ETV Bharat / entertainment

'ನರಸಿಂಹ' ಸಿನಿಮಾ ಘೋಷಿಸಿದ ಕೆಜಿಎಫ್​ ಮೇಕರ್​ ಹೊಂಬಾಳೆ ಫಿಲ್ಮ್ಸ್: ನಟ ಯಾರು? ಮೋಷನ್​ ಪೋಸ್ಟರ್ ನೋಡಿ

ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್​​​ ಇಂದು ಪ್ಯಾನ್​ ಇಂಡಿಯಾ ಮಹಾವತಾರ್​ 'ನರಸಿಂಹ' ಎಂಬ ಅನಿಮೇಟೆಡ್​ ಸಿನಿಮಾವನ್ನು ಘೋಷಿಸಿ ಫಸ್ಟ್​ ಲುಕ್​ ಅನಾವರಣಗೊಳಿಸಿದ್ದಾರೆ.

'Mahavatar Narsimha' Poster
ಮಹಾವತಾರ್ 'ನರಸಿಂಹ' ಪೋಸ್ಟರ್ (Photo: Film Poster)
author img

By ETV Bharat Entertainment Team

Published : 2 hours ago

ಭಾರತೀಯ ಚಿತ್ರರಂಗದ ಬ್ಲಾಕ್​ಬಸ್ಟರ್​ ಕೆಜಿಎಫ್​ 1, ಕೆಜಿಎಫ್​ 2, ಕಾಂತಾರ, ಸಲಾರ್​​ನಂತಹ ಸಿನಿಮಾಗಳ ಸೂತ್ರಧಾರ 'ಹೊಂಬಾಳೆ ಫಿಲ್ಮ್ಸ್​'ನಿಂದ ಹೊಸ ಪ್ರಾಜೆಕ್ಟ್​​​ ಘೋಷಣೆಯಾಗಿದೆ. ದಕ್ಷಿಣ ಚಿತ್ರರಂಗದಲ್ಲೇ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಹೊಂಬಾಳೆ ಫಿಲ್ಮ್​​​ ಇಂದು ಪ್ಯಾನ್​ ಇಂಡಿಯಾ ಸಿನಿಮಾವನ್ನು ಘೋಷಿಸಿದ್ದಾರೆ. ಜೊತೆಗೆ ಫಸ್ಟ್​​ ಲುಕ್​ ಕೂಡಾ ಅನಾವರಣಗೊಂಡಿದೆ.

ಕೆಲ ದಿನಗಳ ಹಿಂದಷ್ಟೇ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​​ ಅವರ ಜೊತೆಗೆ 3 ಸಿನಿಮಾಗಳನ್ನು ಅನೌನ್ಸ್​ ಮಾಡಿದ್ದ ಜನಪ್ರಿಯ ಚಲನಚಿತ್ರ ನಿರ್ಮಾಣ ಸಂಸ್ಥೆಯೀಗ ಒಂದು ಅನಿಮೇಟೆಡ್​ ಸಿನಿಮಾದ ಫಸ್ಟ್​ ಲುಕ್​ ಅನಾವರಣಗೊಳಿಸಿದೆ. ಈ ಮೂಲಕ ಸಿನಿಪ್ರಿಯರಿಗೆ ಭರ್ಜರಿ ಟ್ರೀಟ್​ ನೀಡಿದೆ.

''ನಂಬಿಕೆಗೆ ಸವಾಲು ಎದುರಾದಾಗ, ಅವನು ಕಾಣಿಸಿಕೊಳ್ಳುತ್ತಾನೆ. ಕತ್ತಲು ಮತ್ತು ಅವ್ಯವಸ್ಥೆಯಿಂದ ಛಿದ್ರಗೊಂಡ ಜಗತ್ತಿನಲ್ಲಿ. ಲೆಜೆಂಡ್, ಹಾಫ್​ ಮ್ಯಾನ್​​, ಹಾಫ್​ ಲಯನ್​ ಅವತಾರ್​ ಭಗವಾನ್ ವಿಷ್ಣುವಿನ ಅತ್ಯಂತ ಶಕ್ತಿಶಾಲಿ ಅವತಾರಕ್ಕೆ ಸಾಕ್ಷಿಯಾಗಿ'' - ಹೊಂಬಾಳೆ ಫಿಲ್ಮ್ಸ್.

ಅನಿಮೇಟೆಡ್​ ಫಿಲ್ಮ್ಸ್​​ನ ಟೈಟಲ್​​ ಮಹಾವತಾರ್​ 'ನರಸಿಂಹ'. ಅಶ್ವಿನ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ನಿರ್ದೇಶನದ ಜೊತೆಗೆ ಸ್ಕ್ರೀನ್​ಪ್ಲೇ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಮೂಡಿಬರಲಿದೆ. ಪ್ಯಾನ್​ ಇಂಡಿಯಾ ಚಿತ್ರವನ್ನು ಶಿಲ್ಪಾ ಧವನ್​, ಕುಶಾಲ್​ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಾಣ ಮಾಡಲಿದ್ದಾರೆ. ಸ್ಯಾಮ್​ ಸಿಎಸ್ ಸಂಗೀತವಿರಲಿದೆ.​​ ಕ್ಲೀಮ್​ ಪ್ರೊಡಕ್ಷನ್​​ ನಿರ್ಮಾಣ ಮಾಡುತ್ತಿದ್ದು, ಹೊಂಬಾಳೆ ಫಿಲ್ಮ್ ಈ ಅನಿಮೇಟೆಡ್​​ ಸಿನಿಮಾವನ್ನು ಪ್ರಸ್ತುತಪಡಿಸಲಿದೆ.

ಹೊಂಬಾಳೆ ಫಿಲ್ಮ್ಸ್​​ ಈಗ ಬಹುಭಾಷಾ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಕೆಜಿಎಫ್‌ 1, ಕೆಜಿಎಫ್‌ 2, ಕಾಂತಾರ, ಸಲಾರ್‌, ಇತ್ತೀಚೆಗೆ ಬಿಡುಗಡೆ ಆಗಿರುವ 'ಬಘೀರ' ಸಿನಿಮಾಳು ಸಂಸ್ಥೆಯ ಯಶಸ್ಸಿಗೆ ಹಿಡಿದ ಕೈಗನ್ನಡಿ. ಪ್ಯಾನ್‌ ಇಂಡಿಯಾ ಸಿನಿಮಾಗಳಿಗೆ ಹೊಸ ಮೆರುಗು ನೀಡಿದ್ದೂ ಕೂಡಾ ಇದೇ ಹೊಂಬಾಳೆ ಫಿಲ್ಮ್ಸ್. ಕಾಂತಾರ ಮೂಲಕ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದೆ. ಅದರಂತೆ ಈವರೆಗೆ ಬಂದ ಸಿನಿಮಾಗಳು ಕೇವಲ ಒಂದು ಭಾಷೆಗೆ ಸೀಮಿತವಾಗಿಲ್ಲ. ಎಲ್ಲಾ ಭಾಷೆಗಳೆಗೂ ಸಲ್ಲುವ ಸಿನಿಮಾಗಳನ್ನು ನೀಡುತ್ತಾ ಬಂದಿದೆ. ಅದರಂತೆ, ಸಲಾರ್‌ ಪಾರ್ಟ್‌ 2 ಮತ್ತು ಕಾಂತಾರ ಪಾರ್ಟ್‌ 2 ಶೂಟಿಂಗ್‌ ನಡುವೆಯೇ ಇದೀಗ ಮತ್ತೊಂದು ಮಹೋನ್ನತ ಸಿನಿಮಾ ಬಗ್ಗೆ ದೊಡ್ಡ ಅಪ್ಡೇಟ್​ ನೀಡಿದೆ ಹೊಂಬಾಳೆ ಫಿಲ್ಮ್ಸ್​​.

ಇದನ್ನೂ ಓದಿ: ಸೂಪರ್​ಸ್ಟಾರ್​ ಧನುಷ್​ ವಿರುದ್ಧ ಲೇಡಿ ಸೂಪರ್​ಸ್ಟಾರ್ ನಯನತಾರಾ ಬಹಿರಂಗ ವಾಗ್ದಾಳಿ

ಸಲಾರ್‌ ಪಾರ್ಟ್‌ 2 ಸೇರಿ ಇನ್ನೂ 2 ಅಂದರೆ ಒಟ್ಟು 3 ಸಿನಿಮಾಗಳನ್ನು ಇತ್ತೀಚೆಗಷ್ಟೇ ಘೋಷಿಸಿದ್ದರು. ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆಗೆ ಹೊಂಬಾಳೆ ಫಿಲ್ಮ್ಸ್​​ ಕೈ ಜೋಡಿಸಿದೆ. ಈಗಾಗಲೇ ಸಲಾರ್‌ 1 ಬಿಡುಗಡೆ ಆಗಿದೆ. ಪಾರ್ಟ್‌ 2 ಕೆಲಸಗಳು ಸಾಗಿದೆ. ಪ್ರಭಾಸ್‌ ಜತೆಗೆ ಇನ್ನೂ ಎರಡು ಸಿನಿಮಾ ಮಾಡಲು ಹೊಂಬಾಳೆ ಫಿಲ್ಮ್ಸ್​​ ನಿರ್ಧರಿಸಿದೆ. ದೊಡ್ಡ ಪರದೆಯ ಮೇಲೆ ಅಷ್ಟೇ ದೊಡ್ಡ ಮಟ್ಟದ ಸದ್ದು ಮಾಡಲು ಈ ಜೋಡಿ ಮತ್ತೆ ಸಜ್ಜಾಗಿದೆ. ಬಹುಕೋಟಿ ಬಜೆಟ್‌ನಲ್ಲಿ, ಅದ್ಧೂರಿ ಮೇಕಿಂಗ್​ನಲ್ಲಿ ಈ ಸಿನಿಮಾಗಳು ನಿರ್ಮಾಣವಾಗಲಿವೆ.

ಇದನ್ನೂ ಓದಿ: 'ಪುಷ್ಪ 2'ಕ್ಕೆ ಅಲ್ಲು ಅರ್ಜುನ್ ಪಡೆದಿದ್ದು 300 ಕೋಟಿ: ಅತಿ ಹೆಚ್ಚು ಸಂಭಾವನೆ ಗಳಿಸುವ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ

ಸದ್ಯ ಹೊಂಬಾಳೆ ಫಿಲ್ಮ್ಸ್​​ನಿಂದ ಹೊಸ ಅನಿಮೇಟೆಡ್ ಸಿನಿಮಾ ಘೋಷಣೆಯಾಗಿದೆ. ಆದ್ರೆ ಇದು ಪ್ರಭಾಸ್​ ಅವರ ಸಿನಿಮಾವೇ? ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿತ್ತು. ಹೆಚ್ಚಿನವರು ಮಹಾವತಾರ್​ 'ನರಸಿಂಹ' ಪ್ರಭಾಸ್​ ಅವರ ಸಿನಿಮಾ ಎಂದೇ ಭಾವಿಸಿದ್ದಾರೆ. ನಿರ್ದೇಶಕರು, ನಿರ್ಮಾಪಕರ ಹೆಸರು ಘೋಷಣೆಯಾಗಿದ್ದು, ಉಳಿದ ಅನೌನ್ಸ್​ಮೆಂಟ್​ಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.