೆಗೆ ಕಡಿಮೆ ಆಹಾರ ಸೇವನೆಯಿಂದಾಗಿ ಅನಾರೋಗ್ಯಗೊಂಡಿದ್ದಾರೆ ಎಂದು ಆಸ್ಪತ್ರೆ ಬಿಡುಗಡೆ ಮಾಡಿರುವ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

86 ವರ್ಷದ ಮಹಂತ್​ ಆಗಸ್ಟ್​ 24ರಂದು ಕೃಷ್ಣ ಜನ್ಮಾಷ್ಟಮಿ ಆಚರಣೆಗಾಗಿ ಅಯೋಧ್ಯೆಯಿಂದ ಮಥುರಾಕ್ಕೆ ತೆರಳಿದ್ದರು. ಇದಾದ ಬಳಿಕ ಭಕ್ತರನ್ನು ನೋಡಲು ಗ್ವಾಲಿಯರ್​ಗೆ ಆಗಮಿಸಿದ್ದರು. ಅಲ್ಲಿ ಅನಾರೋಗ್ಯಕ್ಕೆ ತುತ್ತಾದ ಅವರು ಗ್ವಾಲಿಯರ್​ನಲ್ಲಿ ಚಿಕಿತ್ಸೆ ಪಡೆದಿದ್ದರು. ಇದಾದ ಬಳಿಕ ಅವರು ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮೆದಾಂತ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಿದ್ದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿರಲಿಲ್ಲ.

ನೃತ್ಯ ಗೋಪಾಲ್​ ದಾಸ್ ಕುರಿತು​..: 1938ರ ಜೂನ್​ 11ರಂದು ಮಥುರಾದಲ್ಲಿ ಮಹಂತ್​ ನೃತ್ಯ ಗೋಪಾಲ್​ ದಾಸ್​ ಜನಿಸಿದರು. ಹಲವು ದಶಕಗಳ ಕಾಲ ರಾಮ ಜನ್ಮಭೂಮಿ ಆಂದೋಲನದಲ್ಲಿ ಭಾಗಿಯಾಗಿದ್ದರು. 2001ರಲ್ಲಿ ಇವರ ಮೇಲೆ ಬಾಂಬ್​ ದಾಳಿ ನಡೆಸಲಾಗಿತ್ತು. ಅದೃಷ್ಟವಶಾತ್​ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದರು. 2003ರಲ್ಲಿ ಮತ್ತೆ ರಾಮ ಜನ್ಮಭೂಮಿ ನ್ಯಾಸ್​​ನ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.

ಇದನ್ನೂ: ಕನ್ನಡದಲ್ಲಿ ಬರಲಿದೆ ಅಯೋಧ್ಯೆ ರಾಮ ಮಂದಿರ ಕುರಿತ ಬಯೋಪಿಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.