ಕರ್ನಾಟಕ

karnataka

ಪ್ಯಾನ್ ಇಂಡಿಯಾಕ್ಕೆ ಮತ್ತೊಬ್ಬ ಸ್ಟಾರ್ ಹೀರೋ ಎಂಟ್ರಿ ; ಯಾರು ಗೊತ್ತಾ ಅವರು?

By ETV Bharat Karnataka Team

Published : Jun 22, 2024, 7:05 AM IST

mega-hero-sai-dharam-tej-announces-his-first-pan-india-movie
ಪ್ಯಾನ್ ಇಂಡಿಯಾಕ್ಕೆ ಮತ್ತೊಬ್ಬ ಸ್ಟಾರ್ ಹೀರೋ ಎಂಟ್ರಿ - ಅವರು ಯಾರು ಗೊತ್ತಾ? (Pan India Movie (Source: Getty Images))

ಮೆಗಾಹೀರೋ ಸಾಯಿ ಧರಮ್ ತೇಜ್, ಪ್ಯಾನ್ ಇಂಡಿಯಾ ಚಿತ್ರ ಜಗತ್ತನ್ನು ಪ್ರವೇಶಿಸಲಿದ್ದಾರೆ. ಈ ವಿಷಯವನ್ನು ಸ್ವತಃ ತೇಜ್ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್​ ತುಂಬಾ ವಿಶೇಷವಾಗಿದೆ. ನಿಮ್ಮೆಲ್ಲರ ಆಶೀರ್ವಾದ ಬೇಕು' ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಚಿತ್ರವನ್ನು ರೋಹಿತ್ ಕೆಪಿ ನಿರ್ದೇಶಿಸಿದ್ದಾರೆ ಮತ್ತು ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿ ನಿರಂಜನ್ ರೆಡ್ಡಿ ನಿರ್ಮಿಸಿದ್ದಾರೆ. ಈ ಚಿತ್ರವು 'SDT 18' ಎಂಬ ಯೋಜನೆಯ ಶೀರ್ಷಿಕೆಯೊಂದಿಗೆ ಪ್ರಾರಂಭವಾಗಲಿದೆ.

ಏತನ್ಮಧ್ಯೆ, ತೇಜ್ ಈಗಾಗಲೇ ಬ್ಯಾಕ್ ಟು ಬ್ಯಾಕ್ 100 ಕೋಟಿ ರೂ.ಗಳ ಕಲೆಕ್ಷನ್ ಸಿನಿಮಾಗಳೊಂದಿಗೆ ಫುಲ್ ಸ್ವಿಂಗ್ ನಲ್ಲಿದ್ದಾರೆ. ಕಳೆದ ವರ್ಷ ತೆರೆಕಂಡ 'ವಿರೂಪಾಕ್ಷ' ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದರೆ, 'ಬ್ರೋ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರತಿಭೆ ತೋರಲು ಹೊರಟಿರುವ ತೇಜ್ ಗೆ ಮೆಗಾ ಫ್ಯಾನ್ಸ್​​ ಅಭಿನಂದಿಸುತ್ತಿದ್ದಾರೆ.

ABOUT THE AUTHOR

...view details