ತುಮಕೂರು: ಇತ್ತೀಚೆಗೆ ನಾಪತ್ತೆಯಾಗಿದ್ದ ತಾಯಿ ಮತ್ತು ಮಗನ ಶವ ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದ ಕೆರೆಯಲ್ಲಿ ಪತ್ತೆಯಾಗಿದೆ.
ಶಶಿಕಲಾ (30) ಹಾಗೂ 6 ವರ್ಷದ ಬಾಲಕ ಮೃತರು. ಒರಗೆರೆಹಳ್ಳಿ ಗ್ರಾಮದವರಾದ ಶಶಿಕಲಾ, ಕಳೆದ ಮೂರು ದಿನಗಳಿಂದ ಮಗನ ಜೊತೆ ನಾಪತ್ತೆಯಾಗಿದ್ದರು. ಈ ಕುರಿತು ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಶಶಿಕಲಾ ಅವರ ಸಹೋದರ ನಾಪತ್ತೆ ದೂರು ದಾಖಲಿಸಿದ್ದರು. ಇಂದು ಬೆಳಿಗ್ಗೆ ತುರುವೇಕೆರೆ ಕೆರೆಯಲ್ಲಿ ಇಬ್ಬರ ಶವ ದೊರೆತಿದೆ. ಡೆತ್ನೋಟ್ ಸಿಕ್ಕಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
"ನನ್ನ ಸಾವಿಗೆ ಯಾರೂ ಕಾರಣರಲ್ಲ. ಕ್ಷಮಿಸಿ ಅಣ್ಣ, ನನ್ನನ್ನು ಅಪ್ಪ ಅಮ್ಮನ ಜಾಗದಲ್ಲೇ ಮಣ್ಣು ಮಾಡಿ" ಎಂದು ಡೆತ್ನೋಟ್ ಬರೆದಿದ್ದಾರೆ.
ಸ್ಥಳಕ್ಕೆ ತುರುವೇಕೆರೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: "ಬುಜ್ಜಿ ಐ ಮಿಸ್ ಯೂ.." ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ