ಕರ್ನಾಟಕ

karnataka

ETV Bharat / snippets

ಉಳ್ಳಾಲ ಬೀಚ್​ಗೆ ವಿಹಾರಕ್ಕೆ ಬಂದ ಮಹಿಳೆ ಸಮುದ್ರಪಾಲು: ಮೂವರ ರಕ್ಷಣೆ

woman drowns at ullal beach
ಸಮುದ್ರ ತೀರ (ETV Bharat File)

By ETV Bharat Karnataka Team

Published : Jun 12, 2024, 1:29 PM IST

ಉಳ್ಳಾಲ (ದಕ್ಷಿಣಕನ್ನಡ):ಇಲ್ಲಿನ ಬೀಚ್​ಗೆ ವಿಹಾರಕ್ಕೆಂದು ಬಂದಿದ್ದ ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬರು ಸಮುದ್ರಪಾಲಾಗಿದ್ದು, ಇನ್ನುಳಿದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ‌. ಆಂಧ್ರಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿ ಪಿ.ಎಲ್. ಪ್ರಸನ್ನ ಎಂಬುವರ ಪತ್ನಿ ಪರಿಮಿ ರತ್ನ ಕುಮಾರಿ (57) ಸಾವನ್ನಪ್ಪಿದವರು.

ಉಳ್ಳಾಲ ಬೀಚ್​ನಲ್ಲಿ ವಿಹರಿಸುತ್ತಿದ್ದ ಸಂದರ್ಭ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿ ನಾಲ್ವರು ಮಹಿಳೆಯರನ್ನು ಎಳೆದೊಯ್ದಿತ್ತು. ತಕ್ಷಣ ನಾಲ್ವರನ್ನೂ ಸ್ಥಳೀಯರು ಸಮುದ್ರದಿಂದ ಹೊರಗೆಳೆದು ರಕ್ಷಿಸಿದ್ದಾರೆ. ಈ ಪೈಕಿ ಪರಿಮಿ ರತ್ನ ಕುಮಾರಿ ಪ್ರಜ್ಞೆ ತಪ್ಪಿದ್ದ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ಅದಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು.

ಹೈದರಾಬಾದ್​​ನಿಂದ ಐವರು ಮಹಿಳೆಯರ ತಂಡ ಜೂನ್​​ 6ರಂದು ಮೈಸೂರಿಗೆ ವಿಮಾನದ ಮೂಲಕ ಬಂದಿಳಿದಿತ್ತು. ಅಲ್ಲಿ ಪ್ರವಾಸ ಮುಗಿಸಿದ ಬಳಿಕ ಜೂನ್​ 7ರಂದು ಕೊಡಗಿಗೆ ತೆರಳಿದ್ದರು. ತದನಂತರ ಜೂನ್​ 9ರಂದು ಸುಬ್ರಹ್ಮಣ್ಯ ಕ್ಷೇತ್ರದ ದರ್ಶನ ಮುಗಿಸಿ, ನಿನ್ನೆಯಷ್ಟೇ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಉಳ್ಳಾಲ ಸಮುದ್ರತೀರಕ್ಕೆ ವಿಹಾರಕ್ಕೆಂದು ಬಂದಿದ್ದರು.

ABOUT THE AUTHOR

...view details