ದೇವನಹಳ್ಳಿ:ಜಪಾನ್ ರಾಜಧಾನಿ ಟೋಕಿಯೊ ಮತ್ತು ಸಿಲಿಕಾನ್ ಸಿಟಿ ಬೆಂಗಳೂರು ನಡುವೆ ವಿಮಾನ ಸಂಚಾರವಿದ್ದು, ಜನದಟ್ಟಣೆ ಹಿನ್ನೆಲೆಯಲ್ಲಿ ಬೆಂಗಳೂರು - ಟೋಕಿಯೊ ನಡುವೆ ವಾರಕ್ಕೆ 5 ಬಾರಿ ವಿಮಾನ ಹಾರಾಟ ನಡೆಸಲಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಮತ್ತು ಜಪಾನ್ ಏರ್ ಲೈನ್ಸ್ (ಜೆಎಎಲ್) ತಿಳಿಸಿದೆ. ಈ ಹಿಂದೆ ಬೆಂಗಳೂರು ಮತ್ತು ಟೋಕಿಯೊ ನಡುವೆ ವಾರಕ್ಕೆ ಮೂರು ಬಾರಿ ವಿಮಾನ ಸಂಚಾರ ಇದ್ದು, ಅಕ್ಟೋಬರ್ ಕೊನೆಯ ವಾರದಿಂದ ವಾರಕ್ಕೆ ಐದು ಬಾರಿ ವಿಮಾನ ಸಂಚಾರ ಆರಂಭವಾಗಲಿದೆ.
ಬೆಂಗಳೂರು - ಟೋಕಿಯೋ ನಡುವೆ ವಾರಕ್ಕೆ 5 ಬಾರಿ ವಿಮಾನ ಸಂಚಾರ
ಬೆಂಗಳೂರು-ಟೋಕಿಯೋ ನಡುವೆ ವಾರಕ್ಕೆ 5 ಬಾರಿ ವಿಮಾನ ಸಂಚಾರ (ETV Bharat)
Published : Aug 26, 2024, 10:54 AM IST
ಬಿಐಎಎಲ್ ಕಾರ್ಯ ನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಮಾತನಾಡಿ, 2020ರ ಏಪ್ರಿಲ್ 12 ರಂದು ಜಪಾನ್ ಏರ್ ಲೈನ್ಸ್ ಬೆಂಗಳೂರಿಗೆ ವಿಮಾನ ಸಂಚಾರ ಆರಂಭಿಸಿತು. ಕಳೆದ ನಾಲ್ಕು ವರ್ಷಗಳಲ್ಲಿ ಜಪಾನ್ ಮತ್ತು ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. 2022ರಲ್ಲಿ 23,532 ಪ್ರಯಾಣಿಕರು ಸಂಚರಿಸಿದ್ದಾರೆ. ಈ ಹಿನ್ನೆಲೆ ವಾರಕ್ಕೆ 5 ವಿಮಾನ ಸಂಚಾರ ಪ್ರಾರಂಭಿಸಲಾಗುತ್ತಿದೆ ಎಂದರು.